• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯುಸೇನೆ ದಿನಾಚರಣೆ : ಯುದ್ಧವಿಮಾನಗಳ ಶಕ್ತಿ ಪ್ರದರ್ಶನ

By Mahesh
|

ನವದೆಹಲಿ, ಅಕ್ಟೋಬರ್ 08: ಗಾಜಿಯಾಬಾದಿನ ಹಿಂಡಾನ್ ಏರ್ ಬೇಸ್ ನಲ್ಲಿ ಭಾರತೀಯ ವಾಯುಪಡೆ ಯೋಧರು ಸಂಭ್ರಮ ಮುಗಿಲು ಮುಟ್ಟಿದೆ. ಅಕ್ಟೋಬರ್ 8ರಂದು ಏರ್ ಫೋರ್ಸ್ ಡೇ ಆಚರಿಸಲಾಗುತ್ತದೆ.

ಯೋಧರು ತಮ್ಮ ಉಕ್ಕಿನ ಹಕ್ಕಿಗಳನ್ನು ಏರಿ ಆಗಸದಲ್ಲಿ ಎತ್ತರೆತ್ತರಕ್ಕೆ ಚಿಮ್ಮಿತ್ತಾ ಚಿತ್ತಾರ ಮೂಡಿಸಿದ್ದಾರೆ. ಸಿ-17 ಗ್ಲೋಬ್ ಮಾಸ್ಟರ್ ನಂತರ ಸುಖೋಯ್ ಸು-30 ಎಂಕೆಐ ಏರ್ ಕ್ರಾಫ್ಟ್ ಹಾಗೂ ಟೈಗರ್ ಮಾಥ್ ಪುರಾತನ ವಿಮಾನ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದೆ.

ಕೊಡಗಿನ ವಿಲ್ಮಾ ಈಗ ಐಎಎಫ್ ನಲ್ಲಿ ವಿಂಗ್ ಕಮಾಂಡರ್

ಎಂಐ-17 ವಿ5 ಹೆಲಿಕಾಪ್ಟರ್, ಎಎನ್ 32 ಏರ್ ಕ್ರಾಫ್ಟ್ ನಿಂದ ಜಿಗಿಯುವ ಆಕಾಶ್ ಗಂಗಾ ತಂಡ ಸ್ಕೈ ಡೈವರ್ ಗಳು, ಭಾರತದ ತ್ರಿವರ್ಣ ಧ್ವಜದ ರಂಗು ಚೆಲ್ಲುವ ಉಕ್ಕಿನ ಹಕ್ಕಿನಗಳ ಅಬ್ಬರ ಕಣ್ಮನ ಸೆಳೆದಿದೆ.

ಬ್ರಿಟಿಷ್ ಅಧಿಪತ್ಯ ಇರುವಾಗಲೇ ಭಾರತಕ್ಕೆ ವಾಯುಸೇನೆ ಸೇರ್ಪಡೆಯಾಯಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 8 ರಂದು ವಾಯುಸೇನಾ ದಿನಾಚರಣೆ ಆಚರಿಸಲಾಗುತ್ತಿದೆ.

ಸುಖೋಯ್ ಸಾಹಸವನ್ನು ಪತ್ನಿಗೆ ಸಮರ್ಪಿಸಿದ ಪೈಲೆಟ್!

ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದೇ ಕರೆಯಲಾಗುತ್ತಿತ್ತು. ಆದರೆ, ಸ್ವಾತಂತ್ರ್ಯ ಬಂದ ಮೇಲೆ ರಾಯಲ್ ಪದ ತೆಗೆದು ಹಾಕಲಾಯಿತು. ಭಾರತೀಯ ವಾಯುಸೇನೆ ಸಂಭ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಇಲ್ಲಿ ನೋಡಿ.. ಎಲ್ಲಾ ಚಿತ್ರಗಳ ಕೃಪೆ : ಪಿಟಿಐ

