ಈ ಬೇಸಿಗೆಯಲ್ಲಿ ಕತ್ತಲೆಯ ರಾತ್ರಿಗಳನ್ನು ಕಳೆಯಲಿದೆ ಭಾರತ: ಇದು ಕಲ್ಲಿದ್ದಲು, ಜಲವಿದ್ಯುತ್ ನಿರ್ಲಕ್ಷ್ಯದ ಪರಿಣಾಮ- ವರದಿ, ವಿವರ
ಈ ಬೇಸಿಗೆಯಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವು ವಿದ್ಯುತ್ ಕಡಿತದ ಹೆಚ್ಚಿನ ಅಪಾಯವನ್ನು ಎದುರಿಸಲಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣವೇನು? ವಿವರ ಇಲ್ಲಿದೆ ತಿಳಿಯಿರಿ
ನವದೆಹಲಿ, ಮಾರ್ಚ್ 08: ಈ ಬೇಸಿಗೆಯಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವು ವಿದ್ಯುತ್ ಕಡಿತದ ಹೆಚ್ಚಿನ ಅಪಾಯವನ್ನು ಎದುರಿಸಲಿದೆ. ಕಲ್ಲಿದ್ದಲು ಮತ್ತು ಜಲವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಸೌರಶಕ್ತಿ ಲಭ್ಯವಿಲ್ಲದಿದ್ದಾಗ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೇಶವು ಹಿಂದುಳಿದಿದೆ ಎಂದು ವರದಿಯಾಗಿದೆ. ಇದು ದೇಶದ ಕೋಟ್ಯಂತರ ಜನರಿಗೆ ಭಾರೀ ತೊಂದರೆ ಉಂಟು ಮಾಡಬಹುದೆಂದು ಅಂದಾಜಿಸಲಾಗಿದೆ.
ಸೌರಶಕ್ತಿ ಫಾರ್ಮ್‌ಗಳು ಹಗಲಿನಲ್ಲಿ ವಿದ್ಯುತ್ ಅನ್ನು ಪೂರೈಸಲು ಸ್ಪಲ್ಪ ಮಟ್ಟಿಗೆ ಸಹಾಯ ಮಾಡಿವೆ. ಆದರೆ ಕಲ್ಲಿದ್ದಲು ಮತ್ತು ಜಲವಿದ್ಯುತ್ ಸಾಮರ್ಥ್ಯದ ಕೊರತೆಯು ಲಕ್ಷಾಂತರ ಜನರನ್ನು ರಾತ್ರಿಯಲ್ಲಿ ಅಂಧಕಾರಕ್ಕೆ ದೂಡಬಹುದು ಎಂಬ ಅಭಿಪ್ರಾಯಳು ವ್ಯಕ್ತವಾಗಿವೆ. ಈ ಕುರಿತು ಸರ್ಕಾರಿ ಆಂತರಿಕ ದಾಖಲೆಗಳನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪರಿಶೀಲಿಸಿದೆ.

ಈ ಏಪ್ರಿಲ್‌ನಲ್ಲಿ 'ಸೂರ್ಯನ ಬಿಸಿಲಿಲ್ಲದ ಸಮಯದಲ್ಲಿ' ( ರಾತ್ರಿಗಳು ) ಭಾರತದ ವಿದ್ಯುತ್ ಲಭ್ಯತೆಯು ಗರಿಷ್ಠ ಬೇಡಿಕೆಗಿಂತ ಶೇಕಡಾ 1.7 ರಷ್ಟು ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ರಾಯಿಟರ್ಸ್ ಪರಿಶೀಲಿಸಿದ ಫೆಡರಲ್ ಗ್ರಿಡ್ ನಿಯಂತ್ರಕದ ಆಂತರಿಕ ಟಿಪ್ಪಣಿಯಿಂದ ಇದು ತಿಳಿದುಬಂದಿದೆ.
