ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಚುನಾವಣಾ ಇತಿಹಾಸದಲ್ಲಿ 'ಸೋಲಿ'ನ ಲಿಮ್ಕಾ ದಾಖಲೆ ಬರೆದ ವೀರ

|
Google Oneindia Kannada News

ಕೆಲವರಿಗೆ ಠೇವಣಿ ಸಿಗೋದು ಗ್ಯಾರಂಟಿ ಇಲ್ಲದಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸುವುದು ಒಂದು ರೀತಿಯ ಖಯಾಲಿ. ಅದು ಗ್ರಾಮ ಪಂಚಾಯತಿ ಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆಯಾಗಲಿ, ಕಣದಲ್ಲಿ ತಾನೂ ಇರಬೇಕೆಂದು ಬಯಸುವ ಇವರಿಗೆ, ಸ್ಪರ್ಧಿಸಲು ಅವರದ್ದೇ ಆದ ಕಾರಣವಿರುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಾಗಿರುವುದರಿಂದ, ತಮ್ಮ ಸ್ವಕ್ಷೇತ್ರವನ್ನು ಬಿಟ್ಟು, ಬೇರೆಲ್ಲೋ ಸಂಬಂಧವಿಲ್ಲ ಸೀಟಿನಿಂದ ಸ್ಪರ್ಧಿಸುವ ಉದಾಹರಣೆಗಳು ನಮ್ಮಲ್ಲಿವೆ. ಆದರೆ, ಕೆಲವರು ಒಂದೋ, ಎರಡೂ ಚುನಾವಣೆಗೆ ಸೀಮಿತವಾಗಿಟ್ಟು ಕೊಂಡಿದ್ದರೆ, ಇಲ್ಲೊಬ್ಬರು ಇದನ್ನೇ ರೂಢಿಯಾಗಿಸಿಕೊಂಡಿದ್ದಾರೆ.

ದೇಶದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್ ಪರಿಚಯದೇಶದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್ ಪರಿಚಯ

ಮೀಟ್ ಮಿಸ್ಟರ್ ಡಾ. ಕೆ ಪದ್ಮರಾಜನ್, ತಮಿಳುನಾಡು ಸೇಲಂ ಮೂಲದ ಹೋಮಿಯೋಪತಿ ವೈದ್ಯ. ಅರವತ್ತು ವರ್ಷದ ಜನಾನುರಾಗಿ ವೈದ್ಯರಾಗಿದ್ದರೂ ಕೂಡಾ, ಇವರನ್ನು ಒಮ್ಮೆಯೂ ಮತದಾರ ಚುನಾವಣೆಯಲ್ಲಿ ಗೆಲ್ಲಿಸಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

ದೇಶದ ಎಲ್ಲಾ ಘಟಾನುಗಟಿ ನಾಯಕರೆದುರು ಸ್ಪರ್ಧಿಸಿರುವ ಪದ್ಮರಾಜನ್, ದೇಶದ ಅತ್ಯಂತ ದುರಂತ ಸೋಲಿನ ಅಭ್ಯರ್ಥಿ ಎಂದೇ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ. ಸತತವಾಗಿ ಸ್ಪರ್ಧಿಸುವ ಮೂಲಕ, ಲಿಮ್ಕಾ ದಾಖಲೆಯೂ ಇವರದ್ದಾಗಿದೆ.

ಸೋಲು, ಗೆಲುವು ಯಾರಿಗೆ ಬೇಕು ಎನ್ನುವ ಅಭ್ಯರ್ಥಿ

ಸೋಲು, ಗೆಲುವು ಯಾರಿಗೆ ಬೇಕು ಎನ್ನುವ ಅಭ್ಯರ್ಥಿ

ಸೋಲು, ಗೆಲುವು ಯಾರಿಗೆ ಬೇಕು, ಚುನಾವಣೆಯಲ್ಲಿ ಸ್ಪರ್ಧಿಸಿ ದಾಖಲೆ ನಿರ್ಮಿಸುವುದಷ್ಟೇ ನನ್ನ ಗುರಿ ಎನ್ನುವ ಕ್ಲಿಯರ್ ಕಟ್ ಧೋರಣೆಯನ್ನು ಹೊಂದಿರುವ ಡಾ. ಪದ್ಮರಾಜನ್, ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ನನಗೆ ಹೃದಯಾಘಾತವಾಗುವುದು ಗ್ಯಾರಂಟಿ ಎನ್ನುತ್ತಾರೆ ಇವರು.

