ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ ಲಸಿಕೆ ನೀಡುವ ಕ್ರಮದಲ್ಲಿ ಪ್ರಮುಖ ಬದಲಾವಣೆ ಸೂಚಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮಾರ್ಚ್ 22: ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಗಳ ಎರಡು ಡೋಸ್‌ಗಳ ನಡುವಿನ ಅಂತರವನ್ನು 4-8 ವಾರಗಳಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ. ಎರಡು ಪರಿಣತರ ಸಮಿತಿಗಳ ಶಿಫಾರಸಿನ ಆಧಾರದಲ್ಲಿ ಈ ಸೂಚನೆ ನೀಡಲಾಗಿದೆ.

ಪ್ರಸ್ತುತ ಮೊದಲ ಡೋಸ್ ನೀಡಿದ 28 ದಿನಗಳ ಅಂತರದ ಬಳಿಕ ಎರಡನೆಯ ಡೋಸ್ ನೀಡಲಾಗುತ್ತಿದೆ. ಆದರೆ 4-8 ವಾರಗಳ ಅಂತರದಲ್ಲಿ ಎರಡನೆಯ ಲಸಿಕೆ ನೀಡುವುದು ಪ್ರತಿಕಾಯ ಸಾಮರ್ಥ್ಯದ ವೃದ್ಧಿಗೆ ನೆರವಾಗಲಿದೆ ಎಂದು ಹೊಸ ಶಿಫಾರಸಿನಲ್ಲಿ ಹೇಳಲಾಗಿದೆ.

ಕೊರೊನಾ ಲಸಿಕೆ ಎಷ್ಟು ತಿಂಗಳುಗಳ ಕಾಲ ಸೋಂಕಿನಿಂದ ರಕ್ಷಣೆ ನೀಡಬಲ್ಲದು? ಕೊರೊನಾ ಲಸಿಕೆ ಎಷ್ಟು ತಿಂಗಳುಗಳ ಕಾಲ ಸೋಂಕಿನಿಂದ ರಕ್ಷಣೆ ನೀಡಬಲ್ಲದು?

ವೈಜ್ಞಾನಿಕ ಪುರಾವೆಗಳನ್ನು ಪರಿಶೀಲಿಸಿದ ಬಳಿಕ, ರಾಷ್ಟ್ರೀಯ ಪ್ರತಿಕಾಯ ತಾಂತ್ರಿಕ ಸಲಹಾ ಸಮೂಹ (ಎನ್‌ಟಿಎಜಿಐ) ಮತ್ತು ಕೋವಿಡ್ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಸಮೂಹ (ಎನ್‌ಇಜಿವಿಎಸಿ) ತನ್ನ 20ನೇ ಸಭೆಯಲ್ಲಿ ಕೋವಿಶೀಲ್ಡ್‌ ಡೋಸ್‌ಗಳ ಅಂತರವನ್ನು ವಿಸ್ತರಿಸುವುದು ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿವೆ.

India Decided To Extend The Interval Between Doses Of Covishield Vaccine To Up To Eight Weeks

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತದಲ್ಲಿ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆಗಳಲ್ಲಿ ಮೊದಲ ಡೋಸ್ ನೀಡಿದ ಬಳಿಕ 4-6 ವಾರಗಳ ಅಂತರದಲ್ಲಿ ಎರಡನೆಯ ಡೋಸ್ ನೀಡಲಾಗುತ್ತಿದೆ. ಅದನ್ನು 4-8 ವಾರಕ್ಕೆ ವಿಸ್ತರಿಸಲು ಶಿಫಾರಸು ಮಾಡಲಾಗಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎನ್‌ಟಿಎಜಿಐ ಮತ್ತು ಎನ್‌ಇಜಿವಿಎಸಿಗಳ ಶಿಫಾರಸನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒಪ್ಪಿಕೊಂಡಿದೆ. ಹೀಗಾಗಿ ಮೊದಲ ಡೋಸ್ ನೀಡಿದ 4-8 ವಾರಗಳ ಬಳಿಕ ಫಲಾನುಭವಿಗಳಿಗೆ ಎರಡನೆಯ ಲಸಿಕೆ ನೀಡುವಂತೆ ತಿಳಿಸಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರಗಳು ಈಗ ಹೊಸ ನಿಯಮಕ್ಕೆ ಅನುಗುಣವಾಗಿ ಲಸಿಕೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಆದರೆ ಎರಡನೆಯ ಡೋಸ್ ನೀಡುವುದನ್ನು ಎಂಟು ವಾರಕ್ಕಿಂತ ತಡವಾಗಿ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.

English summary
India decided to extend the interval between doses of Covishield vaccine to up to eight weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X