ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಶಿವ ಶಿವ ಎಂದರೆ ಭಯವಿಲ್ಲವೆಂದ ಭಕ್ತ ಕೋಟಿ

By Mahesh
|
Google Oneindia Kannada News

ಬೆಂಗಳೂರು, ಫೆ.17: ಮಾಘ ಕೃಷ್ಣ ಚತುರ್ದಶಿ ದಿನವಾದ ಇಂದು (ಫೆ.17, ಸೋಮವಾರ) ದೇಶ ದೆಲ್ಲೆಡೆ ಮಹಾ ಶಿವರಾತ್ರಿ ಭಯ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ವೇದ ಮಂತ್ರ ಘೋಷ, ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಆಯೋಜನೆಗೊಂಡಿದೆ.

ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾಲಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ದಿನದ ನಾಲ್ಕು ಯಾಮಗಳಲ್ಲಿ ಪೂಜಿಸಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಹಿಂದೂಗಳಲ್ಲಿದೆ. [ಶಿವನನ್ನು ಲಿಂಗರೂಪದಲ್ಲಿ ಏಕೆ ಪೂಜಿಸುತ್ತಾರೆ?]

ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಈ ದಿನ ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸಲಾಗುತ್ತದೆ. ಭಕ್ತಾದಿಗಳು ರಾತ್ರಿ ಇಡೀ ಎಚ್ಚರವಿದ್ದು ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ. ಪ್ರಧಾನಿ ಮೋದಿ ಅವರ ಶುಭ ಹಾರೈಕೆ...

ಪ್ರತಿ ತಿಂಗಳೂ ಚತುರ್ದಶಿಯಂದು ಮಾಸ ಶಿವರಾತ್ರಿ ಆಚರಿಸಲಾಗುತ್ತದೆ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದು. ಶಿವರಾತ್ರಿ ದಿನ ದೇಶದ ವಿವಿಧೆಡೆ ಭಕ್ತರು ಶಿವನನ್ನು ಆರಾಧಿಸಿದ ಬಗೆ, ಅಭಿಷೇಕ, ಪೂಜೆ, ಪುನಸ್ಕಾರ ಸಲ್ಲಿಸಿದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...[ಶಿವರಾತ್ರಿ ಮಹಾತ್ಮೆ ಓದಿ]

ಬೆಂಗಳೂರಿನಲ್ಲಿ ಪರಮಶಿವನ ಭಜನೆ

ಬೆಂಗಳೂರಿನಲ್ಲಿ ಪರಮಶಿವನ ಭಜನೆ

ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವ ಮಂದಿರದಲ್ಲಿ ವಿಶೇಷ ಪೂಜೆ ಸಾಂಗವಾಗಿ ನಡೆಯುತ್ತಿದೆ.PTI Photo

ಭೋಪಾಲ್ ನಲ್ಲಿ ಸಿಎಂರಿಂದ ಶಿವರಥ

ಭೋಪಾಲ್ ನಲ್ಲಿ ಸಿಎಂರಿಂದ ಶಿವರಥ

ಭೋಪಾಲ್ ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶಿವಶಂಕರನನ್ನು ಕೂರಿಸಿ ರಥ ಎಳೆದು ಮಹಾಶಿವ ರಾತ್ರಿಗೆ ಚಾಲನೆ ನೀಡಿದರು.

ಭುವನೇಶ್ವರದಲ್ಲಿ ಭಕ್ತ ಸಾಗರ

ಭುವನೇಶ್ವರದಲ್ಲಿ ಭಕ್ತ ಸಾಗರ

ಭುವನೇಶ್ವರದಲ್ಲಿ ಲಿಂಗರಾಜನನ್ನು ಪೂಜಿಸಿ ಕೃತಾರ್ಥರಾದ ಭಕ್ತಸಾಗರ.

ಬಿಕಾನೇರ್ ನಲ್ಲಿ ಶಿವಪೂಜೆ

ಬಿಕಾನೇರ್ ನಲ್ಲಿ ಶಿವಪೂಜೆ

ರಾಜಸ್ಥಾನದ ಬಿಕಾನೇರ್ ನ ಶ್ರೀಲಾಲೇಶ್ವರ ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ ಆಚರಣೆ.

ಕೋಲ್ಕತ್ತಾದಲ್ಲಿ ಶಿವರಾತ್ರಿಗಾಗಿ ವಿಶೇಷ ಪ್ರಾರ್ಥನೆ

ಕೋಲ್ಕತ್ತಾದಲ್ಲಿ ಶಿವರಾತ್ರಿಗಾಗಿ ವಿಶೇಷ ಪ್ರಾರ್ಥನೆ

ಕೋಲ್ಕತ್ತಾದ ದಕ್ಷಿಣೇಶ್ವರ ದೇಗುಲದಲ್ಲಿ ಶಿವರಾತ್ರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. PTI Photo

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗಿದೆ. PTI Photo

ಗುರ್ ಗಾಂವ್ ನಲ್ಲಿ ಶಿವನಿಗೆ ಅಭಿಷೇಕ

ಗುರ್ ಗಾಂವ್ ನಲ್ಲಿ ಶಿವನಿಗೆ ಅಭಿಷೇಕ

ಗುರ್ ಗಾಂವ್ ನಲ್ಲಿ ಅಭಿಷೇಕ ಪ್ರಿಯ ಶಿವನಿಗೆ ವಿಶೇಷ ಪೂಜೆ, ಅಭಿಶೇಕ ಸಲ್ಲಿಸಲಾಗಿದೆ.

ಕಠ್ಮಂಡುವಿನಲ್ಲಿ ಮಹಾಶಿವರಾತ್ರಿ ಆಚರಣೆ

ಕಠ್ಮಂಡುವಿನಲ್ಲಿ ಮಹಾಶಿವರಾತ್ರಿ ಆಚರಣೆ

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಮಹಾಶಿವರಾತ್ರಿ ಆಚರಣೆ ಪಶುಪತಿ ನಾಥ ದೇಗುಲದಲ್ಲಿ ನಡೆದಿದ್ದು ಹೀಗೆ..

ಕೇರಳದಲ್ಲಿ ಶಿವನಿಗೆ ತೆಪ್ಪೋತ್ಸವ

ಕೇರಳದಲ್ಲಿ ಶಿವನಿಗೆ ತೆಪ್ಪೋತ್ಸವ

ಕೇರಳದ ಕೋಯಿಕ್ಕಾಡ್ ನ ಶ್ರೀಕಂಠೇಶ್ವರ ದೇಗುಲದಲ್ಲಿ ಸೋಮವಾರ ಹಾಗೂ ಮಂಗಳವಾರ ಮಹಾಶಿವನಿಗೆ ತೆಪ್ಪೋತ್ಸವ.

English summary
In Pictures: India Celebrates Maha Shivaratri. Maha Shivaratri literally means the night of Shiva and is celebrated every year on the 13th night/14th day of the Maagha month of the Hindu calendar. This is Shivaratri celebrated on Tuesday, 17th Feb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X