ಮುಂಬರುವ ಲೋಕಸಭಾ ಚುನಾವಣೆಯನ್ನು ಸೇರಿ ಒಟ್ಟು 199 ಬಾರಿ ಸ್ಪರ್ಧಿಸಿದ್ದಾರೆ

ಮುಂಬರುವ ಲೋಕಸಭಾ ಚುನಾವಣೆಯನ್ನು ಸೇರಿ ಒಟ್ಟು 199 ಬಾರಿ ಸ್ಪರ್ಧಿಸಿದ್ದಾರೆ

ಗ್ರಾಮ ಪಂಚಾಯತಿ ಚುನಾವಣೆಯಿಂದ ಹಿಡಿದು, ಮುಂಬರುವ ಲೋಕಸಭಾ ಚುನಾವಣೆಯನ್ನು ಸೇರಿ ಒಟ್ಟು 199 ಬಾರಿ ಪದ್ಮರಾಜನ್ ಸ್ಪರ್ಧಿಸಿದ್ದಾರೆ. ಕಣದಲ್ಲಿ ಇದ್ದ ಮೇಲೆ ಚೂರುಪಾರಾದರೂ ಪ್ರಚಾರ ಮಾಡಬೇಕಲ್ಲವೇ.. ಅದನ್ನೂ ಮಾಡದ ಪದ್ಮರಾಜನ್, ಚುನಾವಣಾ ಠೇವಣಿಗಾಗಿ ಮತ್ತು ತುರ್ತು ಇದಕ್ಕೆ ಸಂಬಂಧಪಟ್ಟ ಖರ್ಚಿಗಾಗಿ ಇದುವರೆಗೆ ಕಳೆದುಕೊಂಡಿದ್ದು ಇಪ್ಪತ್ತು ಲಕ್ಷದ ಮೇಲೆ..

ಟಿಟಿವಿ ದಿನಕರನ್ ಎಎಂಎಂಕೆಗೆ 'ಗಿಫ್ಟ್ ಪ್ಯಾಕ್' ಚುನಾವಣೆ ಚಿಹ್ನೆಟಿಟಿವಿ ದಿನಕರನ್ ಎಎಂಎಂಕೆಗೆ 'ಗಿಫ್ಟ್ ಪ್ಯಾಕ್' ಚುನಾವಣೆ ಚಿಹ್ನೆ

ದೇಶದ ಯಾವುದೇ ಭಾಗದಲ್ಲೂ ಸ್ಪರ್ಧಿಸಬಹುದು ಎನ್ನುವ ಸಂದೇಶ

ದೇಶದ ಯಾವುದೇ ಭಾಗದಲ್ಲೂ ಸ್ಪರ್ಧಿಸಬಹುದು ಎನ್ನುವ ಸಂದೇಶ

ಯಾವುದೇ ಭಾಷಿಗರು, ದೇಶದ ಯಾವುದೇ ಭಾಗದಲ್ಲೂ ಸ್ಪರ್ಧಿಸಬಹುದು ಎನ್ನುವ ಸಂದೇಶ ಸಾರುವುದೇ ನನ್ನ ಉದ್ದೇಶ ಎನ್ನುವ ಹೋಮಿಯೋಪತಿ ಡಾಕ್ಟರ್ ಪದ್ಮರಾಜನ್, ಮಾಜಿ ಪ್ರಧಾನಿಗಳಾದ ವಾಜಪೇಯಿ, ಮನಮೋಹನ್ ಸಿಂಗ್ ಸೇರಿದಂತೆ, ಕರುಣಾನಿಧಿ, ಜಯಲಲಿತಾ ವಿರುದ್ದವೂ ಸ್ಪರ್ಧಿಸಿದ್ದಾರೆ. ನಮ್ಮ ಕರ್ನಾಟಕದ ಮಾಜಿ ಸಿಎಂ ಎಸ್ ಎಂ ಕೃಷ್ಣ ವಿರುದ್ದವೂ ಒಮ್ಮೆ ಸ್ಪರ್ಧಿಸಿದ್ದರು.

