ಚಿತ್ರಗಳು:ಕೃಷ್ಣ ಜನ್ಮಾಷ್ಟಮಿ ವಿಶೇಷ ದೇಶದ ವಿವಿಧೆಡೆಗಳಲ್ಲಿ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25: ಕೃಷ್ಣಂ ವಂದೇ ಜಗದ್ಗುರಂ, ಕೃಷ್ಣ ನೀ ಬೇಗನೆ ಬಾರೋ...ಎಂಬ ನಾಮಾಮೃತಗಳು ಭಕ್ತ ಮನೆ ಮನಗಳಲ್ಲಿ ಇಂದು ಮೊಳಗುತ್ತಿದೆ. ಜಗದೇಕ ಪಿತ ಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇಶ, ಭಾಷೆ, ಪ್ರಾಂತ್ಯ, ಗಡಿ ಮೀರಿದ ಭಕ್ತಿ ಭಾವದಿಂದ ಕೃಷ್ಣನ ಭಜನೆ ಮಾಡುತ್ತಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ವೈವಿಧ್ಯತೆ, ಭಿನ್ನತೆ ಕಂಡು ಬಂದರೂ ಭಕ್ತಿಭಾವ ಮಾತ್ರ ಎಲ್ಲೆಡೆ ಒಂದೇ ರೀತಿಯಾಗಿರುತ್ತದೆ. ಉಡುಪಿ, ಮಥುರಾ, ಪಂಡರಾಪುರ, ಗುರುವಾಯೂರು, ದ್ವಾರಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಕೃಷ್ಣ ದೇಗುಲಗಳು ಸಂಭ್ರಮ, ಸಡಗರ ಮನೆ ಮಾಡಿದೆ. [ಗ್ಯಾಲರಿ: ಜನ್ಮಾಷ್ಟಮಿ ಸಂಭ್ರಮ]

ಮಥುರಾ ನಗರದ್ದಲ್ಲಂತೂ ಹಿಂದೂ ಮುಸ್ಲಿಮರು ಕಲೆತು ಒಟ್ಟಿಗೆ ಕೃಷ್ಣನ ಸೇವೆಗೆ ನಿಲ್ಲುತ್ತಾರೆ, ಕರ್ನಾಟಕದ ವಿವಿಧೆಡೆ ಮುಸ್ಲಿಂ ಬಾಂಧವರ ಮಕ್ಕಳು ಕೂಡಾ ನವನೀತ ಚೋರ ಕೃಷ್ಣನ ವೇಷ ಧರಿಸಿ ಈ ದಿನ ಸಂಭ್ರಮಿಸುತ್ತಾರೆ.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಕೃಷ್ಣನನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ದಾಸ್ಯವರೇಣ್ಯರು ಹೇಳುತ್ತಾರೆ. ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಕೆಲ ಚಿತ್ರಗಳು ಇಲ್ಲಿವೆ ನೋಡಿ ಅನಂದಿಸಿ... ಚಿತ್ರಗಳ ಕೃಪೆ: ಪಿಟಿಐ

ಮೊಸರಿನ ಕುಡಿಕೆ ಒಡೆಯಲು ಸಜ್ಜಾದ ಮಹಿಳಾ ಭಕ್ತರು

ಮೊಸರಿನ ಕುಡಿಕೆ ಒಡೆಯಲು ಸಜ್ಜಾದ ಮಹಿಳಾ ಭಕ್ತರು

ಮುಂಬೈನಲ್ಲಿ ಮೊಸರಿನ ಕುಡಿಕೆ ಒಡೆಯಲು ಸಜ್ಜಾದ ಮಹಿಳಾ ಭಕ್ತರು ಪಿರಿಮೀಡ್ ರಚನೆ ಮಾಡಿದ್ದಾರೆ. ಜೊತೆಗೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ಸಂದೇಶ ಸಾರಿದ್ದಾರೆ.

ಆಗ್ರಾದಲ್ಲಿ ವಾಸುದೇವನ ಜತೆ ಬಾಲಕೃಷ್ಣ

ಆಗ್ರಾದಲ್ಲಿ ವಾಸುದೇವನ ಜತೆ ಬಾಲಕೃಷ್ಣ

ಆಗ್ರಾದಲ್ಲಿ ವಾಸುದೇವನಂತೆ ದಿರಿಸು ತೊಟ್ಟ ಭಕ್ತನೊಬ್ಬ ಬಾಲಕೃಷ್ಣನನ್ನು ಹೊತ್ತು ನದಿ ದಾಟುತ್ತಿದ್ದಾರೆ.