ಏಪ್ರಿಲ್ ತಿಂಗಳಿನ ರಾತ್ರಿಯ ಗರಿಷ್ಠ ಬೇಡಿಕೆಯು 217 ಗಿಗಾವ್ಯಾಟ್‌ಗಳನ್ನು (GW) ಮುಟ್ಟುವ ನಿರೀಕ್ಷೆಯಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ದಾಖಲಾದ ಅತ್ಯಧಿಕ ರಾತ್ರಿಯ ಮಟ್ಟಕ್ಕಿಂತ ಇದು ಶೇ 6.4 ಹೆಚ್ಚಾಗಿದೆ.
'ಪರಿಸ್ಥಿತಿ ಸ್ಪಲ್ಪ ಗಂಭೀರವಾಗಿದೆ' ಎಂದು ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್ (ಗ್ರಿಡ್-ಇಂಡಿಯಾ) ಫೆಬ್ರವರಿ 3 ರ ಟಿಪ್ಪಣಿಯಲ್ಲಿ ತಿಳಿಸಿದೆ.

ಈ ಬೇಸಿಗೆಯ ಶಾಖವನ್ನು ತಣಿಸಲು ಬಯಸುವ ಭಾರತೀಯರು ತಮ್ಮ ಹವಾನಿಯಂತ್ರಣಗಳಿಗೆ ಸ್ಥಿರವಾದ ವಿದ್ಯುತ್ ಶಕ್ತಿಯನ್ನು ಬಯಸುತ್ತಾರೆ. ಇದಕ್ಕಾಗಿ ಹೆಚ್ಚು ವಿದ್ಯುತ್ ಸರಬರಾಜು ಬೇಕಾಗುತ್ತದೆ. ರಾತ್ರಿಯಲ್ಲಿ ವಿದ್ಯುತ್ ನಿಂತರೆ ಅಪಾಯಗಳು ಹೆಚ್ಚಾಗಲಿವೆ. ಇದರಿಂದ ಆಟೋ, ಎಲೆಕ್ಟ್ರಾನಿಕ್ಸ್, ಸ್ಟೀಲ್ ಬಾರ್ ಮತ್ತು ರಸಗೊಬ್ಬರ ಉತ್ಪಾದನಾ ಘಟಕಗಳು ಸೇರಿದಂತೆ ರಾತ್ರಿಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಾಗದ ಉದ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥ ಪಿ.ಜಿ. ಮುಕುಂದನ್ ನಾಯರ್, 'ಒಂದು ನಿಮಿಷ ವಿದ್ಯುತ್ ಕಡಿತಗೊಂಡರೆ ಕಾಗದದ ತಿರುಳು ಬ್ಲಾಕ್ ಆಗುತ್ತದೆ. ಇದು ಸೂಕ್ಷ್ಮ ಪ್ರಕ್ರಿಯೆಗೆ ಅಡ್ಡಿಪಡಿಸುವ ಮೂಲಕ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ' ಎಂದು ತಿಳಿಸಿದ್ದಾರೆ.
'ವಿದ್ಯುತ್ ಸರಬರಾಜಿನಲ್ಲಿ ಸಣ್ಣ ವ್ಯತ್ಯಯವು ಸಹ ವಿನಾಶವನ್ನು ಸೃಷ್ಟಿಸುತ್ತದೆ' ಎಂದು ನಾಯರ್ ಹೇಳಿದ್ದಾರೆ.

ಈ ಬೇಸಿಗೆಯಲ್ಲಿ ವಿದ್ಯುಚ್ಛಕ್ತಿ ಕೊರತೆಯು ನಿರೀಕ್ಷೆಗಿಂತ ಹೆಚ್ಚಾಗಲಿದೆ. ಏಕೆಂದರೆ ಭಾರತದ ಹವಾಮಾನ ಕಚೇರಿಯು ಮಾರ್ಚ್ ಮತ್ತು ಮೇ ನಡುವೆ ಬಿಸಿಗಾಳಿ ಬೀಸಲಿದೆ ಎಂದು ಹೇಳಿದೆ.
