ಆದಾಯ ಎಲ್ಲಿಂದ, ಖರ್ಚು ಎಲ್ಲಿಗೆ: ಪೈಸಾವಾರು ಲೆಕ್ಕದಲ್ಲಿ

Posted By:
Subscribe to Oneindia Kannada

ನವದೆಹಲಿ, ಫ್ರೆಬ್ರವರಿ 1: ಬುಧವಾರ, ಲೋಕಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು 2017-18ನೇ ವರ್ಷದ ವಿತ್ತೀಯ ಬಜೆಟ್ ಮಂಡಿಸಿದ್ದಾರೆ.

ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಉಪಯೋಗವಾಗುವ ಕೆಲವಾರು ತೆರಿಗೆ ಕಡಿತದಂತಹ ಘೋಷಣೆಗಳನ್ನು ಮಾಡಲಾಗಿದೆ. ಇನ್ನು ತಂಬಾಕು ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ.

ಇಂಥ ಹಲವಾರು ಸರ್ಕಸ್ ಗಳ ನಡುವೆ ವಿತ್ತ ಸಚಿವ ಅರುಣ್ ಜೇಟ್ಲಿಯವರು ಆದಾಯವನ್ನು ಹೇಗೆ ತರುತ್ತಾರೆ, ಬಂದ ಆದಾಯದಲ್ಲಿ ಖರ್ಚುಗಳನ್ನು ಹೇಗೆ ನಿಭಾಯಿಸುತ್ತಾರೆ. ಆ ನಿಟ್ಟಿನಲ್ಲಿ ಖರ್ಚು ಯಾವ್ಯಾವ ರೀತಿಯಲ್ಲಿ ಇವೆ. ಇದೆಲ್ಲರದ ಸಂಕ್ಷಿಪ್ತ ರೂಪವನ್ನು ಪೈಸೆಗಳ ಆಧಾರದಲ್ಲಿ ಇಲ್ಲಿ ನೀಡಲಾಗಿದೆ. ಇದು ಬಜೆಟ್ ಅನ್ನು ಒಟ್ಟಾರೆಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.

ಆದಾಯ ಹೀಗಿದೆ: ಕೇಂದ್ರಕ್ಕೆ ಪ್ರಮುಖವಾಗಿ ಆದಾಯ ಹರಿದು ಬರುವ ದಾರಿಯೆಂದರೆ ಅದು ಸಾಲ ವಸೂಲಾತಿ ಹಾಗೂ ಕಾರ್ಪೊರೇಟ್ ತೆರಿಗೆಯಿಂದ. ಅದಾದ ಮೇಲೆ, ವೈಯಕ್ತಿಕ ಆದಾಯ ತೆರಿಗೆಯು ಕೇಂದ್ರಕ್ಕೆ ಮಹತ್ವದ ಆದಾಯ ತಂದುಕೊಡುವ ಮತ್ತೊಂದು ವಿಭಾಗ. ಇನ್ನುಳಿದಂತೆ, ಅಬಕಾರಿ, ಸೇವಾ ತೆರಿಗೆಗಳಿಂದಲೂ ಗಣನೀಯ ಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಆದಾಯ ಹರಿದು ಬರುತ್ತದೆ. ಈ ಆದಾಯದ ಒಟ್ಟಾರೆ ಚಿತ್ರಣ ಪೈಸೆಗಳ ಲೆಕ್ಕದಲ್ಲಿ ಇಲ್ಲಿ ನೀಡಲಾಗಿದೆ.

Income, Exprenditure regarding Union Budget in terms of Paisa.

- ಸಾಲ ವಸೂಲಾತಿ ಹಾಗೂ ಉದ್ದಿಮೆಗಳ ಮೂಲಕ 19 ಪೈ.
- ಕಾರ್ಪೊರೇಟ್ ತೆರಿಗೆಯಿಂದ 19 ಪೈ.
- ಆದಾಯ ತೆರಿಗೆಯಿಂದ 16 ಪೈ.
- ಕೇಂದ್ರ ಅಬಕಾರಿ ಸುಂಕದಿಂದ 14 ಪೈ.
- ಸೇವಾ ತೆರಿಗೆ ಹಾಗೂ ಇತರೆ ತೆರಿಗೆಗಳಿಂದ 10 ಪೈ.
- ತೆರಿಗೆ ವ್ಯಾಪ್ತಿಗೊಳಪಡದ ಕಂದಾಯ 10 ಪೈ.
- ಸಾಲವಲ್ಲದ ಇತರೆ ಮೂಲಗಳಿಂದ ಬರುವ ಆದಾಯ 3 ಪೈ.


ಖರ್ಚು ಹೀಗಿದೆ: ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ. 24ರಷ್ಟು ಆದಾಯ ರಾಜ್ಯಗಳಿಗೆ ತೆರಿಗೆ ರೂಪದಲ್ಲೇ ಹಂಚಿಹೋಗುತ್ತದೆ. ಇದಾದ ನಂತರ, ವಿವಿಧ ಸಾಲಗಳಿಗಾಗಿ ಭಾರತ ಕಟ್ಟಬೇಕಿರುವ ಬಡ್ಡಿ, ಕೆಲವಾರು ಯೋಜನೆಗಳಿಗಾಗಿ ನೀಡಲಾಗುವ ಅನುದಾನ... ಹೀಗೆ, ನಾನಾ ಕಾರಣಗಳಿಂದಾಗಿ ಹಣ ಹರಿದು ಹೋಗುತ್ತದೆ. ಒಂದು ರುಪಾಯಿಯಲ್ಲಿ ಯಾವ ಯಾವ ವಲಯಗಳಿಗೆ ಎಷ್ಟೆಷ್ಟು ಖರ್ಚು ಇದೆ ಎನ್ನುವುದನ್ನು ಇಲ್ಲಿ ಪೈಸೆಗಳ ಮೂಲಕ ತೋರಿಸಲಾಗಿದೆ.

Income, Exprenditure regarding Union Budget in terms of Paisa.

- ತೆರಿಗೆ ಹಾಗೂ ಸುಂಕಗಳಲ್ಲಿ ರಾಜ್ಯಗಳ ಪಾಲು 24 ಪೈ.
- ಬಡ್ಡಿ ಸಲ್ಲಿಕೆಗೆ 18 ಪೈ.
- ಇತರೆ ಖರ್ಚು ವೆಚ್ಚ 13 ಪೈ.
- ಕೇಂದ್ರೀಯ ವಲಯಾವಾರು ಯೋಜನೆಗಳಿಗೆ 11 ಪೈ.
- ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ 10 ಪೈ.
- ಸಬ್ಸಿಡಿಗಳಿಗೆ 10 ಪೈ.
-ಭದ್ರತಾ ಇಲಾಖೆಗೆ 9 ಪೈ.
-ಆರ್ಥಿಕ ಕಮೀಷನ್ ಹಾಗೂ ಇತರೆ ವರ್ಗಾವಣೆಗಳಿಗೆ 5 ಪೈ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the brief discription regarding the income and expenditure of Central government as per the Union budget of 2017-18.
Please Wait while comments are loading...