ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದಿಲ್ಲದೇ ಹೆಚ್ಚಾಗುತ್ತಿದೆ ಮರು ಸೋಂಕಿನ ಪ್ರಕರಣ; ಎಚ್ಚರಿಕೆ ಕೊಟ್ಟ ಕೇಂದ್ರ

|
Google Oneindia Kannada News

ನವದೆಹಲಿ, ಜುಲೈ 14: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. ಆದರೆ ಹಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ತಗ್ಗಿಲ್ಲ. ಜೊತೆಗೆ ಕೆಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ಸೋಂಕಿತ ದರ ಏರಿಕೆಯಾಗಿರುವುದಾಗಿ ಗೃಹ ಸಚಿವಾಲಯ ಎಚ್ಚರಿಸಿದೆ.

ಈ ಕುರಿತು ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು, ಜನರು ಕೊರೊನಾ ನಿಯಮಗಳ ಪಾಲನೆಯೆಡೆಗೆ ಗಮನ ಹರಿಸುವಂತೆ ಸರ್ಕಾರಗಳು ನಿಗಾ ವಹಿಸಬೇಕು ಎಂದು ಸಲಹೆ ನೀಡಿದೆ. ಸದ್ದಿಲ್ಲದೇ ಮರು ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಎಚ್ಚರಿಕೆಯಿಂದಿರುವುದು ಅವಶ್ಯಕ ಎಂದು ತಿಳಿಸಿದೆ. ಮುಂದೆ ಓದಿ...

"ಮಿಕ್ಸ್‌ ಅಂಡ್ ಮ್ಯಾಚ್" ಕೊರೊನಾ ಲಸಿಕೆ ಪ್ರಯೋಗ; WHO ಎಚ್ಚರಿಕೆ ಕಡೆಗಣಿಸುತ್ತಿದೆಯೇ ಭಾರತ?

 ಸಾರ್ವಜನಿಕ ಸಾರಿಗೆ, ಗಿರಿಧಾಮಗಳಲ್ಲಿ ನಿಯಮ ಪಾಲನೆಯೇ ಇಲ್ಲ

ಸಾರ್ವಜನಿಕ ಸಾರಿಗೆ, ಗಿರಿಧಾಮಗಳಲ್ಲಿ ನಿಯಮ ಪಾಲನೆಯೇ ಇಲ್ಲ

ದೇಶದ ಹಲವೆಡೆ ಕೊರೊನಾ ನಿಯಮಗಳ ಉಲ್ಲಂಘನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲೂ ಸಾರ್ವಜನಿಕ ಸಾರಿಗೆ ಹಾಗೂ ಗಿರಿಧಾಮಗಳಲ್ಲಿ ಜನರು ಕೊರೊನಾ ನಿಯಮಗಳನ್ನು ಬೇಕಾಬಿಟ್ಟಿ ಉಲ್ಲಂಘನೆ ಮಾಡುತ್ತಿದ್ದಾರೆ. ಇದು ಹಲವು ರಾಜ್ಯಗಳಲ್ಲಿ ಮರು ಸೋಂಕಿತ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದೆ. ಮರು ಸೋಂಕಿನ ಪ್ರಮಾಣ 1.0ಕ್ಕಿಂತ ಮೇಲಿದ್ದರೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

 ಕೊರೊನಾ ಎರಡನೇ ಅಲೆ ಕೊನೆಯಾಗಿಲ್ಲ

ಕೊರೊನಾ ಎರಡನೇ ಅಲೆ ಕೊನೆಯಾಗಿಲ್ಲ

ಅಂಗಡಿಗಳು, ಮಾಲ್‌ಗಳು, ಮಾರುಕಟ್ಟೆಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು, ಬಸ್ ನಿಲ್ದಾಣಗಳು, ರೈಲ್ವೆ ಪ್ಲಾಟ್‌ಫಾರಂಗಳು, ಔತಣ ಕೂಟಗಳು, ಮದುವೆ ಸಮಾರಂಭಗಳು, ಸ್ಟೇಡಿಯಂ, ಕ್ರೀಡಾ ಸಂಕೀರ್ಣಗಳು ಇಂಥ ಜನಸಂದಣಿ ಇರುವ ಕಡೆಗಳಲ್ಲಿ ಕೊರೊನಾ ನಿಯಮ ಪಾಲನೆ ಕುರಿತು ಆಡಳಿತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಗೃಹ ಸಚಿವಾಲಯ ತಿಳಿಸಿದ್ದು, ಕೊರೊನಾ ಎರಡನೇ ಅಲೆ ಕೊನೆಯಾಗಿಲ್ಲ ಎಂಬುದನ್ನು ಒತ್ತಿ ಹೇಳಿದೆ.

ಕರ್ನಾಟಕ; ದಿನಕ್ಕೆ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ, ಪೂರೈಕೆ ಎಷ್ಟು?ಕರ್ನಾಟಕ; ದಿನಕ್ಕೆ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ, ಪೂರೈಕೆ ಎಷ್ಟು?

 ಕೊರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದಿದ್ದ ಪ್ರಧಾನಿ

ಕೊರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದಿದ್ದ ಪ್ರಧಾನಿ

ದೇಶದಲ್ಲಿ ಲಸಿಕಾ ಅಭಿಯಾನ ಗಣನೀಯವಾಗಿ ಹೆಚ್ಚಾಗಿದೆ. ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆಯೂ ತಗ್ಗಿದೆ. ಇಂಥ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿಯಮಗಳ ಉಲ್ಲಂಘನೆ ಸಲ್ಲದು ಎಂದು ಗೃಹ ಸಚಿವಾಲಯ ಹೇಳಿದೆ.
ಮಾಸ್ಕ್‌ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುವಲ್ಲಿ ಸಡಿಲತೆ ಕಾಣುತ್ತಿದೆ ಎಂದು ಪ್ರಧಾನಿ ಮೋದಿ ಈಚೆಗೆ ಹೇಳಿಕೆ ನೀಡಿದ್ದರು. ಇದು ಕೊರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದರು. ಗಿರಿಧಾಮಗಳು, ನಗರ ಮಾರುಕಟ್ಟೆಗಳಲ್ಲಿ ಮಾಸ್ಕ್ ಇಲ್ಲದೇ ನಿಯಮಗಳನ್ನು ಮರೆತು ಜನರು ಓಡಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪ್ರಧಾನಿ ಈ ಎಚ್ಚರಿಕೆ ನೀಡಿದ್ದರು.

"ಒಂದು ಚಿಕ್ಕ ಬದಲಾವಣೆಯೂ ದೊಡ್ಡ ಪರಿಣಾಮ ತರಬಹುದು"

ಒಬ್ಬ ಸೋಂಕಿತ ವ್ಯಕ್ತಿಯಿಂದ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದರ ಪ್ರಮಾಣವನ್ನೇ "ಆರ್" (reproductive rate) ದರ ಎನ್ನಲಾಗುತ್ತದೆ. ಇಂದು ಬೆಳಿಗ್ಗೆ "ಆರ್" ಮೌಲ್ಯವು 0.95 ಆಗಿತ್ತು. ಒಂದು ವಾರದ ಹಿಂದೆ 0.89 ಇದ್ದು, ನಾಲ್ಕು ವಾರಗಳ ಹಿಂದೆ ಈ ದರ 0.74 ಆಗಿತ್ತು. ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭ ಈ ಸಂಖ್ಯೆ 1.32 ಇತ್ತು.

ಹೀಗೆ ಸದ್ದೇ ಇಲ್ಲದೇ ಕೊರೊನಾ ಏರಿಕೆಯಾಗುತ್ತಿದ್ದು, ಒಂದು ಚಿಕ್ಕ ಬದಲಾವಣೆಯೂ ದೊಡ್ಡ ಪರಿಣಾಮ ತರಬಹುದು ಎಂದು ಚೆನ್ನೈನ ಗಣಿತ ವಿಜ್ಞಾನ ಇನ್‌ಸ್ಟಿಟ್ಯೂಟ್ ವಿಜ್ಞಾನಿ ಹೇಳಿದ್ದಾರೆ.

English summary
Home Ministry today issued an advisory urging governments to ensure members of the public follow COVID-19 protocols amid concern over an increase in the 'R' factor or reproduction rate,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X