ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

|
Google Oneindia Kannada News

ನವದೆಹಲಿ, ಆಗಸ್ಟ್ 1: ಭಾರತವು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸರಾಸರಿ ಪ್ರಮಾಣದ ಮಳೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಕೃಷಿಯನ್ನು ಅವಲಂಬಿಸಿರುವ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಪ್ರಮುಖ ಪಾಲುದಾರನಾಗಿರುವ ಕೃಷಿ ಕ್ಷೇತ್ರದಲ್ಲಿ ಉತ್ತಮ ಇಳುವರಿ ಬರುವ ಸೂಚನೆ ನೀಡಿದೆ.

ಭಾರತ ಹವಾಮಾನ ಇಲಾಖೆ (IMD) ಜೂನ್‌ನಿಂದ ಪ್ರಾರಂಭವಾಗುವ ನಾಲ್ಕು ತಿಂಗಳ ಋತುವಿನಲ್ಲಿ 50 ವರ್ಷಗಳ ಸರಾಸರಿ 89 ಸೆಂಟಿ ಮೀಟರ್, ಶೇಕಡ 96 ಮತ್ತು ಶೇಕಡ 104ರ ನಡುವೆ ಸರಾಸರಿ ಅಥವಾ ಸಾಮಾನ್ಯ ಮಳೆಯಾಗುತ್ತದೆ ಎಂದು ಹೇಳಿದೆ.

ಭಾರೀ ಮಳೆ ಮುನ್ಸೂಚನೆ; ಜಾಗ್ರತೆ ವಹಿಸಲು ಮುಖ್ಯಮಂತ್ರಿಗಳ ಸೂಚನೆಭಾರೀ ಮಳೆ ಮುನ್ಸೂಚನೆ; ಜಾಗ್ರತೆ ವಹಿಸಲು ಮುಖ್ಯಮಂತ್ರಿಗಳ ಸೂಚನೆ

ಆದರೆ ಭಾರತದ ಪೂರ್ವ ಭಾಗದಲ್ಲಿ ಕೆಲವು ಭತ್ತ ಬೆಳೆಯುವ ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ಮಾನ್ಸೂನ್ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತು ಮಾಡುವ ದೇಶವಾಗಿದೆ. ಏಷ್ಯಾ ಖಂಡದಲ್ಲಿ ಭತ್ತ ಬೆಳೆಯುವ ಪ್ರಮುಖ ರಾಷ್ಟ್ರವಾಗಿದೆ. ದೇಶದ ಒಟ್ಟಾರೆ ಭತ್ತದ ಇಳುವರಿಯನ್ನು ಮಾನ್ಸೂನ್ ಮಳೆ ನಿರ್ಧರಿಸುತ್ತದೆ.

 ಭತ್ತ ಬೆಳೆಯುವ ರಾಜ್ಯಗಳಲ್ಲಿ ಮುಂಗಾರು ಕೊರತೆ

ಭತ್ತ ಬೆಳೆಯುವ ರಾಜ್ಯಗಳಲ್ಲಿ ಮುಂಗಾರು ಕೊರತೆ

ಉತ್ತಮ ಉತ್ಪಾದನೆಯು ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತವು ತನ್ನ ಪ್ರಮುಖ ಸ್ಥಾನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಕಡಿಮೆ ಅಥವಾ ಅಕಾಲಿಕ ಮಳೆ ಭತ್ತದ ಇಳುವರಿಯ ಮೇಲೆ ಪರಿಣಾಮ ಬೀರಬಹುದು.
ಭಾರತದಲ್ಲಿ ಭತ್ತ ಬೆಳೆಯುವ ಪ್ರಮುಖ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ರಾಜ್ಯಗಳ ಕೆಲವು ಭಾಗಗಳಲ್ಲಿ ಶೇಕಡ 48 ರಷ್ಟು ಮಳೆಯ ಕೊರತೆಯನ್ನು ದಾಖಲಿಸಿದೆ. ಇದರಿಂದ ಈ ಹಂಗಾಮಿನಲ್ಲಿ ಇಲ್ಲಿಯವರೆಗೆ ಭತ್ತದ ನಾಟಿ ಶೇಕಡ 13ರಷ್ಟು ಕುಸಿದಿದೆ.

