ಚಿತ್ರಗಳಲ್ಲಿ: ರಂಗೇರಿದ ಬಿಹಾರ ಚುನಾವಣಾ ಕಣ

ಪಾಟ್ನಾ, ಅಕ್ಟೋಬರ್. 07: ಬಿಹಾರ ವಿಧಾನಸಭೆಗೆ ಚುನಾವಣಾ ದಿನಾಂಕ ನಿಗದಿಯಾಗಿದ್ದು ಅಕ್ಟೋಬರ್ 12 ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ ಚುನಾವಣಾ ಪ್ರಚಾರದ ಕಾವು ರಂಗೇರಿದೆ.

ಅನೇಕ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಜಯ ಸಾಧಿಸುತ್ತದೆ ಎಂದು ಹೇಳಿವೆ. ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರದಲ್ಲಿ ನಿರತರಾಗಿದ್ದ ದೃಶ್ಯ ಕಂಡುಬಂತು.[ಬಿಹಾರ ತಾಜಾ ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ]

ಒಟ್ಟು 5 ಹಂತದಲ್ಲಿ ಮತದಾನ ನಡೆಯಲಿದ್ದು ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟಿವೆ. 243 ಸದಸ್ಯರ ಬಿಹಾರ ವಿಧಾನಸಭೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮಹಾಮೈತ್ರಿಕೂಟ ಹಾಗೂ ಎನ್ ಡಿಎ ಮೈತ್ರಿ ಕೂಟದಲ್ಲಿ ಮತದಾರ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಬಿಹಾರ ಚುನಾವಣಾ ಪ್ರಚಾರದ ಭರಾಟೆಯನ್ನು ನೋಡಿಕೊಂಡು ಬನ್ನಿ(ಪಿಟಿಐ ಚಿತ್ರಗಳು)

ಸಮೀಕ್ಷೆಗಳಲ್ಲಿ ಬಿಜೆಪಿ ಮುಂದೆ

ಸಮೀಕ್ಷೆಗಳಲ್ಲಿ ಬಿಜೆಪಿ ಮುಂದೆ

ಜೀನ್ಯೂಸ್ 'ಜನತಾ ಕೀ ಮೂಡ್' ಸಮೀಕ್ಷೆಯ ಪ್ರಕಾರ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಲಿದ್ದು, ಮಹಾಮೈತ್ರಿಕೂಟ ತೀವ್ರ ಹಿನ್ನಡೆ ಅನುಭವಿಸಲಿದೆ. ಜೀನ್ಯೂಸ್ ಪತ್ರಿಕಾ ಹೇಳಿಕೆಯ ಪ್ರಕಾರ ಎನ್ಡಿಎ ಮೈತ್ರಿಕೂಟಕ್ಕೆ ಶೇ. 53.8, ಮಹಾಮೈತ್ರಿಕೂಟಕ್ಕೆ ಶೇ. 40.2 ಮತ್ತು ಇತರರಿಗೆ ಶೇ. 6ರಷ್ಟು ಮತಗಳು ಲಭಿಸಲಿವೆ . ಎಲ್ಲ ಸಮೀಕ್ಷೆಗಳುಇ ಬಿಜೆಪಿ ವಿಜಯಿ ಸಾಧಿಸುತ್ತದೆ ಎಂದೇ ವರದಿ ನೀಡಿವೆ.

ಬಿಜೆಪಿಯಿಂದ 600 ಸಮಾವೇಶ

ಬಿಜೆಪಿಯಿಂದ 600 ಸಮಾವೇಶ

40 ಸ್ಟಾರ್ ಪ್ರಚಾರಕರನ್ನು ಇಟ್ಟುಕೊಂಡ ಬಿಜೆಪಿ ಬಿಹಾರದಾದ್ಯಂತ 600 ಸಮಾವೇಶ ನಡೆಸುವ ಗುರಿಯಿಂದ ಚುನಾವಣಾ ಕಣಕ್ಕೆ ಇಳಿದಿತ್ತು. ಬಿಜೆಪಿಯ ಆದಿ ನಾಯಕರು ಮುಂದೆ ನಿಂತು ಪ್ರಚಾರ ನಡೆಸುತ್ತಿದ್ದಾರೆ. ಭಾಗಲ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿದರು.

ಅಮಿತ್ ಶಾ ವಾಗ್ದಾಳಿ

ಅಮಿತ್ ಶಾ ವಾಗ್ದಾಳಿ

ಲಾಲೂ ಪ್ರಸಾದ್ ಯಾದವ್ ಮತ್ತು ನೀತಿಶ್ ಕುಮಾರ್ ಅವರ ಆಡಳಿತ ವೈಖರಿಯನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕೇಂದ್ರ ಸರ್ಕಾರದ ಸಾಧನೆಗಳನ್ನು ಅಮಿತ್ ಶಾ ತಮ್ಮ ಭಾಷಣದ ಉದ್ದಕ್ಕೂ ಉಲ್ಲೇಖ ಮಾಡಿದರು.

ಲಾಲೂ ಪ್ರಸಾದ್ ಸಮಾವೇಶ

ಲಾಲೂ ಪ್ರಸಾದ್ ಸಮಾವೇಶ

ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಸಹ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಲಕ್ಕಿಸರಾಯ್ ನಲ್ಲಿ ಮಾತನಾಡಿದ ಲಾಲೂ ಬಿಹಾರದ ಅಭಿವೃದ್ಧಿಗೆ ಪಣತೊಟ್ಟಿರುವುದಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+