 ವಾಯುಸೇನೆ ಮಹತ್ವದ ಪಾತ್

ವಾಯುಸೇನೆ ಮಹತ್ವದ ಪಾತ್

ಪಾಕಿಸ್ತಾನ ಹಾಗೂ ಚೀನಾ ವಿರುದ್ಧದ ಯುದ್ಧಗಳಲ್ಲಿ ವಾಯುಸೇನೆ ಮಹತ್ವದ ಪಾತ್ರ ವಹಿಸಿತ್ತು. ಭಾರತೀಯ ವಾಯುಸೇನೆ ಸಂಭ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಇಲ್ಲಿ ನೋಡಿ

ವಾಯುಸೇನೆ ಪ್ರಮುಖ ಕಾರ್ಯಾಚರಣೆ

ವಾಯುಸೇನೆ ಪ್ರಮುಖ ಕಾರ್ಯಾಚರಣೆ

ಕ್ಯಾಕ್ಟಸ್, ಆಪರೇಷನ್ ಮೇಘದೂತ್ ಹಾಗೂ ಆಪರೇಷನ್ ವಿಜಯ್ ಇವು ವಾಯುಸೇನೆಯ ಪ್ರಮುಖವಾದ ಕಾರ್ಯಾಚರಣೆಯಾಗಿದೆ.

ಇನ್ಮುಂದೆ ಭಾರತೀಯ ವಾಯುಸೇನೆಯಲ್ಲಿ 'ನಾರಿ ಶಕ್ತಿ'

ಪ್ರಧಾನಿ ಮೋದಿ ಅವರಿಂದ ಶುಭಹಾರೈಕೆ

ಪ್ರಧಾನಿ ಮೋದಿ ಅವರು 85ನೇ ವಾಯುಸೇನೆ ದಿನಾಚರಣೆಗೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ.

ಸಾರಂಗ್ ಹೆಲಿಕಾಪ್ಟರ್ ಸಾಹಸ

ಸಾರಂಗ್ ಹೆಲಿಕಾಪ್ಟರ್ ಸಾಹಸ

ಸಾರಂಗ್ ಹೆಲಿಕಾಪ್ಟರ್ ನ ಏರೋಬ್ಯಾಟಿಕ್ ತಂಡದವರಿಂದ ಸಾಹಸ ಪ್ರದರ್ಶನ. ಹಿಂಡಾನ್, ಗಾಜಿಯಾಬಾದ್, ಉತ್ತರಪ್ರದೇಶ.

85ನೇ ವಾಯುಸೇನಾ ದಿನಾಚರಣೆ

85ನೇ ವಾಯುಸೇನಾ ದಿನಾಚರಣೆ

85ನೇ ವಾಯುಸೇನಾ ದಿನಾಚರಣೆ ಅಂಗವಾಗಿ Airborne Early Warning and Control System (AEW&C) ವ್ಯವಸ್ಥೆಯುಳ್ಳ ಎಂಬ್ರಾಯರ್ 145 ಜೆಟ್ ವಿಮಾನ ಹಾರಾಟ.

ವಾಯುಸೇನೆ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

ವಾಯುಸೇನೆ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

ಗಾಜಿಯಾಬಾದ್: ಏರ್ ಚೀಫ್ ಮಾರ್ಷಲ್ ಬಿಎಸ್ ಧನೋ(ಬಲಗಡೆ) ಐಎಎಫ್ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ (ಮಧ್ಯದಲ್ಲಿ), ಏರ್ ಚೀಫ್ ಜನರಲ್ ಬಿಪಿನ್ ರಾವತ್ ಅವರು 85ನೇ ವಾಯುಸೇನೆ ದಿನಾಚರಣೆ ಸಂಭ್ರಮವನ್ನು ವೀಕ್ಷಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Air Force is celebrating its 85th anniversary on Sunday. The Air Force Day parade will be marked by a stunning air display with various aircraft at the Hindon Air Force Station in Ghaziabad in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more