ಮಥುರಾನಗರಿ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜು

ಮಥುರಾನಗರಿ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜು

ಮಥುರಾನಗರಿ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜಾಗಿದ್ದು ಹೀಗೆ

ಪಟಿಯಾಲದಲ್ಲಿ ಫುಟ್ಬಾಲ್ ಆಡಿದ ಬಾಲಕೃಷ್ಣರು

ಪಟಿಯಾಲದಲ್ಲಿ ಫುಟ್ಬಾಲ್ ಆಡಿದ ಬಾಲಕೃಷ್ಣರು

ಪಟಿಯಾಲದಲ್ಲಿ ಬಾಲಕೃಷ್ಣ ವೇಷಧಾರಿಗಳು ಶಾಲೆ ಸಮಯದಲ್ಲಿ ಫುಟ್ಬಾಲ್ ಆಡಿ ಆನಂದಿಸಿದರು.

ಅಜ್ಮೇರ್ ನಲ್ಲಿ ಸೆಲ್ಫಿ ಕೃಷ್ಣ ಹಾಗೂ ರಾಧೆಯರು

ಅಜ್ಮೇರ್ ನಲ್ಲಿ ಸೆಲ್ಫಿ ಕೃಷ್ಣ ಹಾಗೂ ರಾಧೆಯರು

ರಾಜಸ್ಥಾನದಲ್ಲಿ ಅಜ್ಮೇರ್ ನಲ್ಲಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಸೆಲ್ಫಿ ಕೃಷ್ಣ ಹಾಗೂ ರಾಧೆಯರು

ರಾಜಸ್ಥಾನದ ಬೀವಾರ್ ನಲ್ಲಿ ಕೃಷ್ಣ

ರಾಜಸ್ಥಾನದ ಬೀವಾರ್ ನಲ್ಲಿ ಕೃಷ್ಣ

ರಾಜಸ್ಥಾನದ ಬೀವಾರ್ ನಲ್ಲಿ ಕೃಷ್ಣ ವೇಷ ಸ್ಪರ್ಧೆಗಾಗಿ ತಯಾರಾದ ಪುಟ್ಟ ಬಾಲಕ.

ಶ್ರೀಕೃಷ್ಣ ಚರಿತೆಯನ್ನು ಸಾರುವ ನಾಟಕ

ಶ್ರೀಕೃಷ್ಣ ಚರಿತೆಯನ್ನು ಸಾರುವ ನಾಟಕ

ನವದೆಹಲಿ: ಶ್ರೀಕೃಷ್ಣ ಚರಿತೆಯನ್ನು ಸಾರುವ ನಾಟಕ ಪ್ರದರ್ಶಿಸಿದ ಡಿಎವಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು.

ಕೃಷ್ಣ ರಾಧೆ ವೇಷ ಭೂಷಣ ಸ್ಪರ್ಧೆ

ಕೃಷ್ಣ ರಾಧೆ ವೇಷ ಭೂಷಣ ಸ್ಪರ್ಧೆ

ಕೃಷ್ಣ ರಾಧೆ ವೇಷ ಭೂಷಣ ಸ್ಪರ್ಧೆ ದೇಶದ ವಿವಿಧೆಡೆ ಆಯೋಜಿಸಲಾಗುತ್ತದೆ. ಇದು ರಾಜಸ್ಥಾನಿ ಶೈಲಿ ಜೋಡಿ

ಪಾಟ್ನದಲ್ಲಿ ಪಾಠ ಕಲಿಯುತ್ತಿರುವ ಕೃಷ್ಣ ವೇಷಧಾರಿಗಳು

ಪಾಟ್ನದಲ್ಲಿ ಪಾಠ ಕಲಿಯುತ್ತಿರುವ ಕೃಷ್ಣ ವೇಷಧಾರಿಗಳು

ಪಾಟ್ನದ ಶಾಲೆಯೊಂದರಲ್ಲಿ ಪಾಠ ಕಲಿಯುತ್ತಿರುವ ಕೃಷ್ಣ ವೇಷಧಾರಿಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Whole India celebrating Krishna Janmashtami (birthday of Sri Krishna) today(Aug 25). Hindus across the globe celebrate janmashtami by fasting, worshipping, offering special prayers till the midnight., Celebration and customs may differ from place to place.
Please Wait while comments are loading...