ದವಡೆ ನಡುಗುವ ಚಳಿ, ನೋಟಿನ ಬಿಸಿ ಮತ್ತು ಕಮಲಹಾಸನ್

Posted By:
Subscribe to Oneindia Kannada

ಆನೆ ಹಾಗೂ ಮರಿ ಹಳ್ಳವೊಂದರಲ್ಲಿ ಬಿದ್ದು ಗಾಯವಾಗಿದೆ. ಪತಂಜಲಿ ಪ್ರಾಡಕ್ಟ್ ನವರು ಯಾವುದೋ ಹೊಸ ನಿರ್ಮಾಣಕ್ಕಾಗಿ ತೋಡಿದ್ದ ಹಳ್ಳ ಅದು. ಅದರಲ್ಲಿ ಬಿದ್ದು ಗಾಯಗೊಂಡಿರುವ ಆನೆಯ ಸ್ಥಿತಿ ಮರುಕ ಹುಟ್ಟಿಸುವಂತಿದೆ. ರಾಜಸ್ತಾನದ ಪುಷ್ಕರದಲ್ಲಿ ಎರಡು ಸಾVಇರ್ ರುಪಾಯಿ ಸಿಕ್ಕಿರುವುದಕ್ಕೆ ವಿದೇಶಿ ಮಹಿಳೆಯ ಸಂಭ್ರಮ.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಯಂಕರ ಚಳಿ. ಆದರೂ ಅಲ್ಲಿನ ಮಹಿಳೆ ಅದ್ಯಾವುದೋ ಹೊರೆ ಹೊತ್ತು ಸಾಗುವ ದೃಶ್ಯ ಇಲ್ಲೆಲ್ಲೋ ಕರ್ನಾಟಕದ ಬೆಂಗಳೂರಿನಲ್ಲಿ ಇದ್ದರೂ ದವಡೆ ನಡಗುವಂತೆ ಮಾಡುತ್ತದೆ. ನೋಟು ರದ್ದು ವಿರುದ್ಧ ಪ್ರತಿಭಟನೆ ಮುಂದಾಗಿರುವ ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಂಗಾಲಿಗಳು ಪ್ರತಿಭಟನೆ ಮಾಡಿದ್ದಾರೆ.[ಕಪ್ಪು ಹಣದ ಕರಾಳ ಜಾಲ, ಸರಕಾರಕ್ಕಿರುವ ಸವಾಲು]

ಇನ್ನುಳಿದಂತೆ ಬಾಲಮುರಳಿಕೃಷ್ಣ ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದ ಬಹುಮುಖ ಪ್ರತಿಭೆ ಕಮಲಹಾಸನ್..ಹೀಗೆ ಎಲ್ಲ ಘಟನೆಗಳನ್ನು ಚಿತ್ರವಾಗಿ ನಿಮ್ಮೆದುರು ಇಡಲಾಗಿದೆ. ದಿನದ ಪ್ರಮುಖ ಸುದ್ದಿಯ ಫೋಟೋ ಸಮೂಹದ ಮೇಲೆ ಹಾಗೆ ಒಮ್ಮೆ ಕಣ್ಣಾಡಿಸಿ. ಹೇಗಿದೆ ಈ ಪ್ರಯತ್ನ ಎಂಬ ಬಗ್ಗೆ ಕನಿಷ್ಠ ಎರಡು ಸಾಲು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಹಾಕಿ.

ಕಮಲ್ ಗೌರವ

ಕಮಲ್ ಗೌರವ

ಚೆನ್ನೈನಲ್ಲಿ ನಿಧನರಾದ ಕರ್ನಾಟಕ ಸಂಗೀತ ಗಾಯಕ ಎಂ.ಬಾಲಮುರಳಿಕೃಷ್ಣ ಅವರ ಮನೆಗೆ ತೆರಳಿದ್ದ ಪಂಚಭಾಷಾ ತಾರೆ ಕಮಲ ಹಾಸನ್ ಗೌರವ ಸಲ್ಲಿಸಿ, ಅಂತಿಮ ದರ್ಶನ ಪಡೆದರು.

ಚಳಿಯಲ್ಲೇ ಕೆಲಸ

ಚಳಿಯಲ್ಲೇ ಕೆಲಸ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗುರುವಾರ ದಾಖಲಾಗಿರುವ ಕನಿಷ್ಠ ಉಷ್ಣಾಂಶ 6 ಡಿಗ್ರಿ. ಗರಿಷ್ಠ 17 ಡಿಗ್ರಿ. ಇರಲಿ, ಅಂಥ ಚಳಿಯಲ್ಲೂ ಹೊರೆ ಹೊತ್ತು ಸಾಗುತ್ತಿದ್ದ ಅಲ್ಲಿನ ಮಹಿಳೆಯರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಹೊಸ ನೋಟು, ಹೊಚ್ಚ ಹೊಸ ನಗು

ಹೊಸ ನೋಟು, ಹೊಚ್ಚ ಹೊಸ ನಗು

ರಾಜಸ್ತಾನದ ಪುಷ್ಕರದಲ್ಲಿ ವಿದೇಶಿ ಮಹಿಳೆಯೊಬ್ಬರು ಹೊಸ 2000 ನೋಟನ್ನು ಸಂಭ್ರಮದಿಂದ ತೋರಿಸಿದರು.

ಆನೆಗೇನು ಔಷಧಿ

ಆನೆಗೇನು ಔಷಧಿ

ಸೋನಿತ್ ಪುರ್ ಬಲಿಪಾರಾದಲ್ಲಿ ಪತಂಜಲಿ ಫುಡ್ಸ್ ಮತ್ತು ಹರ್ಬಲ್ ಪಾರ್ಕ್ ಗಾಗಿ ನಡೆಯುತ್ತಿರುವ ನಿರ್ಮಾಣ ಸ್ಥಳದಲ್ಲಿ ತೋಡಿದ್ದ ಹಳ್ಳದಲ್ಲಿ ಆನೆ ಹಾಗೂ ಅದರ ಮರಿ ಬಿದ್ದು ಗಾಯಗೊಂಡಿವೆ.

ಬೆಂಗಾಲಿಗಳ ಆಕ್ರೋಶ

ಬೆಂಗಾಲಿಗಳ ಆಕ್ರೋಶ

ನೋಟು ರದ್ದು ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಲಹಾಬಾದ್ ನಲ್ಲಿ ಬೆಂಗಾಲಿಗಳು ಘೋಷಣೆ ಕೂಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now, protest against people who are opposing note ban and winter in Srinagar and other events represnting through PTI pictures.
Please Wait while comments are loading...