ಥೂ.. ಹೋಗ್ ಅತ್ತಾಗೆ.. ಮಾಲ್ಡೀವ್ಸ್ ನಾಯಕರಿಗೆ ಬುದ್ಧಿ ಬರೋದೆ ಇಲ್ವಾ?
ನಾಯಿ ಬಾಲ ನೆಟ್ಟಗೆ ಆಗಲ್ಲ, ಮಾಲ್ಡೀವ್ಸ್ ರಾಜಕೀಯ ನಾಯಕರಿಗೆ ಬುದ್ದಿ ಬರಲ್ಲ ಅಂತ ಈಗ ಸೋಷಿಯಲ್ ಮೀಡಿಯಾ ಮಂದಿ ಚರ್ಚೆ ಮಾಡುತ್ತಿದ್ದಾರೆ. ಭಾರತ ಸಾವಿರಾರು ಕೋಟಿ ರೂಪಾಯಿ ಸಹಾಯ ಮಾಡಿದರೂ ಮಾಲ್ಡೀವ್ಸ್ ಮಾತ್ರ ತನ್ನ ಕಿರಿಕ್ ಮುಂದುವರಿಸಿದೆ. ಈ ಕಾರಣಕ್ಕೆ ಭರ್ಜರಿ ಚರ್ಚೆ ಶುರುವಾಗಿದ್ದು, ಮಾಲ್ಡೀವ್ಸ್ ಮಾಡಿದ್ದ ಹೊಸ ಆರೋಪಕ್ಕೆ ಈಗ ಭಾರತ ಹೇಗೆ ಉತ್ತರ ನೀಡಿದೆ ಗೊತ್ತಾ? ಬನ್ನಿ ತಿಳಿಯೋಣ.
ಮಾಲ್ಡೀವ್ಸ್ ದೇಶಕ್ಕೆ ಹೊಸ ಅಧ್ಯಕ್ಷ ಬಂದ ನಂತರ ಕಿರಿಕ್ ನಿಲ್ಲುತ್ತಿಲ್ಲ. ಗಂಟೆ ಗಂಟೆಗೂ ಈ ಮಾಲ್ಡೀವ್ಸ್ ದೇಶದ ನಾಯಕರು ಕಿರಿಕ್ ಮಾಡ್ತಾನೆ ಇದ್ದಾರೆ. ಹೀಗಿದ್ದಾಗಲೇ ಭಾರತ ಕೂಡ ತನ್ನ ಸೇನೆಯನ್ನ ಸಂಪೂರ್ಣವಾಗಿ ಮಾಲ್ಡೀವ್ಸ್‌ನಿಂದ ಹೊರಗೆ ಕರೆಸಿಕೊಂಡಿದೆ. ಹೀಗಿದ್ದಾಗ ಮತ್ತೊಂದು ಗಂಭೀರ ಆರೋಪವನ್ನು ಭಾರತದ ವಿರುದ್ಧ ಮಾಡಿತ್ತು ಮಾಲ್ಡೀವ್ಸ್. ಈ ಬಗ್ಗೆ ಇದೀಗ ಭಾರತ ಖಡಕ್ ರಿಯಾಕ್ಷನ್ ಕೊಟ್ಟಿದೆ. ಅಲ್ಲದೆ ಪರೋಕ್ಷ ಎಚ್ಚರಿಕೆ ಸಂದೇಶವನ್ನೂ ರವಾನೆ ಮಾಡಿದೆ. ಹಾಗಾದರೆ ಭಾರತ ನೀಡಿರುವ ಆ ಖಡಕ್ ಉತ್ತರ ಹೇಗಿತ್ತು ಅನ್ನೋದನ್ನ ತಿಳಿಯಲು ಮುಂದೆ ಓದಿ.

ಮಾಲ್ಡೀವ್ಸ್ ನಾಯಕರಿಗೆ ಭಾರತವೇ ಟಾರ್ಗೆಟ್?
