ಚಿತ್ರಗಳಲ್ಲಿ: ರಂಜಾನ್ ಸಡಗರ, ವಿಶ್ವಶಾಂತಿಗೆ ಪ್ರಾರ್ಥನೆ

Written By:
Subscribe to Oneindia Kannada

ಬೆಂಗಳೂರು/ಹುಬ್ಬಳ್ಳಿ, ಜುಲೈ, 07: ದೇಶದಾದ್ಯಂತ ಮುಸಲ್ಮಾನರು ರಂಜಾನ್ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಬೆಂಗಳೂರು, ನವದೆಹಲಿ, ಕೋಲ್ಕತಾ, ಮುಂಬೈ ಸೇರಿದಂತೆ ಎಲ್ಲ ಮಹಾನಗರಗಳಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿ ವಿಶ್ವಶಾಂತಿಗಾಗಿ ಬೇಡಿಕೊಂಡರು.

ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗಳೂರಿನ ಮೈಸೂರಿನ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಕೆ ಮಾಡಿದರು.[ವಿಶ್ವದೆಲ್ಲೆಡೆ ಈದ್ ಉಲ್ ಫಿತ್ರ್ ವಿಶೇಷ ಪ್ರಾರ್ಥನೆ]

ಗುರುವಾರ ಬೆಳಗ್ಗೆ ಹುಬ್ಬಳ್ಳಿಯ ಈದ್ಗಾ ಮೈದಾನ ಸೇರಿದಂತೆ ಹಲವಾರು ಕಡೆಗಳಲ್ಲಿ ರಮಜಾನ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಸಮುದಾಯದ ಜನತೆ ನಂತರ ಸಿಹಿ ತಿಂದು ಪರಸ್ಪರ ಶುಭಾಶಯ ಹಂಚಿಕೊಂಡರು.

ಮುಸ್ಲಿಂ ಸಮುದಾಯದ ಮುಖಂಡರಿಗೆ ಶಾಸಕ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಸತೀಶ ಮೆಹರವಾಡೆ ಸೇರಿದಂತೆ ಹಲವಾರು ಧುರೀಣರು ಹಬ್ಬದ ಶುಭಾಶಯ ಕೋರಿದರು. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಸಮುದಾಯದ ಮುಖಂಡರು ನಗರದ ಪ್ರತಿಷ್ಠಿತ ಮೂರುಸಾವಿರಮಠಕ್ಕೆ ಭೇಟಿ ನೀಡಿದರು.[ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ]

ಮೂರುಸಾವಿರಮಠದ ಪೀಠಾಧಿಕಾರಿ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮುಸ್ಲಿಂ ಮುಖಂಡರಿಗೆ ಹಬ್ಬದ ಶುಭಾಶಯ ತಿಳಿಸಿ ಸಿಹಿ ತಿನಿಸು ನೀಡಿದರು. ಉಡುಪಿಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಮುಸ್ಲಿಮರು.. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...

ಪೇಜಾವರ ಸ್ವಾಮೀಜಿಗೆ ಶುಭಾಶಯ

ಪೇಜಾವರ ಸ್ವಾಮೀಜಿಗೆ ಶುಭಾಶಯ

ರಂಜಾನ್ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಮುಸ್ಲಿಂ ಸಮುದಾಯದ ಮುಖಂಡರು ಸ್ವಾಮೀಜಿ ಅವರ ಆಶಿರ್ವಾದ ಪಡೆದರು.

ಹುಬ್ಬಳ್ಳಿಯಲ್ಲಿ ರಂಜಾನ್

ಹುಬ್ಬಳ್ಳಿಯಲ್ಲಿ ರಂಜಾನ್

ಹುಬ್ಬಳ್ಳಿಯಲ್ಲಿ ಗುರುವಾರ ರಂಜಾನ್ ಸಡಗರ ಮನೆ ಮಾಡಿತ್ತು. ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದರು.

