ಚಿತ್ರಗಳಲ್ಲಿ ನೋಡಿ: ದೇಶದೆಲ್ಲೆಡೆ ಸಂಕ್ರಾಂತಿ ಸಂಭ್ರಮ

ಬೆಂಗಳೂರು, ಜ, 14: ದೇಶದೆಲ್ಲೆಡೆ ಬುಧವಾರ ಸಂಕ್ರಾಂತಿ ಸಂಭ್ರಮ ಮನೆಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಚಿಕ್ಕ ಮಕ್ಕಳೊಂದಿಗೆ ಹಬ್ಬ ಆಚರಿಸಿದರು. ಬೆಂಗಳೂರು ಸೇರಿದಂತೆ ಅಲಹಾಬಾದ್, ಅಮೃತಸರ, ನವದೆಹಲಿ, ಗಂಗಾಸಾಗರ್ ಗಳಲ್ಲಿ ಹಬ್ಬ ಆಚರಣೆ ಜೋರಾಗಿತ್ತು.

ಮಕರ ಸಂಕ್ರಾಂತಿಯನ್ನು ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಪೊಂಗಲ್ ಎಂದು ಕರೆದರೆ, ಪಂಜಾಬಲ್ಲಿ 'ಮಾಘಿ' ಎಂದು ಕರೆಯುತ್ತಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಸಾಧುಗಳು ಪವಿತ್ರ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಲಕ್ಷಾಂತರ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಪಟ ಪಟ ಗಾಳಿಪಟ

ಪಟ ಪಟ ಗಾಳಿಪಟ

ಹಬ್ಬದ ಸಡಗರದಲ್ಲಿ ಪಾಲ್ಗೊಂಡ ಬಿಗ್ ಬಿ ಅಮಿತಾಬ್ ಬಚ್ಚನ್ ಅಹಮದಾಬಾದ್ ನಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ಸಿಹಿ ತಿಂಡಿ

ಸಿಹಿ ತಿಂಡಿ

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ನೀಡುತ್ತಿರುವ ಸಿಹಿತಿಂಡಿ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ಪುಟಾಣಿಗಳ ಸಡಗರ

ಪುಟಾಣಿಗಳ ಸಡಗರ

ನವದೆಹಲಿಯಲ್ಲಿ ಪುಟಾಣಿ ಮಕ್ಕಳೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ.

ಸುಂದರ ದೃಶ್ಯ

ಸುಂದರ ದೃಶ್ಯ

ಸಂಕ್ರಾಂತಿ ಹಿನ್ನಲೆಯಲ್ಲಿ ಕಂಗೊಳಿಸಿದ ಅಲಹಾಬಾದ್ .

ಮೋದಿ ನಮಸ್ಕಾರ !

ಮೋದಿ ನಮಸ್ಕಾರ !

ಸಂಕ್ರಾಂತಿ ಹಿನ್ನಲೆಯಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ನಮಿಸಿದ ಪ್ರಧಾನಿ.

ಯುವಕರ ಸಂಭ್ರಮ

ಯುವಕರ ಸಂಭ್ರಮ

ಜೈಪುರದಲ್ಲಿ ಗಾಳಿಪಟ ಹಾರಾಟದಲ್ಲಿ ಪಾಲ್ಗೊಂಡಿದ್ದ ಯುವಕರು.

ಸಂಧ್ಯಾರತಿ

ಸಂಧ್ಯಾರತಿ

ಗಂಗಾಸಾಗರದಲ್ಲಿ ಭಕ್ತರಿಂದ ಸಂಧ್ಯಾರತಿ

ಭಕ್ತರ ದಂಡು

ಭಕ್ತರ ದಂಡು

ಅಮೃತಸರದಲ್ಲಿ ನಾಗರಿಕರ ಹಬ್ಬದ ಸಂಭ್ರಮ

ಸಾಧು ಪುಡ್ಬಾಲ್ ಆಟ

ಸಾಧು ಪುಡ್ಬಾಲ್ ಆಟ

ಗಂಗಾ ನದಿ ತೀರದಲ್ಲಿ ಪುಟ್ಬಾಲ್ ಆಡಿದ ಸಾಧು.

ಗುರು ದ್ವಾರಕ್ಕೆ ಭಕ್ತರು

ಗುರು ದ್ವಾರಕ್ಕೆ ಭಕ್ತರು

ಅಮೃತಸರದ ಸ್ವರ್ಣ ಮಂದಿರಕ್ಕೆ ಭಕ್ತರ ದಂಡು

ಸೂರ್ಯನಿಗೆ ನಮನ

ಸೂರ್ಯನಿಗೆ ನಮನ

ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಸಾಧು ಕ್ಯಾಮರಾ ಕಣ್ಣಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+