ಮಾಲ್ಡೀವ್ಸ್ ಎದ್ದರೂ, ಬಿದ್ದರೂ ಭಾರತದ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಈ ಬೆಳವಣಿಗೆ ಎರಡೂ ದೇಶಗಳ ಸಂಬಂಧ ಎಕ್ಕುಟ್ಟು, ಹಾಳಾಗಿ ಹಳಸಿ ಹೋಗುವಂತೆ ಮಾಡಿದೆ. ಹೀಗಿದ್ದರೂ ಬುದ್ಧಿ ಕಲಿಯದ ಮಾಲ್ಡೀವ್ಸ್ ದೇಶದ ರಾಜಕೀಯ ನಾಯಕರು, ಕಿರಿಕ್ ಮಾಡೋ ಬುದ್ಧಿ ನಿಲ್ಲಿಸಿಲ್ಲ. ಅದೇ ರೀತಿ ಕೆಲ ದಿನಗಳ ಹಿಂದೆ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದರು ಮಾಲ್ಡೀವ್ಸ್ ರಕ್ಷಣಾ ಸಚಿವ, ಈಗ ಅದಕ್ಕೆ ಭಾರತ ಖಡಕ್ ರಿಯಾಕ್ಷನ್ ಕೊಟ್ಟಿದೆ.
ಭಾರತ ಸೇನಾ ಹೆಲಿಕಾಪ್ಟರ್ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲೇ ನೆಲೆಯೂರಿದ್ದು, 2019 ರಿಂದಲೂ ಅನಧಿಕೃತ ಕಾರ್ಯಾಚರಣೆ ನಡೆಸಿದ್ರು ಅಂತ ಮಾಲ್ದೀವ್ಸ್ ರಕ್ಷಣಾ ಸಚಿವರು ಗಂಭೀರ ಆರೋಪ ಮಾಡಿದ್ದರು. ಮಾಲ್ಡೀವ್ಸ್ ನೀಡಿದ್ದ ಈ ಹೇಳಿಕೆಗೆ ಭಾರತ ಖಡಕ್ ಪ್ರತ್ಯುತ್ತರವನ್ನ ನೀಡಿದೆ. ಅಲ್ಲದೆ ಪದೇ ಪದೇ ಹೀಗೆ ಮಾತನಾಡುತ್ತಿರುವ ಮಾಲ್ಡೀವ್ಸ್ ನಾಯಕರ ವಿರುದ್ಧ ಭಾರತವು ಗರಂ ಆಗುತ್ತಿದೆ.
ಮಾಲ್ಡೀವ್ಸ್ ದೇಶಕ್ಕೆ ಇದು ಮಾರಕ?
ಅನುಮತಿ ಇಲ್ಲದೆಯೇ ಭಾರತ ಯಾವುದೇ ಕಾರ್ಯಾಚರಣೆ ನಡೆಸಿಲ್ಲ, ಅನುಮತಿಯ ಪಡೆದ ನಂತರ ಅಷ್ಟೇ ಭಾರತ ಕಾರ್ಯಾಚರಣೆ ಕೈಗೊಳ್ಳುತ್ತದೆ. ಹೀಗಾಗಿ ಯಾವುದೇ ನಿಯಮಗಳ ಉಲ್ಲಂಘನೆಯೂ ಆಗಿಲ್ಲ, ಮಾಲ್ಡೀವ್ಸ್ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ ಎಂದಿದೆ ಭಾರತ. ಈ ಮೂಲಕ ಮಾಲ್ಡೀವ್ಸ್ ಮಾಡಿದ ಆರೋಪಕ್ಕೆ ಭಾರತ ಖಡಕ್ ರಿಯಾಕ್ಷನ್ ಕೊಟ್ಟಿದೆ. ಈ ಬೆಳವಣಿಗೆ ಮತ್ತೊಮ್ಮೆ ಭಾರತ & ಮಾಲ್ಡೀವ್ಸ್ ಸಂಬಂಧಕ್ಕೆ ಹುಳಿ ಹಿಂಡಿದೆ. ಇದು ಭವಿಷ್ಯದ ದೃಷ್ಟಿಯಿಂದ ಮಾಲ್ಡೀವ್ಸ್‌ಗೆ ಮಾರಕ ಎನ್ನುತ್ತಿದ್ದಾರೆ ತಜ್ಞರು. ಹಾಗೇ ಇದೇ ರೀತಿ ಮಾಲ್ಡೀವ್ಸ್ ತನ್ನ ಹಠ ಮುಂದುವರಿಸಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಅಪಾಯ ಕಾದಿದೆ.











Click it and Unblock the Notifications