ಪೊಲೀಸರೊಂದಿಗೆ ಹಬ್ಬ

ಪೊಲೀಸರೊಂದಿಗೆ ಹಬ್ಬ

ಹುಬ್ಬಳ್ಳಿಯಲ್ಲಿ ಆರಕ್ಷಕ ಸಿಬ್ಬಂದಿಯೊಂದಿಗೆ ಹಬ್ಬದ ಶುಭಾಶಯ ಹಂಚಿಕೊಂಡ ಮುಸ್ಲಿಮರು.

ಬಿಗಿ ಭದ್ರತೆ

ಬಿಗಿ ಭದ್ರತೆ

ರಂಜಾನ್ ವಿಶೇಷ ಪ್ರಾರ್ಥನೆ ನಿಮಿತ್ತ ಹುಬ್ಬಳ್ಳಿ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಹಬ್ಬದ ಶುಭಾಶಯ ಹೇಳಿದ ಅಮೀರ್ ಖಾನ್

ಹಬ್ಬದ ಶುಭಾಶಯ ಹೇಳಿದ ಅಮೀರ್ ಖಾನ್

ಮುಂಬೈನ ತಮ್ಮ ನಿವಾಸದಲ್ಲಿ ರಂಜಾನ್ ಆಚರಿಸಿದ ಬಾಲಿವುಡ್ ತಾರೆ ಅಮೀರ್ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಿ ದೇಶದ ಜನತೆಗೆ ಹಬ್ಬದ ಶುಭಾಶಯ ಕೋರಿದರು.

ಮಕ್ಕಳೊಂದಿಗೆ ಹಬ್ಬ

ಮಕ್ಕಳೊಂದಿಗೆ ಹಬ್ಬ

ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ಹೂಗಳನ್ನು ನೀಡಿ ಹಬ್ಬದ ಶುಭಾಶಯ ಹೇಳಿದ ದೃಶ್ಯ. ಮಹಾರಾಷ್ಟ್ರದ ಥಾಣೆಯದ್ದು.

ಚೆನ್ನೈನಲ್ಲಿ ಮಹಿಳೆಯರಿಂದ ಪ್ರಾರ್ಥನೆ

ಚೆನ್ನೈನಲ್ಲಿ ಮಹಿಳೆಯರಿಂದ ಪ್ರಾರ್ಥನೆ

ರಂಜಾನ್ ಪ್ರಯುಕ್ತ ಚೆನ್ನೈನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಮಾಡಿದ ಮುಸ್ಲಿಂ ಮಹಿಳೆಯರು.

ರಾಜಧಾನಿ ನವದೆಹಲಿ

ರಾಜಧಾನಿ ನವದೆಹಲಿ

ನವದೆಹಲಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು.

ಮುಂಬೈ

ಮುಂಬೈ

ಮಳೆಯ ನಡುವೆ ಮುಂಬೈನಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥನೆ.

ಮಮತಾ ಹಾಜರಿ

ಮಮತಾ ಹಾಜರಿ

ಕೋಲ್ಕತಾದಲ್ಲಿ ಹಮ್ಮಿಕೊಂಡಿದ್ದ ರಂಜಾನ್ ಸಂಭ್ರಮ ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಹಬ್ಬದಲ್ಲಿ ಸೆಲ್ಫಿ

ಹಬ್ಬದಲ್ಲಿ ಸೆಲ್ಫಿ

ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಸೆಲ್ಫಿ ಪ್ರಪಂಚ.

ಮೂರು ಸಾವಿರ ಮಠ

ಮೂರು ಸಾವಿರ ಮಠ

ಹಬ್ಬ ಆಚರಣೆ ನಂತರ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತೆರಳಿ ಶುಭಾಶಯ ಹೇಳಿದ ಮುಸಲ್ಮಾನರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eid-ul-Fitr was celebrated across India with fervour as scores of faithful attended special prayers and extended greetings to each other, marking the culmination of the holy fasting month of Ramzan. Prayers for peace, prosperity and brotherhood were offered in special congregations across Karnataka. Bengaluru, Hubballi witnessed Ramzan celebration.
Please Wait while comments are loading...