Amrit Bharat-Vande Bharat Express: ಹೊಸ ರೈಲುಗಳಲ್ಲಿ ಸುಧಾರಿತ ಅರೆ ಸಂಯೋಜಕ ವ್ಯವಸ್ಥೆ: ರೈಲ್ವೆ ಇಲಾಖೆ

ಬೆಂಗಳೂರು, ಮಾರ್ಚ್ 10: ಭಾರತೀಯ ರೈಲ್ವೆ ಸೇವೆಯಲ್ಲಿ ಈ 'ಅಮೃತ್ ಭಾರತ್ ರೈಲು' ಹಾಗೂ 'ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು' ಸೇವೆಗಳ ಪರಿಚಯವು ಹೊಸ ಕ್ರಾಂತಿ ಹುಟ್ಟು ಹಾಕಿದೆ. ಪ್ರಯಾಣಿಕರಿಗೆ ಇಷ್ಟವಾಗುವ ರೀತಿಯಲ್ಲಿ ಆರಾಮದಾಯಕ ಸೇವೆ ನೀಡುತ್ತಿವೆ. ಇವುಗಳ ಉತ್ಪಾದಕ ಕಂಪನಿಯಾದ ರೈಲು ಕೋಚ್ ಫ್ಯಾಕ್ಟರಿ (RCF) ಸದ್ಯ ಅರೆ-ಹೈ-ಸ್ಪೀಡ್ ರೈಲು ಉತ್ಪಾದನೆ ಜೊತೆಗೆ ಬೋಗಿ ಸಂಯೋಜನೆಗೆ ಸ್ವಯಂಚಾಲಿತ ಸಂಯೋಜಕ ಅಭಿವೃದ್ಧಿಪಡಿಸುತ್ತಿದೆ.

RCF ಸ್ವಯಂಚಾಲಿತ ಸಂಯೋಜಕ ಎರಡು ರೈಲು ಬೋಗಿಗಳ ಮಧ್ಯೆ ಮಾನವ ಹಸ್ತಚಾಲಿತ ಅಲ್ಲದೇ ಆಟೋಮ್ಯಾಟಿಕ್ ಬೋಗಿ ಜೋಡಣೆ ತಂತ್ರಜ್ಞಾನ ಆಧಾರದಲ್ಲಿ ಅಭಿವೃಪಡಿಸುತ್ತಿದೆ. ಇದರಿಂದ ಮಾನವನ ಅಗತ್ಯ ಇರುವುದಿಲ್ಲ. ಈವರೆಗೆ ಒಂದು ಬೋಗಿನ್ನು ಮತ್ತೊಂದು ಭೋಗಿಗೆ ಅಳವಡಿಸಲು ವ್ಯಕ್ತಿಯ ಅಗತ್ಯತೆ ಇದೆ. ಈ ಸಂಯೋಜನೆ ಅಭಿವೃದ್ಧಿ ಯಶಸ್ವಿ ಬಳಿಕ ಎಲ್ಲವು ಆಟೋಮ್ಯಾಟಿಕ್ ಆಗಲಿದೆ ಎಂದು ಕಂಪನಿ ತಿಳಿಸಿದೆ.

India Develops Advanced Semi-Automatic Coupler for Vande Bharat and Amrit Bharat Trains

ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳ ಉತ್ಪಾದನೆಯನ್ನು ರೈಲ್ವೆ ಇಲಾಖೆ ಹೆಚ್ಚಿಸಿದ್ದು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಹಾಗೂ ರಾಷ್ಟ್ರೀಯ ಸಾರಿಗೆ ಸಂಸ್ಥೆಯಾದ ರೈಲು ಕೋಚ್ ಫ್ಯಾಕ್ಟರಿ (RCF) ಗಳಲ್ಲಿ ಸೆಮಿ ಹೈ ಸ್ಪೀಡ್ ರೈಲುಗಳ ತಯಾರಿಕೆ ನಡೆಯುತ್ತಿದೆ. ಇದೇ ಕಂಪನಿಗಳು ಬೋಗಿ ಜೋಡಣೆಗೆ ಹೊಸ ಸಂಯೋಜಕ ಅಭಿವೃದ್ಧಿ ಮಾಡುತ್ತಿವೆ ಎಂದು 'ಇಟಿ ಇನ್ಫ್ರಾ.ಕಾಮ್' ವರದಿ ಮಾಡಿದೆ.

50 ಹೊಸ ಅಮೃತ್ ಭಾರತ್ ರೈಲು ಶೀಘ್ರವೇ ಹಳಿಗೆ!

ಪ್ರಯಾಣಿಕರಿಗೆ ಹೊಸ ಹೊಸ ರೈಲು ಪರಿಚಯಿಸುತ್ತಿರುವ ರೈಲ್ವೆ ಇಲಾಖೆ ಒಟ್ಟಿಗೆ 50 ಅಮೃತ್ ಭಾರತ್ ರೈಲುಗಳನ್ನು ತಯಾರಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಆ ಎಲ್ಲ ರೈಲುಗಳು ಹಳಿಗೆ ಇಳಿಯಲಿವೆ. ರೈಲ್ವೆ ಜಾಲ-ರೈಲು ಸಾರಿಗೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಒಯ್ಯುವ ಗುರಿ ಇಲಾಖೆ ಹೊಂದಿದೆ. ಈ ವಂದೇ ಭಾರತ್ ಮತ್ತು ಅಮೃತ್ ಭಾರತ್ ಎರಡು ರೈಲುಗಳು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಭಾಗವಾಗಿವೆ.

ಹೊಸ ರೈಲುಗಳ ತೂಕದಲ್ಲಿ ಕಡಿತ

ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಇನ್ನೇನು ಕೆಲವೇ ದಿನಗಳ್ಲಿ ಸೇವೆ ಇಳಿಯಲಿದೆ. ಭವಿಷ್ಯದಲ್ಲಿ ವಂದೇ ಭಾರತ್‌ನ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ, ಸುಧಾರಿತ ತಂತ್ರಜ್ಞಾನೊಂದಿಗೆ ಟ್ರ್ಯಾಕ್‌ಗೆ ಇಳಿಯಲಿದೆ. ಆರಂಭದಲ್ಲಿ ಬಂಧಿದ್ದ ವಂದೇ ಭಾರತ್ ರೈಲುಗಳು 430 ಟನ್‌ ಇದ್ದು, ಹೊಸ ರೈಲುಗಳ ತೂಕ ಇಳಿಕೆ ಮಾಡಿದ್ದು, ಅವರು 392 ಟನ್‌ ತೂಕ ಹೊಂದಿರಲಿವೆ.

India Develops Advanced Semi-Automatic Coupler for Vande Bharat and Amrit Bharat Trains

ಅಮೃತ್ ಭಾರತ್ ರೈಲು 2.0 ಆವೃತ್ತಿಯು ಸಹ ಅನೇಕ ವೈಶಿಷ್ಟ್ಯಗಳಿಂದ ಕೂಡಿವೆ. ನವೀಮ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ತಯಾರಿಸಲಾಗಿದೆ. ಈ ರೈಲುಗಳು ಅರೆ-ಸ್ವಯಂಚಾಲಿತ ಸಂಯೋಜಕಗಳನ್ನು ಸಹ ಹೊಂದಿರುತ್ತದೆ ಎಂದು ಇಲಾಖೆ ಮೂಲಗಲು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+