ಎಸ್‌ಡಿಎಂನಲ್ಲಿ ಸೋಂಕು ಹೆಚ್ಚಳ: ಒಡಿಶಾ ಶಾಲೆಯಲ್ಲೂ ಕೊರೊನಾ ಸ್ಪೋಟ

ಧಾರವಾಡ/ಒಡಿಶಾ, ನವೆಂಬರ್ 28: ಇತ್ತೀಚಿಗೆ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪೋಷಕರಲ್ಲಿ ದಿನಕಳೆದಂತೆ ಆತಂಕ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ರಾಜ್ಯದ ಧಾರವಾಡ ಜಿಲ್ಲೆಯ ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ವಿದ್ಯಾರ್ಥಿಗಳಿಗೆ ಹರಡಿತ್ತು. ಇಂದು ಪ್ರಕರಣಗಳ ಸಂಖ್ಯೆ 306ಕ್ಕೆ ಏರಿಕೆಯಾಗಿದೆ. ಜೊತೆಗೆ ಒಡಿಶಾದ ಸರ್ಕಾರಿ ಬಾಲಕಿಯರ ಶಾಲೆಯ 25 ವಿದ್ಯಾರ್ಥಿಗಳ ಪರೀಕ್ಷೆ ಪಾಸಿಟಿವ್ ಬಂದಿದೆ.

ಅವಳಿ ನಗರದಲ್ಲಿ ಕೊರೊನಾ ಸ್ಪೋಟಗೊಂಡಿದ್ದು ಧಾರವಾಡ ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 306ಕ್ಕೆ ಏರಿಕೆಯಾಗಿದ್ದು ಆತಂಕ ಹೆಚ್ಚಿಸಿದೆ. ಇದರಿಂದಾಗಿ ಆವರಣದಲ್ಲಿರುವ ಎರಡು ಹಾಸ್ಟೆಲ್‌ಗಳನ್ನು ಸೀಲ್ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಂಪಸ್‌ನಲ್ಲಿ ಚಲನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಶನಿವಾರ ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಮಾತನಾಡಿ, ಕೋವಿಡ್ -19 ಕ್ಲಸ್ಟರ್ ಆಗಿ ಮಾರ್ಪಟ್ಟಿದೆ. ಕ್ಯಾಂಪಸ್‌ನಲ್ಲಿ 281 ಜನರಿಗೆ ಈ ವಾರ ಈ ವಾರ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದರು.

"ಕಾಲೇಜಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿ ಕೊರೊನಾ ಹರಡಿತು ಎಂದು ನನಗೆ ಹೇಳಲಾಗಿದೆ. ನಾವು ಕಾಲೇಜಿನ ಎಲ್ಲಾ 1,788 ವಿದ್ಯಾರ್ಥಿಗಳನ್ನು ಪರೀಕ್ಷಿಸಿದ್ದೇವೆ. ಕೆಲವು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ಒಂದು ಅಂತಾರಾಷ್ಟ್ರೀಯ ಶಾಲೆಯು 34 ಪ್ರಕರಣಗಳು ಮತ್ತು ಇನ್ನೊಂದು 12 ಪ್ರಕರಣಗಳನ್ನು ವರದಿ ಮಾಡಿದೆ. ಈ ಪ್ರಕರಣಗಳಲ್ಲಿ ಯಾವುದೂ ತೀವ್ರವಾಗಿಲ್ಲ" ಎಂದು ಕೆ ಸುಧಾಕರ್ ಹೇಳಿದರು.

