ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 29 : ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಭಯೋತ್ಪಾದಕ ನೆಲೆಯ ಮೇಲೆ ಭಾರತೀಯ ಸೇನೆ ಅತ್ಯಂತ ಚಾಕಚಕ್ಯತೆಯಿಂದ ಮತ್ತು ಕರಾರುವಾಕ್ಕಾಗಿ ಬುಧವಾರ ರಾತ್ರಿ ದಾಳಿ ನಡೆಸಿದ್ದು, ಉಗ್ರರ ನೆಲೆಗೆ ಭಾರೀ ಹಾನಿ ಮಾಡಿದೆ.

ಈ ಸಂಗತಿಯನ್ನು ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ ಲೆ.ಜ. ರಣಬೀರ್ ಸಿಂಗ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ವಿದೇಶಾಂಕ ಸಚಿವಾಲಯದ ವಕ್ತಾರರೊಡನೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಪಾಕಿಸ್ತಾನಕ್ಕೂ ಮಾಹಿತಿ ನೀಡಲಾಗಿದೆ. [200ಕ್ಕೂ ಹೆಚ್ಚು ನುಸುಳುಕೋರರನ್ನು ಮಟ್ಟಹಾಕಿದ ಸೇನೆ]

India hits Pak- Conducts surgical strikes on terror launch pads along LoC

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ, ಭಾರತಕ್ಕೆ ಹಾನಿ ಮಾಡಲೆಂದೇ ಹೊಂಚು ಹಾಕಿ ಕುಳಿತಿದ್ದ ಉಗ್ರರಿಗೆ ಭಾರತೀಯ ಸೇನೆ ಭಾರೀ ಪೆಟ್ಟು ನೀಡಿದೆ. ಭಯೋತ್ಪಾಕರ ಸದ್ದನ್ನು ಅಡಗಿಸುವ ಉದ್ದೇಶದಿಂದ ಲೈನ್ ಆಫ್ ಕಂಟ್ರೋಲನ್ನು ದಾಟಿ ಸೇನೆ ದಾಳಿ ನಡೆಸಿದೆ.

ಇನ್ನು ಸುಮ್ಮನೆ ಕೂಡುವುದು ಸಾಧ್ಯವಿಲ್ಲ. ಭಾರತಕ್ಕೆ ಹಾನಿಯುಂಟು ಮಾಡಲು ಯಾವುದೇ ಭಯೋತ್ಪಾದಕ ಸಂಘಟನೆ ಯತ್ನಿಸಿದರೆ, ತಿರುಗೇಟು ನೀಡಲು ಭಾರತೀಯ ಸೇನೆ ಯಾವಾಗಲೂ ಸಿದ್ಧವಿರುತ್ತದೆ ಎಂದು ರಣಬೀರ್ ಸಿಂಗ್ ಅವರು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. [ಎಷ್ಟು ಉಗ್ರರ ಕ್ಯಾಂಪ್ ಧ್ವಂಸ, ಎಷ್ಟು ಜನ ಉಗ್ರರು ಬಲಿ?]


ಭಾರತ ಮತ್ತು ಪಾಕ್ ಗಡಿಯ ಮೂಲಕ ಉಗ್ರರು ನುಸುಳಲು ಯತ್ನಿಸಿದರೆ ಭಾರತ ಎಂದೂ ಸುಮ್ಮನಿರುವುದಿಲ್ಲ. ಭಯೋತ್ಪಾದಕರು ನುಸುಳಲು ಅವಕಾಶ ಮಾಡಿಕೊಡಬಾರದೆಂದು ಪಾಕಿಸ್ತಾನಕ್ಕೆ ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ, ಯಾರೇ ಶಾಂತಿ ಭಂಗ ಮಾಡಲು ಯತ್ನಿಸಿದರೆ ತಿರುಗೇಟು ನೀಡೇನೀಡುತ್ತೇವೆ ಎಂದು ಅವರು ಪಾಕಿಸ್ತಾನಕ್ಕೆ ಕಟ್ಟೆಚ್ಚರಿಕೆ ನೀಡಿದ್ದಾರೆ.

ಉಗ್ರರ 5 ನೆಲೆಗಳು ನಾಶ : ಭಾರತೀಯ ಸೇನೆ ಮಾಡಿದ ದಾಳಿಗೆ ಉಗ್ರರ ಐದು ನೆಲೆಗಳು ಸರ್ವನಾಶವಾಗಿವೆ. ಗಡಿ ನಿಯಂತ್ರಣಾ ರೇಖೆಯ 500 ಮೀಟರ್ ಮತ್ತು 2 ಕಿ.ಮೀ. ದೂರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India has carried out a surgical strike on terror launch pads along the Line of Control last night and caused severe casualties, the Director General of Military Operations (DGMO), Lt. General Ranbir Singh informed today.
Please Wait while comments are loading...