• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರೀ ಕೊರೊನಾ ಹಾವಳಿಯ ಸುದ್ದಿಯ ನಡುವೆ ಭರ್ಜರಿ ಪಾಸಿಟೀವ್ ನ್ಯೂಸ್

|

ನವದೆಹಲಿ, ಜೂನ್ 20: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಗುಣಮುಖರಾಗುತ್ತಿರುವವರ ಸಂಖ್ಯೆಯ ಗ್ರಾಫ್ ಕೂಡಾ ಏರುತ್ತಲೇ ಇರುತ್ತಿರುವುದು ಸಮಾಧಾನ ತರುವ ವಿಚಾರವಾಗಿದೆ.

   Dancing is the most difficult thing for me : Sudeep | Filmibeat Kannada

   ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ ತಲುಪುವ ಸಮೀಪದಲ್ಲಿದ್ದು, ಮೃತ ಪಟ್ಟವರ ಸಂಖ್ಯೆ 12,747ಕ್ಕೆ ಏರಿದೆ. ಹಾಗೆಯೇ, ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಎರಡು ಲಕ್ಷವನ್ನು ದಾಟಿದೆ.

   ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದ ಮೂವರಿಗೆ ಕೊರೊನಾ ಸೋಂಕು

   ಕಳೆದ 24 ಗಂಟೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆಯಾಗಿ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ. 53.79 ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

   ಆರೋಗ್ಯ ಸಚಿವಾಲಯದ ಪ್ರಕಾರ, "ಗುಣಮುಖರಾಗುತ್ತಿರುವವರ ಸಂಖ್ಯೆ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವೂ ಹೆಚ್ಚಾಗುತ್ತಿದೆ. ಗುಣಮುಖರಾಗುತ್ತಿರುವ ಪ್ರಕರಣಗಳ ಪ್ರಮಾಣದಲ್ಲಿ ಹೆಚ್ಚಳವು ಕೋವಿಡ್ -19 ಅನ್ನು ಸಮಯೋಚಿತವಾಗಿ ನಿರ್ವಹಿಸುವ ಕಾರ್ಯತಂತ್ರದ ಕ್ರಮದಿಂದ" ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

   ಪಾದರಾಯನಪುರಕ್ಕೆ ತೆರಳಿದ್ದ ಮೈಸೂರು ಪೊಲೀಸರಿಗೆ ಕೊರೊನಾ

   ಸರಕಾರೀ ಲ್ಯಾಬ್‌

   ಸರಕಾರೀ ಲ್ಯಾಬ್‌

   ಸರಕಾರೀ ಲ್ಯಾಬ್‌ ಗಳ ಸಂಖ್ಯೆ 703 ಮತ್ತು ಖಾಸಗಿ ಲ್ಯಾಬ್‌ ಗಳು 257ಕ್ಕೆ ಏರಿದ್ದು ದೇಶದ ಒಟ್ಟು ಲ್ಯಾಬ್‌ಗಳ ಸಂಖ್ಯೆ 960ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,76,959 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಮತ್ತು ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 64,26,627 ಎಂದು ಸಚಿವಾಲಯ ತಿಳಿಸಿದೆ.

   336 ಜನರು ಒಂದೇ ದಿನ ಕೊರೊನಾಗೆ ಬಲಿ

   336 ಜನರು ಒಂದೇ ದಿನ ಕೊರೊನಾಗೆ ಬಲಿ

   ದಿನವೊಂದರ ಗರಿಷ್ಠ 13,586 ಪ್ರಕರಣ ಕಳೆದ 24 ಗಂಟೆಗಳಲ್ಲಿ ವರದಿಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ ಶುಕ್ರವಾರದವರೆಗೆ (ಜೂನ್ 19) 3,80,532ಕ್ಕೆ ತಲುಪಿದೆ. ಹಾಗೆಯೇ, ಕಳೆದ ಒಂದು ದಿನದಲ್ಲಿ, 336 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ಸಂಖ್ಯೆ 12,573ಕ್ಕೆ ಏರಿದೆ.

   ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿ

   ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿ

   ಆದಾಗ್ಯೂ, ಗುಣಮುಖರಾದವರ ಸಂಖ್ಯೆ 2,04,710. ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ ಸಕ್ರಿಯ ಕೇಸ್ ಗಳು 1,63,248. ಕಳೆದ ಎಂಟು ದಿನಗಳಿಂದ ದಿನವೊಂದಕ್ಕೆ ಸೋಂಕಿತರ ಪ್ರಮಾಣ ಕನಿಷ್ಠ ಹತ್ತು ಸಾವಿರ ಇದ್ದರೂ, ಗುಣಮುಖರಾಗುತ್ತಿರುವವರ ಸಂಖ್ಯೆಯ ಪ್ರಮಾಣವೂ ಏರಿಕೆಯಾಗುತ್ತಿದೆ.

   ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ 12

   ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ 12

   ಶುಕ್ರವಾರ ವರದಿಯಾದ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಹಾರಾಷ್ಟ್ರದಲ್ಲಿ (100). ದೆಹಲಿಯಲ್ಲಿ 65, ತಮಿಳುನಾಡಿನಲ್ಲಿ 49, ಗುಜರಾತ್ 31, ಉತ್ತರಪ್ರದೇಶ 30, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ 12, ರಾಜಸ್ಥಾನದಿಂದ ಹತ್ತು ಸಾವಿನ ಪ್ರಕರಣ ವರದಿಯಾಗಿದೆ.

   English summary
   India's Covid-19 recovery rate rises to 53.79%, over 2 lakh persons cured of COVID-19, says Health Ministry,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X