Increase Infection In SDM: Corona explosion in Odisha school

ಶನಿವಾರ ಬೆಳಗ್ಗೆ ತನಕ 1500ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳು ಪೂರ್ಣಗೊಂಡಿದ್ದು, 1822 ಜನರ ಕೊರೊನಾ ಪರೀಕ್ಷಾ ಫಲಿತಾಂಶ ಬಾಕಿ ಉಳಿದಿವೆ. ಪರೀಕ್ಷಾ ವರದಿ ಇಂದು ಬೆಳಗ್ಗೆ ಬಂದಿದ್ದು ಸೋಂಕಿತರ ಸಂಖ್ಯೆ 306ಕ್ಕೆ ಏರಿಕೆಯಾಗಿದೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಸ್‌ಡಿಎಂ ಕಾಲೇಜಿನ ಕೋವಿಡ್ ಸ್ಫೋಟ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿದ್ದು, ಸೋಂಕಿತ ರೋಗಿಗಳಿಗೆ ಯಾವುದೇ ತೀವ್ರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಅವರು ಎಂಟು ಆಂಬ್ಯುಲೆನ್ಸ್‌ಗಳನ್ನು ಮತ್ತು ಅಗತ್ಯವಿರುವ ಸಿಬ್ಬಂದಿ ಮತ್ತು ವೈದ್ಯರನ್ನು ನಿಯೋಜಿಸಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಸಂಪನ್ಮೂಲಗಳಿದ್ದು, ಆಸ್ಪತ್ರೆ ಮತ್ತು ಕಾಲೇಜು ಆವರಣದ ಹೊರಗೆ ಹರಡುವುದನ್ನು ತಡೆಯಲು ಜಿಲ್ಲಾಧಿಕಾರಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಒಡಿಶಾದಲ್ಲೂ ಕೊರೊನಾ ಸ್ಪೋಟ

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಸರ್ಕಾರಿ ಬಾಲಕಿಯರ ಶಾಲೆಯ 25 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಡಾ.ರೂಪವನೂ ಮಿಶ್ರಾ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸೋಂಕಿತ ವಿದ್ಯಾರ್ಥಿಗಳನ್ನು ಬುಡಕಟ್ಟು ವಿದ್ಯಾರ್ಥಿಗಳ ವಸತಿ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಶಾಲೆಯಲ್ಲಿ ಸುಮಾರು 256 ವಿದ್ಯಾರ್ಥಿಗಳು ಮತ್ತು 20 ಸಿಬ್ಬಂದಿ ಇದ್ದು, ಜಿಲ್ಲಾಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಸಬ್ ಕಲೆಕ್ಟರ್ ಡಾ.ರಜನಿಕಾಂತ್ ಬಿಶ್ವಾಲ್ ಶಾಲೆಯಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

Increase Infection In SDM: Corona explosion in Odisha school

"ಕೆಲವು ವಿದ್ಯಾರ್ಥಿಗಳು ಎರಡು ದಿನಗಳಿಂದ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಆದ್ದರಿಂದ ನಾವು ಕ್ಷಿಪ್ರ ಕೋವಿಡ್ -19 ಪರೀಕ್ಷೆಯನ್ನು ಮಾಡಿದ್ದೇವೆ. 22 ಸೋಂಕಿತರನ್ನು ಪತ್ತೆಹಚ್ಚಿದ್ದೇವೆ" ಎಂದು ಡಾ ಮಿಶ್ರಾ ತಿಳಿಸಿದರು.

"ಮುಂದೆ, ನಾವು ಇನ್ನೂ ಕೆಲ ವಿದ್ಯಾರ್ಥಿಗಳಲ್ಲೂ ಕೊರೊನಾ ಸೋಂಕು ಇರುವುದನ್ನು ಕಂಡುಕೊಂಡಿದ್ದೇವೆ. ಕೆಲವು ವಿದ್ಯಾರ್ಥಿಗಳು ನಿನ್ನೆ (ವಸತಿ) ಶಾಲೆಗೆ ಬಂದಿದ್ದರು. ಅವರು ಸೋಂಕನ್ನು ತಂದಿರಬಹುದು ಎಂದು ನಾವು ಭಾವಿಸುತ್ತೇವೆ. ಆಂಬ್ಯುಲೆನ್ಸ್‌ನೊಂದಿಗೆ ನಮ್ಮ ವೈದ್ಯಕೀಯ ತಂಡವು ಅಲ್ಲಿದೆ ಮತ್ತು ಡಾ ಅನಿತಾ ಸಿಂಗ್ ನಿಯಮಿತವಾಗಿ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+