Budget 2022: ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಬದಲಾವಣೆ ಆಗಿಲ್ಲ
ಕೊವಿಡ್ 19 ಸಂಕಷ್ಟದ ನಡುವೆ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯ 4ನೇ ಬಜೆಟ್ ಇಂದು ಮಂಡನೆಯಾಗಿದೆ. ವೈಯಕ್ತಿಕ ತೆರಿಗೆದಾರರಿಗೆ ಕೊಂಚ ರಿಲೀಫ್ ನೀಡುವ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಮೂಲ ಆದಾಯ ತೆರಿಗೆ ಮಿತಿಯನ್ನು ಬದಲಾಯಿಸಲು ಮುಂದಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಲಕ್ಷ ರು ತನಕ ವಾರ್ಷಿಕ ಆದಾಯವಿರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
Koo Appವಿಶೇಷವಾಗಿ ಕಾವೇರಿ ಸೇರಿದಂತೆ ನದಿಗಳ ಜೋಡಣೆ, ಉದ್ಯೋಗ ಸೃಷ್ಟಿ, 3.8 ಕೋಟಿ ಕುಟುಂಬಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲು 60,000 ಕೋಟಿ ರೂ, ಕೃಷಿ, ಪಿಎಂ ಗತಿಶಕ್ತಿ, ಆರೋಗ್ಯ ಸೇವೆ, ಹೂಡಿಕೆ ಉತ್ತೇಜನ ವಲಯಗಳಿಗೆ ಆದ್ಯತೆ ನೀಡಿರುವುದು ರಾಜ್ಯದ ಬೆಳವಣಿಗೆಗೆ ಗಣನೀಯ ನೆರವು ನೀಡಲಿದೆ. (2/2) #Budget2022 #AtmaNirbharBharatKaBudget - BS Yediyurappa (@bsybjp) 1 Feb 2022
ಕಳೆದ ಒಂದು ವರ್ಷದ ಮಿನಿ ಬಜೆಟ್‌ನಲ್ಲಿ ಮಧ್ಯಮ ವರ್ಗದ ಕೈಲಿಗೆ ಹೆಚ್ಚಿನ ನಗದು ಸೇರಲಿದ್ದು, ಇದರಿಂದ ವ್ಯಾಪಾರ, ವಹಿವಾಟು, ಖರೀದಿ ಪ್ರಕ್ರಿಯೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಕಳೆದ ಬಜೆಟ್ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಪುನರ್ ರಚನೆ ಮಾಡಲಾಗಿದ್ದು, ಈ ಬಾರಿ ಸ್ಲ್ಯಾಬ್‌ನಲ್ಲಿ ಬದಲಾವಣೆಯಾಗಿಲ್ಲ. ಕಳೆದ ಬಾರಿ ವೇತನದಾರ ವರ್ಗಗಳ ಬೇಡಿಕೆಯನ್ನು ಪರಿಗಣಿಸಿಲ್ಲ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು ನಿರೀಕ್ಷೆಯಂತೆ ಬದಲಾಯಿಸಿಲ್ಲ.

ಆದಾಯ ತೆರಿಗೆ ಪಾವತಿ ಸ್ಲ್ಯಾಬ್ಸ್
ಮೂಲ ಆದಾಯ ತೆರಿಗೆ ಮಿತಿ 2.5 ಲಕ್ಷ ರು 5 ಲಕ್ಷ ರು ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.
- 5 ಲಕ್ಷ ರು ನಿಂದ 7.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 10% ತೆರಿಗೆ
- 7.5 ಲಕ್ಷ ರು ನಿಂದ1 0 ಲಕ್ಷ ರು ತನಕ ಆದಾಯ ಉಳ್ಳವರಿಗೆ 15% ತೆರಿಗೆ
- 10 ಲಕ್ಷ ರು ನಿಂದ 12.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 20% ತೆರಿಗೆ
- 12.5 ಲಕ್ಷ ರು ನಿಂದ 15 ಲಕ್ಷ ರು ತನಕ ಆದಾಯ ಉಳ್ಳವರಿಗೆ 25% ತೆರಿಗೆ
- 15 ಲಕ್ಷ ರು ಮೇಲ್ಪಟ್ಟ ಆದಾಯ ಉಳ್ಳವರಿಗೆ ಶೇ 30 ರಷ್ಟು ತೆರಿಗೆ

ಮೂಲ ತೆರಿಗೆ ಪಾವತಿ ಮಿತಿ
ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.

