India Corona Case Details: ದೇಶದಲ್ಲಿ ಕೋವಿಡ್ ಸೋಂಕು ಕೊಂಚ ಏರಿಕೆ, 3720 ಹೊಸ ಕೇಸ್ ಪತ್ತೆ

ನವದೆಹಲಿ, ಮೇ 03: ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆಯಲ್ಲಿನ ಏರಿಳಿತ ಮುಂದುವರಿದಿದೆ. ಬುಧವಾರ ಒಂದೇ ದಿನ ದೇಶದಲ್ಲಿ ಒಟ್ಟು 3720 ಮಂದಿಗೆ ಕೊರೊನಾ ತಗುಲಿದೆ. ಈ ಸಂಖ್ಯೆ ಮಂಗಳವಾರಕ್ಕಿಂತ ಕೊಂಚ ಅಧಿಕ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ 3325 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇನ್ನೂ ಸೋಮವಾರ ಬರೊಬ್ಬರಿ 4282 ಹೊಸದಾಗಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

India Has Recorded 3,720 New Covid-19 Cases In Last 24 Hhours

ಭಾರತದಲ್ಲಿ ಸದ್ಯ 40,177 ಕೋವಿಡ್ 19 ಸಕ್ರಿಯ ಪ್ರಕರಣಗಳು ಇವೆ. ಇದು ಒಟ್ಟು ಕೊರೊನಾ ಪ್ರಕರಣಗಳ ಶೇಕಡಾ 0.09ರಷ್ಟು ಎಂದು ಹೇಳಲಾಗಿದೆ. ಕಳೆದ 24 ಗಂಟೆಯಲ್ಲಿ ಭಾರತದದಲ್ಲಿ ಒಟ್ಟು 7698 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟು 4,43,84,955 ಮಂದಿಗೆ ಸೋಂಕು ಮುಕ್ತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಗುಣಮುಖರ ಪ್ರಮಾಣ ಹೆಚ್ಚಾಗಿದೆ, ಒಟ್ಟಾರೆಯಾಗಿ ಶೇಕಡಾ 98.73 ರಷ್ಟು ಗುಣಮುಖ ದರ ಇದೆ. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇಕಡಾ 2.49 ರಷ್ಟಿದ್ದರೆ, ವಾರ ಪಾಸಿಟಿವಿ ದರ ಶೇಕಡಾ 3.46 ರಷ್ಟು ಇದೆ.

India Has Recorded 3,720 New Covid-19 Cases In Last 24 Hhours

ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಪರೀಕ್ಷೆ

ಆರೋಗ್ಯ ಇಲಾಖೆ ಸಿಬ್ಬಂದಿ ದೇಶದಲ್ಲಿ ಈದುವರೆಗೆ ಒಟ್ಟು 92.70 ಕೋಟಿ ಕೋವಿಡ್ ಪರೀಕ್ಷೆ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,50,735 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಒಂದೇ ದಿನ 2,459 ಮಂದಿ ಅರ್ಹರು ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ ಒಟ್ಟು ಜನರಲ್ಲಿ ಇದುವರೆಗೆ 95.21 ಕೋಟಿ ಮಂದಿ ಎರಡನೇ ಡೋಸ್, 22.87 ಕೋಟಿ ಜನರು ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್)‌ ಪಡೆದಿದ್ದಾರೆ. ಇವೆರಡು ಒಳಗೊಂಡಂತೆ ಮೇ 3ರವರೆಗೆ ದೇಶಾದ್ಯಂತ ಲಸಿಕಾಕರಣ ಅಭಿಯಾನದಲ್ಲಿ ಒಟ್ಟು 220.66 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕೆಲವು ದಿನಗಳ ಹಿಂದೆ 15000 ವರೆಗೆ ಕೊರೊನಾ ಕೇಸ್ ದಾಖಲಾಗಿದ್ದವು. ಆಗ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದು ಅಗತ್ಯ ಸಲಹೆ ಸೂಚನೆಗಳನ್ನು ಆರೋಗ್ಯ ಆಧಿಕಾರಿಗಳಿಗೆ ನೀಡಲಾಗಿತ್ತು.

ಕರ್ನಾಟಕದಲ್ಲಿ ಒಂದೇ ದಿನ 212 ಕೇಸ್ ಪತ್ತೆ

ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸ್ಥಿರವಾಗಿದ್ದು, ಮಂಗಳವಾರ ಒಂದೇ ದಿನ 212 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ರಾಜ್ಯದ ಒಟ್ಟು ಕೋವಿಡ್ ಸಕ್ರಿಯ ರೋಗಿಗಳ ಸಂಖ್ಯೆ 990 ಆಗಿದೆ. ಮಂಗಳವಾರ 316 ರೋಗಿಗಳು ಸೋಂಕಿನಿಂದ ಮುಕ್ತರಾಗಿದ್ದಾರೆ. ಒಂದು ಸಾವಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+