Rain Alert: ಚಂಡಮಾರುತ ಪರಿಚಲನೆ ತೀವ್ರತೆ ಹೆಚ್ಚಳ: ಭಾರೀ ಮಳೆ ಮುನ್ಸೂಚನೆ! ಹವಾಮಾನ ವರದಿ

Weather Forecast: ಕಳೆದ ಸುಮಾರು ಒಂದು ತಿಂಗಳಿನಿಂದ ಭಾರತದ ದಕ್ಷಿಣ ಕರಾವಳಿ ರಾಜ್ಯಗಳ ಸಮೀಪ ಸಮುದ್ರ ಮಟ್ಟದಲ್ಲಿ ನಿರಂತರವಾಗಿ ಹವಾಮಾನ ವೈಪರೀತ್ಯಗಳು, ವಾತಾವರಣದಲ್ಲಿ ಬದಲಾವಣೆಗಳು ಘಟಿಸುತ್ತಿವೆ. ಇದರ ಪ್ರಭಾವದಿಂದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ನಡುವೆ ಕೆಲವು ದಿನ ಕಣ್ಮರೆಯಾಗಿದ್ದ ಸ್ಟ್ರಫ್, ಬಿರುಳಿ, ವಾಯುಭಾರ ಕುಸಿತ ಹಾಗೂ ಚಂಡಮಾರುತ ಪರಿಚಲನೆಗಳು ಇದೀಗ ಮತ್ತೆ ಸೃಷ್ಟಿಯಾಗಿವೆ.

ಒಂದು ವಾರದ ಹಿಂದೆ ಅರಬ್ಬಿ ಸಮುದ್ರದ ಆಗ್ನೆಯ ಭಾಗದಲ್ಲಿ ಸೃಷ್ಟಿಯಾಗಿದ್ದ ವೈಪರೀತ್ಯಗಳು ಇದೀಗ ತೀವ್ರಗೊಂಡಿವೆ. ಕೇವಲ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಮಾತ್ರವಲ್ಲದೇ, ಭೂಮಿ ಮೇಲ್ಭಾಗದಲ್ಲೂ ಸ್ಟ್ರಫ್ ಹಾದು ಹೋಗಿದೆ. ಕೇರಳ, ತಮಿಳುನಾಡು, ರಾಯಲ್‌ಸೀಮಾ ಆಂಧ್ರಪ್ರದೇಶ ಕರಾವಳಿ ಭಾಗದ ಹಾಗೂ ರಾಜಸ್ಥಾನ ಸೇರಿದಂತೆ ಕೆಲವೆಡೆ ಭೂಮಿ ಮೇಲ್ಭಾಗದಲ್ಲಿ ಭಾರೀ ಬದಲಾವಣೆ ಆಗಿದೆ. 0.9 ಕಿಲೋ ಮೀಟರ್‌ನಷ್ಟಿದ್ದ ಸ್ಟ್ರಫ್ ಇದೀಗ 1.5 ಕಿಲೋ ಮೀಟರ್‌ಗೆ ತೀವ್ರಗೊಳ್ಳುವ ಮೂಲಕ ಸ್ಪಷ್ಟ ಚಂಡಮಾರುತ ಪರಿಚಲನೆಯಾಗಿ ಪರಿವರ್ತನೆ ಆಗಿದೆ.

Increased intensity of Cyclonic Circulation Over Sea IMD Heavy Rain Alert in These Parts Weather

ಎಲ್ಲೆಲ್ಲೂ ಪೂರ್ವ ಮುಂಗಾರು ಮಳೆ ಚುರುಕು

ಬಂಗಾಳಕೊಲ್ಲಿ ಭಾಗದಲ್ಲಿ ತೀವ್ರಗೊಂಡ ಹವಾಮಾನ ಬದಲಾವಣೆ ಕಾರಣದಿಂದ ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಆಂಧ್ರ ಪ್ರದೇಶ ಕೆಲವು ಭಾಗಗಳು ಹಾಗೂ ಕೇರಳದಲ್ಲಿ ಮಳೆ ಆಗುತ್ತಿದೆ. ಕರ್ನಾಟಕದಲ್ಲಂತೂ ಪೂರ್ವ ಮುಂಗಾರು ಮಳೆ ಚುರುಕಾಗಿದೆ.

