ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದ ಆಸ್ಪತ್ರೆಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

By Mahesh
|
Google Oneindia Kannada News

ಕೋಲ್ಕತ್ತಾ,ಏಪ್ರಿಲ್ 01: ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಗುರುವಾರ ಮಧ್ಯಾಹ್ನ ಕುಸಿತ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 25 ತಲುಪಿದೆ. ನೂರಾರು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ದುರಂತದ ನಡುವೆ ರಾಜಕೀಯ ಕೆಸರೆರೆಚಾಟ ಮುಂದುವರೆದಿದೆ.

ಘಟನಾ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲೇ ಇರುವ ಮಾರ್ವರಿ ರಿಲೀಫ್ ಸೊಸೈಟಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ತುಂಬಿದ್ದಾರೆ. ಕೈ ಕಾಲು ಕಳೆದುಕೊಂಡವರು, ತಲೆಗೆ ಪೆಟ್ಟಾದವರು, ಕುಟುಂಬಸ್ಥರನ್ನು ಕಾಣದೆ ಕಂಗಾಲಾದವರ ನೋವಿನ ಕಥೆ ನೂರಾರಿದೆ.[ವಿಡಿಯೋ:ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ]

Kolkata flyover disaster: Heart-wrenching scenes in hospitals

ಇದೇ ರೀತಿ ದೃಶ್ಯಗಳು ಎಸ್ ಎಸ್ ಕೆಎಂ ಆಸ್ಪತ್ರೆ, ಆರ್ ಜಿ ಕಾರ್ ಆಸ್ಪತ್ರೆ, ಎನ್ ಆರ್ ಎಸ್ ಆಸ್ಪತ್ರೆಯಲ್ಲೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.[ಕೋಲ್ಕತ್ತಾ ಮೇಲ್ಸೇತುವೆ ದುರಂತ: ತುರ್ತು ಸೇವೆಗಾಗಿ ಕರೆ ಮಾಡಿ]

ರಾಜಕೀಯ ಕೆಸರೆರಚಾಟ: ಈ ನಡುವೆ ಸೇತುವೆಯ ಒಂದು ಭಾಗ ಕುಸಿತಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರಣಾ ಎಂದು ಬಿಜೆಪಿ ಆರೋಪಿಸಿದೆ. ಸ್ಥಳೀಯರೊಬ್ಬರು ರಕ್ತದಾನ ಶಿಬಿರ ಆಯೋಜಿಸಿದ್ದನ್ನು ಪುಢಾರಿಗಳು ರದ್ದುಪಡಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಇದೇ ಹಾದಿಯಲ್ಲಿ ಸಾಗಬೇಕಿತ್ತು, ಅದೃಷ್ಟವಶಾತ್ ಬಚಾವಾದರೂ ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ.

ಕೋಲ್ಕತ್ತಾದ ಆಸ್ಪತ್ರೆಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಕೋಲ್ಕತ್ತಾದ ಉತ್ತರ ಭಾಗದ ಗಿರೀಶ್ ನಗರದ ಗಣೇಶ್ ಟಾಕೀಸ್ ಬಳಿಯ ವಿವೇಕಾನಂದ ಫ್ಲೈಓವರ್ ನ ಒಂದು ಭಾಗದ ಕುಸಿತ ಪರಿಣಾಮ 22ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 78ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ. ಈ ದುರಂತದ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ದುರಂತದ ಚಿತ್ರಗಳು ಇಲ್ಲಿವೆ.

English summary
Inconsolable cries of the bereaved, wails of the injured and frenetic searches for their dear ones -- hospitals on Thursday saw heart-wrenching scenes as the city witnessed one of its worst disasters when an under-construction flyover crashed in the Posta area, crushing scores of unsuspecting people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X