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಿಂದ ಪದ್ಮರಾಜನ್ ಸ್ಪರ್ಧಿಸಲಿದ್ದಾರೆ

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಿಂದ ಪದ್ಮರಾಜನ್ ಸ್ಪರ್ಧಿಸಲಿದ್ದಾರೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ತಮಿಳುನಾಡಿನ ಧರ್ಮಪುರಿ ಕ್ಷೇತ್ರದಿಂದ ಪದ್ಮರಾಜನ್ ಸ್ಪರ್ಧಿಸಲಿದ್ದಾರೆ. ಪಿಎಂಕೆ ನಾಯಕ ಅನ್ಬಮಣಿ ರಾಮದಾಸ್ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನನ್ನ ಕುಟುಂಬ, ನಾನು ಸ್ಪರ್ಧಿಸುವುದಕ್ಕೆ ಮೊದಮೊದಲು ವಿರೋಧ ವ್ಯಕ್ತಪಡಿಸುತ್ತಿದ್ದರೂ, ಈಗ ಅವರೆಲ್ಲಾ ನನ್ನ ದಾರಿಗೆ ಬರುತ್ತಿದ್ದಾರೆ ಎಂದು ಪದ್ಮರಾಜನ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.(ಚಿತ್ರದಲ್ಲಿ ಅನ್ಬಮಣಿ ರಾಮದಾಸ್)

ಚಿಲ್ಲರೆಯಲ್ಲೇ 25000 ರೂ. ಭದ್ರತಾ ಠೇವಣಿ ಇರಿಸಿದ ತ.ನಾಡು ಅಭ್ಯರ್ಥಿ!ಚಿಲ್ಲರೆಯಲ್ಲೇ 25000 ರೂ. ಭದ್ರತಾ ಠೇವಣಿ ಇರಿಸಿದ ತ.ನಾಡು ಅಭ್ಯರ್ಥಿ!

ರಾಹುಲ್ ಗಾಂಧಿ ಕೇರಳದ ವಾಯಿನಾಡ್ ಕ್ಷೇತ್ರದಿಂದ ಸ್ಪರ್ಧಿಸಿದರೂ, ಅಲ್ಲೂ ಸ್ಪರ್ಧೆ

ರಾಹುಲ್ ಗಾಂಧಿ ಕೇರಳದ ವಾಯಿನಾಡ್ ಕ್ಷೇತ್ರದಿಂದ ಸ್ಪರ್ಧಿಸಿದರೂ, ಅಲ್ಲೂ ಸ್ಪರ್ಧೆ

ಧರ್ಮಪುರಿಯ ಜೊತೆ, ಒಂದು ವೇಳೆ ರಾಹುಲ್ ಗಾಂಧಿ ಕೇರಳದ ವಾಯಿನಾಡ್ ಕ್ಷೇತ್ರದಿಂದ ಸ್ಪರ್ಧಿಸಿದರೂ, ಅಲ್ಲೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಒಂದೆರಡು ದಿನಗಳ ಹಿಂದೆ ಪದ್ಮರಾಜನ್ ಹೇಳಿದ್ದರು. ಈಗ, ರಾಹುಲ್ ಅಲ್ಲಿಂದ ಸ್ಪರ್ಧಿಸುವುದು ಅಧಿಕೃತವಾಗಿದೆ. ಹಾಗಾಗಿ, ಪದ್ಮರಾಜನ್ ದ್ವಿಶತಕ ಬಾರಿಸಲಿದ್ದಾರೆ.

ಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ

English summary
Some never tire of trying. Like, Dr K Padmarajan. Starting 1988, the man from Salem, Tamil Nadu, has contested 199 elections. And the 60-year-old has lost all of them. The Limca Book of Records names him as 'India's Most Unsuccessful Candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X