ಚಿತ್ರಗಳಲ್ಲಿ: ಧಾರಾಕಾರ ಮಳೆಗೆ ರಾಜಧಾನಿ ದೆಹಲಿ ತತ್ತರ

ನವದೆಹಲಿ, ಜು. 11: ಕಳೆದ ಎರಡು ದಿನಗಳಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ ಪರಿಣಾಮ ಅನೇಕ ರಾಜ್ಯಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.

ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿನ ಹಲವು ನದಿಗಳು ತುಂಬಿ, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲಲ್ಲಿ ಭೂಕುಸಿತದ ವರದಿಗಳಾಗಿದ್ದು ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ಜೂನ್ ತಿಂಗಳಲ್ಲಿ ಆರ್ಭಟಿಸಿ ಮರೆಯಾಗಿದ್ದ ಮುಂಗಾರು ಮತ್ತೆ ಜೋರಾದ ಮಳೆ ಸುರಿಸುತ್ತಿದೆ. ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮುನೋತ್ರಿ, ಹೇಮ್ ಕುಂಡ್ ಸಾಹೀಬ್ ಯಾತ್ರೆ ಸ್ಥಗಿತ ಮಾಡಲಾಗಿದ್ದು ಜನರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ಯಲಾಗುತ್ತಿದೆ.[ಮಳೆಗಾಲದೊಂದಿಗೇ ಪಾಪಿ ಆಷಾಢವೂ ಬಂದಿದೆ]

ರಾಜ್ಯದ ಕರಾವಳಿಯಾದ್ಯಂತ ಭಾರೀ ಮಳೆ ಸುರಿದಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆಯೂ ಮಳೆಯಾಗಿದೆ. ಕೋಟ (28ಸೆಂ.ಮೀ) ಉಡುಪಿ( 27) ಮತ್ತು ಮೂಲ್ಕಿಯಲ್ಲಿ(25) ವ್ಯಾಪಕ ಮಳೆಯಾಗಿದೆ. ಸಿದ್ದಾಪುರ, ಶಿರಾಳಿ, ಕುಮಟಾ 11, ಅಂಕೋಲಾ, ಕದ್ರಾ, ಕಾರವಾರ 7, ತಾಳಗುಪ್ಪ, ಶೃಂಗೇರಿ, ಹೊಸನಗರದಲ್ಲಿ 6 ಸೆಂ.ಮೀ ಮಳೆಯಾಗಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು ಉತ್ತರ‌ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(ಪಿಟಿಐ ಚಿತ್ರಗಳು)

ಎಲ್ಲೆಡೆ ಟ್ರಾಫಿಕ್ ಜಾಮ್

ಎಲ್ಲೆಡೆ ಟ್ರಾಫಿಕ್ ಜಾಮ್

ದೆಹಲಿಯಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದು ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಉತ್ತರ ಭಾರತದ ಎಲ್ಲೆಡೆ ಮಳೆ

ಉತ್ತರ ಭಾರತದ ಎಲ್ಲೆಡೆ ಮಳೆ

ದೆಹಲಿಯಲ್ಲಿ ಇನ್ನು ಎರಡು ದಿನ ಕಾಲ ಮಳೆ ಮಂದುವರಿಯಲಿದೆ. ಒಡಿಸಾ, ಪಂಜಾಬ್,ಹರ್ಯಾಣ ಹಾಗೂ ರಾಜಸ್ಥಾನಗಳಲ್ಲೂ ಭಾರಿ ಮಳೆಯಾಗಿರುವ ವರದಿಯಾಗಿದೆ.

ಅಮರನಾಥ ಯಾತ್ರೆ ಸ್ಥಗಿತ

ಅಮರನಾಥ ಯಾತ್ರೆ ಸ್ಥಗಿತ

ಹವಾಮಾನ ವೈಪರೀತ್ಯ ಮತ್ತು ಭೂ ಕುಸಿತದ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಯಾತ್ರೆಯ ಮೂಲ ಪಹಲ್ಗಾಂವ್ ಮತ್ತು ಬಲ್ತಾಲ್ ಶಿಬಿರಗಳಿಂದ ಸಾಗುವ ಮಾರ್ಗಗಳುದ್ದಕ್ಕೂ ಪರ್ವತ ಪ್ರದೇಶಗಳಲ್ಲಿ ಮತ್ತು ಅಮರನಾಥ ಗುಹಾಲಯದ ಸುತ್ತಮುತ್ತ ವಿಪರೀತ ಮಳೆ ಸುರಿಯುತ್ತಿದೆ.

ದಿಲ್ಲಿಯಲ್ಲಿ ಸಂಚಾರ ದಟ್ಟಣೆ

ದಿಲ್ಲಿಯಲ್ಲಿ ಸಂಚಾರ ದಟ್ಟಣೆ

ಸತತ ಎರಡನೇ ದಿನ ಮಳೆಯಿಂದಾಗಿ ದಿಲ್ಲಿಯ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ತಾಸುಗಟ್ಟಲೆ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಪ್ರಯಾಣಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಮಳೆಯಲಿ ಜತೆಯಲಿ

ಮಳೆಯಲಿ ಜತೆಯಲಿ

ಮಳೆ ಒಂದೆಡೆ ಅನಾಹುತಗಳನ್ನು ಸೃಷ್ಟಿ ಮಾಡುತ್ತಿದ್ದರೆ ಪ್ರೇಮಿಗಳಿಗೆ ಹೊಸ ಉನ್ಮಾದವನ್ನು ನೀಡಿದ್ದು ನವದೆಹಲಿಯ ಪಾರ್ಕೊಂದರಲ್ಲಿ ನೀರಾಟದಲ್ಲಿ ತೊಡಗಿದ್ದ ಪ್ರೇಮಿಗಳು ಕಂಡಿದ್ದು ಹೀಗೆ

ಸಂತ್ರಸ್ತರ ರಕ್ಷಣೆ

ಸಂತ್ರಸ್ತರ ರಕ್ಷಣೆ

ಧಾರಾಕಾರ ಮಳೆಗೆ ಭರ್ತಾಪುರದಲ್ಲಿ ಮೂರು ಅಂತಸ್ತಿನ ಕಟ್ಟಡ ಧರೆಗುರಳಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+