ಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 29: ಬಹು ನಿರೀಕ್ಷಿತ ಅಖಿಲ ಭಾರತ ಹುಲಿ ಗಣತಿ 2018 ಅಂದಾಜು ಲೆಕ್ಕವನ್ನು ಪ್ರಧಾನಿ ಮೋದಿ ಅವರು ಸೋಮವಾರದಂದು ಪ್ರಕಟಿಸಿದ್ದಾರೆ.
"ಇತ್ತೀಚಿನ ಹುಲಿ ಗಣತಿಯಂತೆ ಭಾರತ ಹುಲಿಗಳಿಗೆ ಸುರಕ್ಷಿತ ತಾಣ ಎಂಬುದು ಸ್ಪಷ್ಟವಾಗುತ್ತದೆ, 2010ರಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು, 2022ರಲ್ಲಿ ಗುರಿಯನ್ನು ಮುಟ್ಟಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾಲ್ಕು ವರ್ಷಗಳ ಹುಲಿ ಗಣತಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಮೋದಿ, "9 ವರ್ಷಗಳ ಹಿಂದೆ ಸೇಂಟ್ ಪೀಟರ್ಸ್ಬರ್ಗ್ ನಲ್ಲಿ ಆಯಾ ದೇಶದಲ್ಲಿರುವ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು. ಈ ಗುರಿಯನ್ನು ನಾವು ಕೇವಲ ನಾಲ್ಕು ವರ್ಷಗಳಲ್ಲಿ ಸಾಧಿಸಿದ್ದೇವೆ" ಎಂದರು. ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಣಾ ವಿಭಾಗಕ್ಕೆ ಈ ಬಾರಿಯ ಪ್ರಶಸ್ತಿಯನ್ನು ಮೋದಿ ಅವರು ಪ್ರದಾನ ಮಾಡಿದ್ದಾರೆ.

ಭಾರತದಲ್ಲಿ 2967 ಹುಲಿಗಳಿವೆ
ಜಗತ್ತಿನ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಭಾರತದಲ್ಲೇ ಶೇಕಡಾ 57 ರಷ್ಟಿದೆ. ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಒಟ್ಟು 3,890 ಹುಲಿಗಳದ್ದು ಇವುಗಳ ಪೈಕಿ ಭಾರತದಲ್ಲಿ 2967 ಹುಲಿಗಳಿವೆ.
ಭಾರತದಲ್ಲಿ 2006ರಲ್ಲಿ 1,411 ಹುಲಿ, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಹುಲಿಗಳಿರುವುದು ಪತ್ತೆಯಾಗಿವೆ. ಅಂದಾಜು 3 ಸಾವಿರ ಹುಲಿಗಳಿಗೆ ಭಾರತದ ಅರಣ್ಯಗಳು ಆಶ್ರಮ ಒದಗಿಸಿವೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಮಧ್ಯಪ್ರದೇಶ "ಟೈಗರ್ ರಾಜ್ಯ"
ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಒಟ್ಟು 3,890 ಹುಲಿಗಳದ್ದು ಇವುಗಳ ಪೈಕಿ ಭಾರತದಲ್ಲಿ 2,967 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ಅಗ್ರಸ್ಥಾನಕ್ಕೇರಿದೆ. ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 524ಹುಲಿಗಳಿದ್ದು, ಕಡಿಮೆ ಅಂತರದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. 442 ಹುಲಿಗಳೊಂದಿಗೆ ಉತ್ತರಾಖಂಡ್ ಮೂರನೇ ಸ್ಥಾನದಲ್ಲಿದೆ.

2014ರಲ್ಲಿ ಕರ್ನಾಟಕದಲ್ಲಿ 406 ಹುಲಿ
ಕಳೆದ ಗಣತಿಯಲ್ಲಿ 2014ರಲ್ಲಿ ಕರ್ನಾಟಕ 406 ಹುಲಿಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಮಧ್ಯಪ್ರದೇಶ 308 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಉತ್ತರಾಖಂಡ್ 340 ಹುಲಿ ಹಾಗೂ ತಮಿಳುನಾಡು 229 ಹುಲಿಗಳನ್ನು ಹೊಂದಿದ್ದವು.

ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ
ಹುಲಿ ಗಣತಿ: ನಾಲ್ಕು ವರ್ಷಗಳಿಗೊಮ್ಮೆ ಸುಮಾರು 10 ಕೋಟಿ ರು ವೆಚ್ಚದಲ್ಲಿ 40,000ಕ್ಕೂ ಅಧಿಕ ಅರಣ್ಯ ಸಿಬ್ಬಂದಿ, 4,00,000 ಚದರ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು, 26, 838 ಕ್ಯಾಮೆರಾ ಟ್ರ್ಯಾಪ್ ಮೂಲಕ ಪತ್ತೆ ಹಚ್ಚಿ, ಅಂದಾಜು ಲೆಕ್ಕ ಹಾಕಿ ವರದಿ ತಯಾರಿಸುತ್ತಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications