ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಭವಿಷ್ಯದ ವಿದ್ಯುತ್ ಪೂರೈಕೆಗೆ ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ : ಪ್ರಲ್ಹಾದ ಜೋಶಿ

|
Google Oneindia Kannada News

ಇಂದೋರ್, ನವೆಂಬರ್ 9: 2030ರ ವೇಳೆಗೆ ದೇಶಕ್ಕೆ ಬೇಕಾಗುವ ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು ಉತ್ಪಾದನೆ ಹೆಚ್ಚಳ ಅನಿವಾರ್ಯ ಎಂದು ಕೇಂದ್ರ ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಂದೋರ್‌ನಲ್ಲಿ ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, " ಕಲ್ಲಿದ್ದಲು ಗಣಿಗಾರಿಕೆ ವಿಚಾರದಲ್ಲಿ ಭಾರತ ಆತ್ಮನಿರ್ಭರ್ ನತ್ತ ಸಾಗುತ್ತಿದೆ. ಕಲ್ಲಿದ್ದಲು ಗ್ಯಾಸಿಫಿಕೇಶನ್ ಪ್ರಾಜೆಕ್ಟ್ ಹಮ್ಮಿಕೊಳ್ಳಲಾಗಿದೆ‌. ಖಾಸಗಿ ವಲಯಕ್ಕೂ ಕಲ್ಲಿದ್ದಲು ಉತ್ಪಾದನೆಗೆ ಅವಕಾಶ ಕಲ್ಲಿಸಿಕೊಡಲಾಗಿತ್ತು, 6 ನೇ ಹಂತದ 144 ಕಲ್ಲಿದ್ದಲು ಬ್ಲಾಕ್ಸ್‌ಗಳನ್ನ ಹರಾಜು ನಡೆಸಿದ್ದೇವೆ. ಇದರಿಂದ ಕಲ್ಲಿದ್ದಲು ಉತ್ಪಾದನೆ ಹೆಚ್ಚಲಿದೆ ಎಂದು ಜೋಶಿ ತಿಳಿಸಿದರು.

ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಸಂಪೂರ್ಣ ವೇಳಾಪಟ್ಟಿ ಹೀಗಿದೆಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಸಂಪೂರ್ಣ ವೇಳಾಪಟ್ಟಿ ಹೀಗಿದೆ

2030 ರ ವೇಳೆಗೆ 1.3 ರಿಂದ 1.5 BT ಯ ನಿರೀಕ್ಷಿತ ಬೇಡಿಕೆಯೊಂದಿಗೆ ಭಾರತದ ಇಂಧನ ಭದ್ರತೆಗೆ ಕಲ್ಲಿದ್ದಲು ಅನಿವಾರ್ಯವಾಗಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಅನಿವಾರ್ಯ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಯತ್ತ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಒತ್ತು ನೀಡಲಾಗ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

Increase in Coal Production is essential to Generate Electricity: Pralhad Joshi

ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು ಪ್ರಸ್ತುತ ತಲಾ ವಿದ್ಯುತ್ ಬಳಕೆಯ ಹತ್ತನೇ ಒಂದು ಭಾಗವನ್ನು ಹೊಂದಿಲ್ಲ. 2040ರ ವೇಳೆಗೆ ತಲಾ ಬಳಕೆ ದ್ವಿಗುಣಗೊಳ್ಳಲಿದೆ. ಇದಕ್ಕಾಗಿ ಕಲ್ಲಿದ್ದಲು ಅಗತ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಜೋಶಿ ಹೂಡಿಕೆದಾರರಿಗೆ ಮಾಹಿತಿ ನೀಡಿದರು

ಅಲ್ಲದೇ ನಿಶ್ಯಕ್ತ ಕೆಲವು ಗಣಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಟ್ರಾನ್ಸಿಶನ್ ಪ್ರಿನ್ಸಿಪಲ್ಸ್ ಆಧಾರಿತ ಪ್ಯಾನ್-ಇಂಡಿಯಾ ಮೈನ್ ಕ್ಲೋಸರ್ ಫ್ರೇಮ್‌ವರ್ಕ್ ಅನ್ನು ಅಳವಡಿಸಿಕೊಳ್ಳಲು ಒತ್ತು ನೀಡಲಾಗಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

Increase in Coal Production is essential to Generate Electricity: Pralhad Joshi

ಇನ್ನೂ ಸಭೆಯಲ್ಲಿ 4 ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಯಿತು. ಟ್ರಾನ್ಸಿಶನ್ ಅನ್ನು ಅಂತಿಮಗೊಳಿಸಲು ಪ್ರಯತ್ನ, ಪರಿಸರ ಸ್ನೇಹಿ ಸುಧಾರಿತ ತಂತ್ರಜ್ಞಾನ ಬಳಕೆ ಹಾಗೂ ಕಲ್ಲಿದ್ದಲು ಗಣಿಕಗಾರಿಕೆ ಅವಲಂಬಿತರಿಗೆ ಜೀವನೋಪಾಯದ ರಕ್ಷಣೆ ಕುರಿತು ಚರ್ಚೆ ನಡೆಸಲಾಯಿತು.

ಉಜ್ಜಯಿನಿ ಮಹಾಕಾಲೇಶ್ವರ ಸನ್ನಿಧಾನಕ್ಕೆ ಜೋಶಿ ಭೇಟಿ

ಸಚಿವ ಪ್ರಲ್ಹಾದ್ ಜೋಶಿ ಇಂದು ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿ‌ದರು. ಮಂಗಳವಾರ ಮುಂಜಾನೆ 4 ಗಂಟೆಗೆ ನಡೆದ ಭಸ್ಮ ಆರತಿಯಲ್ಲಿ ಪಾಲ್ಗೊಂಡರು. ದೇಶದ ಜನರಿಗೆ ಒಳಿತಾಗಲಿ ಎಂದು ಮಹಾಕಾಲೇಶ್ವರ ಸನ್ನಿಧಾನದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ ಮಹಾಕಾಲ್ ಕಾರಿಡಾರ್‌ ಅನ್ನು ಇದೇ ವೇಳೆ ಪ್ರಲ್ಹಾದ್ ಜೋಶಿ ವೀಕ್ಷಿಸಿದರು.

English summary
Coal will play an important role in India's future electricity supply, said Union coal minister Pralhad Joshi in Indore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X