Take a Poll

ವಾಯುವ್ಯ ರಾಜಸ್ಥಾನ ಮತ್ತು ನೆರೆಹೊರೆಗಳಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಈಗ ಅದು ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸಣೆ ಆಗಿದೆ. ಈ ವೈಪರೀತ್ಯ ಬಿರುಗಾಳಿ ಗುರುವಾರ ತನ್ನ ಮೂಲ ಕೇಂದ್ರ ಸ್ಥಾನ ವಾಯುವ್ಯ ರಾಜಸ್ಥಾನದಿಂದ ರಾಜ್ಯದ ಪೂರ್ವದ ಭಾಗಗಳಲ್ಲಿ ಅಲ್ಲಿಂದ ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಒಳನಾಡು, ತಮಿಳುನಾಡಿನಾದ್ಯಂತ ಮನ್ನಾರ್ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟಕ್ಕಿಂತ 0.9 ಕಿ.ಮೀ ಎತ್ತರದಲ್ಲಿ ಚಲಿಸಲು ಆರಂಭಿಸಿದೆ. ಸಮುದ್ರ ಹಾಗೂ ಭೂಮಿ ಮೇಲ್ಮೈಮೇಲೆ ಒಂದೇ ತೆರನಾದ ಅನುಭವ ಉಂಟಾಗುತ್ತಿದೆ. ಹೀಗಾಗಿ ವಿವಿಧೆಡೆ ಮಳೆಗಾಲ ರೀತಿಯ ಅನುಭವವಾಗುತ್ತಿದೆ. ತಾಪಮಾನ ಕೊಂಚ ತಗ್ಗಿದೆ.

ಸಮುದ್ರ ಮಟ್ಟಕ್ಕಿಂತ 1.5 ಕಿಮೀ ಎತ್ತರದ ಗಾಳಿ..

ಇನ್ನೂ ದಕ್ಷಿಣ ರಾಯಲಸೀಮಾ, ಆಂಧ್ರಪ್ರದೇಶದ ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಂಡು ಬಂದಿದೆ. ಇದು ಸದ್ಯಕ್ಕೆ ಕುಗ್ಗುವ, ತೀವ್ರ ಕಡಿಮೆ ಆಗುವ ಲಕ್ಷಣಗಳು ಇಲ್ಲ. ಇದು ತನ್ನ ಮೂಲ ಸ್ಥಳದಿಂದ ಪೂರ್ವ ಮಧ್ಯಪ್ರದೇಶ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ಎತ್ತರದಲ್ಲಿಯೇ ಸಾಗಲಿದೆ. ಈ ವೇಳೆ ಅದರ ಸ್ವರೂಪ (ಚಂಡಮಾರುತದ ಪರಿಚಲನೆ) ಬದಲಾವಣೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Increased intensity of Cyclonic Circulation Over Sea IMD Heavy Rain Alert in These Parts Weather

ಪೂರ್ವ ಮಧ್ಯಪ್ರದೇಶದ ಭೂಮಿ ಮೇಲಿನಿಂದ ಮರಾಠವಾಡ ಮತ್ತು ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಮೇಲೆನಲ್ಲಿ ಸ್ಟ್ರಾಫ್ ಗಾಳಿ ಬೀಸಿದೆ. ಇದು ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸಿದೆ. ಇದೆಲ್ಲ ಕಾರಣಗಳಿಂದ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ.

ಸದ್ಯ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಈ ಹವಾಮಾನ ಬದಲಾವಣೆಗಳು ಸದ್ಯಕ್ಕೆ ಕುಗ್ಗುವ ಸಾಧ್ಯತೆ ಇಲ್ಲ. ಸದ್ಯದ ಹವಾಮಾನ ಮುನ್ಸೂಚನೆ ನೋಡಿದರೆ ವೈಪರೀತ್ಯಗಳ ತೀವ್ರತೆ ಕುಗ್ಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಭಾರೀ ಮಳೆ, ಬಿರುಗಾಳಿ, ಬದಲಾವಣೆಗಳ ತೀವ್ರತೆ ಏರಿಕೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+