ಐಟಿ ರಿಟರ್ನ್ಸ್
ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ
* ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.
* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.
* ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.
* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.
* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ. 2019-20ನೇ ಸಾಲಿನ ಬಜೆಟ್ ನಲ್ಲೂ ಈ ಎಲ್ಲಾ ಅಂಶಗಳನ್ನು ಮುಂದುವರೆಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋಟಿ ರು ಆದಾಯ ಇದ್ದವರಿಗೆ ಆದಾಯ ಮಿತಿ
* 2022-23 ರ ಕೇಂದ್ರ ಬಜೆಟ್ ನಲ್ಲಿ ಹೊಸ ಘೋಷಣೆಯಾಗಿ TDS ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೂ ರಾಷ್ಟ್ರೀಯ ಪಿಂಚಣಿ ಯೋಜನೆ ಅನ್ವಯವಾಗುವಂತೆ ಮಿತಿ ಶೇ 10 ರಿಂದ 14ಕ್ಕೇರಿಕೆ
* ವಾರ್ಷಿಕ 2 ಕೋಟಿ ರು ನಿಂದ 5 ಕೋಟಿ ರು ಆದಾಯ ಹೊಂದಿದವರಿಗೆ ತೆರಿಗೆ ಶೇ 3ರಷ್ಟು ಹೆಚ್ಚಳ.
* ವಾರ್ಷಿಕ 5 ಕೋಟಿ ರುಗೂ ಅಧಿಕ ಆದಾಯ ಹೊಂದಿದವರಿಗೆ ಶೇ 7ರಷ್ಟು ತೆರಿಗೆ
ಎರಡರಿಂದ ಐದು ಕೋಟಿ ಮಧ್ಯೆ ಆದಾಯ ಇರುವವರಿಗೆ ತೆರಿಗೆ ಪ್ರಮಾಣವು 39 ಪರ್ಸೆಂಟ್ ಆಗುತ್ತದೆ. ಇನ್ನು ಆದಾಯವು 5 ಕೋಟಿ ಮೀರಿದರೆ ಸರ್ ಚಾರ್ಜ್ ಏರಿಕೆ ನಂತರ 42.74 ಪರ್ಸೆಂಟ್ ತೆರಿಗೆ ಬೀಳುತ್ತದೆ. ಇನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ಎರಡು ಕೋಟಿ ನಗದು ವಿಥ್ ಡ್ರಾ ಮಾಡಿದರೆ ಎರಡು ಪರ್ಸೆಂಟ್ ತೆರಿಗೆ ಬೀಳುತ್ತದೆ.

ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಜಾರಿಗೆ
ದೇಶದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಆದಾಯ ತೆರಿಗೆ ಸಲ್ಲಿಕೆ ವೇಳೆ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ. ವಿಶ್ವಾಸಾರ್ಹ ತೆರಿಗೆ, ವ್ಯಾಜ್ಯವನ್ನು ಕಡಿಮೆ ಮಾಡಿ, ದೋಷಗಳನ್ನು ಸರಿಪಡಿಸಿ, ವೇಗವರ್ಧಿತ ವಾಗಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಅಂತ್ಯದ ನವೀಕರಿಸಿದ ರಿಟರ್ನ್ ಅನ್ನು ಫೈಲ್ ಮಾಡಲು ಅವಕಾಶ ನೀಡಲಾಗಿದೆ.
-ಪರ್ಯಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು. ಸಹಕಾರ ಸಂಘಗಳು ನೀಡುತ್ತಿದ್ದ 18 ಮತ್ತು 1.5 % ತೆರಿಗೆ ಹೆಚ್ಚುವರಿ ಶುಲ್ಕಕ್ಕೆ 15 % ಗೆ. ಒಂದು ಕೋಟಿಯಿಂದ 10 ಕೋಟಿ ವ್ಯವಹಾರ ಇರುವ ಸಹಕಾರ ಸಂಘಗಳ ತೆರಿಗೆ 12 ರಿಂದ 7 % ಗೆ ಇಳಿಕೆ . ಇದರಿಂದ ಗ್ರಾಮೀಣ ಮತ್ತು ಕೃಷಿ ಸಮುದಾಯಕ್ಕೆ ಲಾಭವಾಗಲಿದೆ. ಮುಂದಿನ ವರ್ಷದ ವರೆಗೆ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, 2023 ಮಾರ್ಚ್ ವರೆಗೆ ತೆರಿಗೆ ಕಟ್ಟಬೇಕಾಗಿಲ್ಲ
Recommended Video
ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ. ಆರ್ಥಿಕ ಬಿಕ್ಕಟ್ಟು, ಹಿಂಜರಿತ, ಕುಸಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೃಹಸಾಲದ ಲಾಭಾಂಶದ ಮೇಲೆ ತೆರಿಗೆ ವಿನಾಯಿತಿ ಮುಂದುವರಿಕೆ, ಒಂದು ವರ್ಷದ ತನಕ ಲಾಭಾಂಶ ತೆರಿಗೆ ಕಟ್ಟುವಂತಿಲ್ಲ.












Click it and Unblock the Notifications