ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರಿ ತಪ್ಪಿ ಸಂಸತ್‌ ಭವನಕ್ಕೆ ಬಂದ ನೀಲ್ ಗಾಯ್

By Madhusoodhan
|
Google Oneindia Kannada News

ನವದೆಹಲಿ, ಮೇ. 27: ಸಂಸತ್ ಆವರಣಕ್ಕೆ ಗುರುವಾರ ವಿಶೇಷ ಅತಿಥಿಯೊಬ್ಬರ ಆಗಮನವಾಗಿತ್ತು. ಬಂದವ ಸುಮ್ಮನೆ ಕೂರಲಿಲ್ಲ, ಪೊಲೀಸ್ ವಾಹನಗಳ ಮೇಲೂ ದಾಳಿ ಮಾಡಿದ್ದ, ಅತ್ತಿಂದ ಇತ್ತ ಓಡಾಡಿ ಉದ್ಯಾನವನ್ನು ಹಾಳು ಮಾಡಿದ್ದ.

ಅರೇ ಯಾರೀತ, ಅಂದುಕೊಂಡ್ರಾ? ನೀಲ್ ಗಾಯ್ ಒಂದು ಸಂಸತ್ ಭವನಕ್ಕೆ ಎಂಟ್ರಿ ಕೊಟ್ಟಿತ್ತು. ಸತತ ನಾಲ್ಕು ಗಂಟೆ ಕಾಲ ಶ್ರಮವಹಿಸಿದ ಭದ್ರತಾ ಸಿಬ್ಬಂದಿ ಅಂತು ಇಂತೂ ನೀಲ್ ಗಾಯ್ ಮರಿಯನ್ನು ಹಿಡಿದು ಸುರಕ್ಷಿತವಾಗಿ ಮೃಗಾಲಯಕ್ಕೆ ತೆಗೆದುಕೊಂಡು ಹೋದರು.[ತಾಯಿಯನ್ನು ಉದ್ಯಾನದಲ್ಲಿ ಸುತ್ತಾಡಿಸಿದ ನರೇಂದ್ರ ಮೋದಿ]

parliament

ಸಂಸತ್ ಭವನದ ನಾರ್ತ್ ಬ್ಲಾಕ್ ಬಳಿ ಕಾಣಿಸಿಕೊಂಡ ನೀಲ್ ಗಾಯ್ ಮೊದಲು ಪೊಲೀಸ್ ವಾಹನದ ಮೇಲೆ ಎಗರಿತು. ನಂತರ ಗಾಜುಗಳನ್ನು ಪುಡಿಮಾಡಿತು. ಜನರನ್ನು ನೋಡಿ ಭಯಗೊಂಡ ಜಿಂಕೆ ಮತ್ತೆ ಅತ್ತಿಂದ ಇತ್ತ ಓಡಾಡಿತು.[ಪಿಟಿಐ ಚಿತ್ರಗಳು]

ಅಂತಿಮವಾಗಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿತು. ನೀಲ್ ಗಾಯ್ ಮಾಡಿದ ಅವಘಡಗಳು ಸಣ್ಣವೇ ಆದರೂ ಅದು ಭರಪೂರ ಮನರಂಜನೆ ನೀಡಿದ್ದಂತೂ ಸುಳ್ಳಲ್ಲ. ನೀವು ನೀಲ್ ಗಾಯ್ ತುಂಟಾಟಗಳನ್ನು ಒಂದು ರೌಂಡ್ ನೋಡಿಕೊಂಡು ಬನ್ನಿ...

English summary
Police encountered an unusual challenger near Parliament when a stray Nilgai calf came and hit a police control room vehicle on Thursday , May 26, morning. The calf came running towards the vehicle near North Block and hit it causing the windscreen to break. The damage to the glass was on the driver's side. Finally he stray nilgai calf rescued after a four-hour-long operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X