ಭಾರತದ ಫೆಡರಲ್ ಪವರ್ ಸೆಕ್ರೆಟರಿ ಅಲೋಕ್ ಕುಮಾರ್ ಅವರು, ವಿದ್ಯುತ್ ಕಡಿತವನ್ನು ತಪ್ಪಿಸಲು ಸರ್ಕಾರವು 'ಎಲ್ಲಾ ಕ್ರಮಗಳನ್ನು' ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
'ನಾವು ಎಲ್ಲಾ ರಾಜ್ಯಗಳಿಗೆ ಉತ್ತಮ ದರಗಳಲ್ಲಿ ವಿದ್ಯುತ್ ಲಭ್ಯವಾಗುವಂತೆ ಮಾಡುತ್ತಿದ್ದೇವೆ' ಎಂದು ಅಲೋಕ್ ಕುಮಾರ್ ರಾಯಿಟರ್ಸ್ ಸಂಸ್ಥೆಗೆ ತಿಳಿಸಿದ್ದಾರೆ.
ಗ್ರಿಡ್-ಇಂಡಿಯಾ ವರದಿಯ ನಂತರ, ಸರ್ಕಾರವು ಕೆಲವು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸಿದೆ. ವಿದ್ಯುತ್ ವ್ಯತ್ಯಯವನ್ನು ತಪ್ಪಿಸಲು ಹೆಚ್ಚುವರಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ ಇನ್ನೊಬ್ಬ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.
ಗ್ರಿಡ್-ಇಂಡಿಯಾದ ಫೆಬ್ರುವರಿ ಟಿಪ್ಪಣಿಯ ಪ್ರಕಾರ, ಈ ಏಪ್ರಿಲ್‌ನಲ್ಲಿ 189.2 GW ಕಲ್ಲಿದ್ದಲು ಆಧಾರಿತ ವಿದ್ಯುತ್ ಸಾಮರ್ಥ್ಯವು ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಗ್ರಿಡ್-ಇಂಡಿಯಾ ದತ್ತಾಂಶವನ್ನು ಆಧರಿಸಿ ರಾಯಿಟರ್ಸ್ ಲೆಕ್ಕಾಚಾರದ ಪ್ರಕಾರ, ಅದು ಕಳೆದ ವರ್ಷಕ್ಕಿಂತ 11 ಪ್ರತಿಶತಕ್ಕಿಂತ ಹೆಚ್ಚಾಗಿರುತ್ತದೆ.
ಒಟ್ಟಾರೆಯಾಗಿ, ಕಲ್ಲಿದ್ದಲು, ಪರಮಾಣು ಮತ್ತು ಅನಿಲ ಸಾಮರ್ಥ್ಯವು ರಾತ್ರಿಯಲ್ಲಿ ಗರಿಷ್ಠ ಬೇಡಿಕೆಯ 83 ಪ್ರತಿಶತವನ್ನು ಪೂರೈಸುವ ನಿರೀಕ್ಷೆಯಿದೆ.
ಬೇಡಿಕೆಯಲ್ಲಿನ ವ್ಯತ್ಯಾಸವನ್ನು ಪರಿಹರಿಸಲು ಕಲ್ಲಿದ್ದಲಿನ ಸ್ಥಾವರಗಳನ್ನು ತ್ವರಿತವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ರಾಂಪ್ ಮಾಡಲು ಸಾಧ್ಯವಾಗುವುದಿಲ್ಲ. ಆದರಿಂದ, ಜಲವಿದ್ಯುತ್‌ನಿಂದ ಹೆಚ್ಚಿನ ಬೇಡಿಕೆ ಪೂರೈಸಲು ಸರ್ಕಾರ ಮುಂದಾಗಿದೆ.












Click it and Unblock the Notifications