ದೇಶದೆಲ್ಲೆಡೆ ಆಯುಧಪೂಜೆ ಸಂಭ್ರಮ ಹೇಗಿತ್ತು?
ಬೆಂಗಳೂರು, ಅಕ್ಟೋಬರ್: 22: ನವರಾತ್ರಿ, ದುರ್ಗಾಪೂಜೆ ಸಂಭ್ರಮದಲ್ಲಿ ಇಡೀ ದೇಶವೇ ಮಿಂದೇಳುತ್ತಿದೆ. ಇದೆಲ್ಲವನ್ನು ಇಮ್ಮಡಿಗೊಳಿಸಲು ಆಯುಧ ಪೂಜೆ, ವಿಜಯದಶಮಿಗಳು ಎದುರಾಗಿವೆ. ನಿಮ್ಮ ಮನೆ, ವಾಹನ, ಕಚೇರಿ ಎಲ್ಲದಕ್ಕೂ ಪೂಜೆ ಸಂದಿದೆ.
ಬೆಂಗಳೂರು, ನವದೆಹಲಿ, ಕೋಲ್ಕತ್ತಾ ಅಷ್ಟೇ ಏಕೆ ಪಕ್ಕದ ಮಲೇಶಿಯಾದಲ್ಲೂ ದುರ್ಗಾ ಮಾತೆಯನ್ನು ಆರಾಧನೆ ಮಾಡಲಾಗುತ್ತಿದೆ. ಹಬ್ಬಗಳ ಹೆಸರು ಬೇರೆ ಬೇರೆ ಇರಬಹುದು ಆದರೆ ಅಂತಿಮವಾಗಿ ಸಾರುವ ಸಂದೇಶ ಒಂದೇ.[ಆಯುಧಪೂಜೆಗೆ ತಂದಿದ್ದ ಕುಂಬ್ಳಕಾಯಿ ತಲೆ ಮೇಲೆ ಒಡೆದಂಗಾಯ್ತು!]
ದುರ್ಗೆಯ ಅವತಾರವನ್ನು ಸಾರುವ ವಿಗ್ರಹಗಳು, ದುರ್ಗಾಮಾತೆ ಎದುರು ಭಕ್ತರ ನೃತ್ಯ, ಯುವತಿಯರಿಂದ ಹಬ್ಬಕ್ಕೆ ಹೊಸ ಮೆರುಗು, ಮೆರವಣಿಗೆ, ಭಕ್ತಿ ಗೀತೆ, ಘೋಷಣೆಗಳು ನವರಾತ್ರಿಯ ವಿಶೇಷ.
ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಿದ್ದರೆ ಇತ್ತ ಬೆಂಗಳೂರಿನ ನಾಗರಿಕರು ಬೆಳಗ್ಗೆಯೇ ತಮ್ಮ ವಾಹನಗಳನ್ನು ಶುಚಿಗಳೊಸಿ ಪೂಜೆ ನೆರವೇರಿಸಿದರು. ದೇವಾಲಯಗಳಿಗೆ ಭೇಟಿ ನೀಡಿ ದೇವರ ದೇವರ ದರ್ಶನ ಪಡೆದರು. ದೇಶದೆಲ್ಲೆಡೆ ಆಯುಧ ಪೂಜೆ ಸಂಭ್ರಮ ಹೇಗಿತ್ತು? ನೋಡಿಕೊಂಡು ಬರೋಣ...

ಬೆಂಗಳೂರಲ್ಲಿ ಆಯುಧ ಪೂಜೆ
ಬೆಂಗಳೂರಿನಲ್ಲಿ ಆಯುಧ ಪೂಜೆ ಸಂಭ್ರಮ. ನಾಗರಿಕರು ತಮ್ಮ ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದರು.

ಮಹಾಆರತಿ
ದುರ್ಗಾಷ್ಟಮಿ ನಿಮಿತ್ತ ಸೂರತ್ ನಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ದೀಪ ಹಚ್ಚಿ ಭಕ್ತಿ ಮೆರೆದರು.

ಸಲ್ಮಾನ್ ನೃತ್ಯ
ಅಹಮದಾಬಾದ್ ನಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಸಂಗೀತಕ್ಕೆ ಹೆಜ್ಜೆ ಹಾಕಿದ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಮತ್ತು ಬೆಡಗಿ ಸೋನಂ ಕಪೂರ್.

ಸೆಲ್ಫಿ ವಿತ್ ಸೋನಂ
ಅಹಮದಾಬಾದ್ ನಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಮತ್ತು ಬೆಡಗಿ ಸೋನಂ ಕಪೂರ್ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.

ಮಲೇಷಿಯಾದಲ್ಲೂ ವಂದನೆ
ನಮ್ಮ ದೇಶದ ನವರಾತ್ರಿಯ ಬಗೆಯಲ್ಲೇ ಮಲೇಷಿಯಾದಲ್ಲೂ ಸಹ 9 ದಿನಗಳ ಕಾಲ ಪೂಜೆ ನೆರವೇರಿಸಲಾಗುತ್ತದೆ.

ನಮ್ಮ ಕಚೇರಿಯಲ್ಲೂ ಪೂಜೆ
ಒನ್ ಇಂಡಿಯಾ ಕಚೇರಿಯಲ್ಲಿ ಸಂಭ್ರಮ ಸಡಗರದಿಂದ ದೇವಿ ಆರಾಧನೆ ಮಾಡಲಾಯಿತು.

ಶ್ಯಾಮ್ ಸುಂದರ್ ಶುಭಾಶಯ
ಒನ್ ಇಂಡಿಯಾ ಕನ್ನಡದ ಸಂಪಾದಕ ಶ್ಯಾಮಸುಂದರ್ ಎಲ್ಲ ಸಿಬ್ಬಂದಿಗೆ ನವರಾತ್ರಿ ಹಬ್ಬದ ಶುಭಾಶಯ ಹೇಳಿದರು.












Click it and Unblock the Notifications