 ಜುಲೈನಲ್ಲಿ ಸರಾಸರಿಗಿಂತ ಶೇಕಡ 17ರಷ್ಟು ಮಳೆ ಹೆಚ್ಚಳ

ಜುಲೈನಲ್ಲಿ ಸರಾಸರಿಗಿಂತ ಶೇಕಡ 17ರಷ್ಟು ಮಳೆ ಹೆಚ್ಚಳ

ಭಾರತದ ಬೇಸಿಗೆ ಬಿತ್ತನೆಯ ಅಕ್ಕಿಯು ದೇಶದ ವಾರ್ಷಿಕ ಉತ್ಪಾದನೆಯ ಶೇಕಡ 85 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇದು ಜೂನ್ 2022 ರ ಬೆಳೆ ವರ್ಷದಲ್ಲಿ ದಾಖಲೆಯ 129.66 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಿದೆ ಎಂದು ಹೇಳಿದೆ.

ಒಟ್ಟಾರೆಯಾಗಿ, ಮುಂಗಾರು ಮಳೆಯು ಜೂನ್‌ನಲ್ಲಿ ಸರಾಸರಿಗಿಂತ ಶೇಕಡ 8 ಕಡಿಮೆ ಮತ್ತು ಜುಲೈನಲ್ಲಿ ಸರಾಸರಿ ಶೇಕಡ 17 ಹೆಚ್ಚಾಗಿದೆ ಎಂದು ಮೊಹಾಪಾತ್ರ ಹೇಳಿದರು.

 ಈಶಾನ್ಯ ರಾಜ್ಯಗಳಲ್ಲಿ ಶೇಕಡ 45 ರಷ್ಟು ಕಡಿಮೆ ಮಳೆ

ಈಶಾನ್ಯ ರಾಜ್ಯಗಳಲ್ಲಿ ಶೇಕಡ 45 ರಷ್ಟು ಕಡಿಮೆ ಮಳೆ

ಆದರೆ ಭಾರತದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಋತುವಿನ ಮೊದಲ ಎರಡು ತಿಂಗಳಲ್ಲಿ ಸರಾಸರಿಗಿಂತ ಶೇಕಡ 45 ಕಡಿಮೆ ಮಳೆಯಾಗಿದೆ, ಇದು 122 ವರ್ಷಗಳಲ್ಲಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಈಶಾನ್ಯ ರಾಜ್ಯಗಳಲ್ಲಿ ಕ್ರಮೇಣ ಮಳೆ ಪ್ರಮಾಣದಲ್ಲಿ ಕೊರತೆಯಾಗುತ್ತಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ. ಭಾರತದ ಬಹುಪಾಲು ಕೃಷಿಯು ಮಳೆಯನ್ನೇ ಅವಲಂಬಿಸಿದೆ. ಭಾರತದ ವಾರ್ಷಿಕ ಮಳೆಯ ಸುಮಾರು 75 ಪ್ರತಿಶತ ಪಾಲು ಮುಂಗಾರಿನಲ್ಲೇ ಸುರಿಯುತ್ತದೆ. ದೇಶದ ಒಟ್ಟು ಕೃಷಿ ಭೂಮಿಯ ಅರ್ಧದಷ್ಟು ಭೂಮಿಗೆ ಈ ಮಳೆಯೇ ಕೃಷಿಗೆ ಆಸರೆಯಾಗಿದೆ.

 ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಸಾಧ್ಯತೆ

ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಸಾಧ್ಯತೆ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತಾರಖಂಡದಲ್ಲಿ ಭಾರಿ ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಮಿಳುನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದಾಗಿ ಹೈದರಾಬಾದ್‌ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಂಧ್ರ ಪ್ರದೇಶ, ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

English summary
India is likely to receive an average amount of rain in August and September. But some rice-growing states in India's east may receive below-average monsoon rains, Mrutyunjay Mohapatra, director general of the IMD, told a virtual news conference. India Meteorological Department (IMD) defines average, or normal, rainfall as between 96% and 104% of a 50-year average of 89 cm (34 inches) for the four-month season beginning in June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X