ಈ ರಾಜ್ಯದಲ್ಲಿ ಇನ್ಮುಂದೆ ಪಾಸಿಂಗ್‌ ಮಾರ್ಕ್ಸ್‌ 35 ಅಲ್ಲ ಬರೀ 20!

ಮಹಾರಾಷ್ಟ್ರ ಚುನಾವಣೆ ಸಮೀಪಿಸುತ್ತಿರುವಂತೆ ಆ ರಾಜ್ಯದಲ್ಲಿ ಭಾರೀ ಸರ್ಕಸ್‌ಗಳೇ ನಡೆಯುತ್ತಿದೆ. ಮಹಾರಾಷ್ಟ್ರ ಚುನಾವಣೆ ನವೆಂಬರ್‌ 20ರಂದು ನಡೆಯಲಿದೆ. ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಭಾರೀ ದೊಡ್ಡ ಸರ್ಕಸ್‌ ಅನ್ನೇ ಮಾಡುತ್ತಿದೆ. ಇದೀಗ 10ನೇ ತರಗರಿಯ ಗಣಿತ ಹಾಗೂ ವಿಜ್ಞಾನದ ಪಾಸಿಂಗ್‌ (ಉತ್ತೀರ್ಣ)ದ ಅಂಕಗಳನ್ನು ಇಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

ಹೌದು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುವ ಸಮಯದಲ್ಲೇ ರಾಜ್ಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿವೆ. ಇನ್ಮುಂದೆ ಮಹಾರಾಷ್ಟ್ರದಲ್ಲಿ ಗಣಿತ ಹಾಗೂ ವಿಜ್ಞಾನದಲ್ಲಿ ಪಾಸ್‌ ಆಗುವುದಕ್ಕೆ 10ನೇ ತರಗತಿಯಲ್ಲಿ 20 ಅಂಕ ಗಳಿಸಿದರೆ ಸಾಕು. ಮಹಾರಾಷ್ಟ್ರದ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯು ಈ ರೀತಿಯ ವಿನೂತ ಕ್ರಮಕ್ಕೆ ಮುಂದಾಗಿದೆ.

In Maharashtra passing marks will not be 35 but only 20

10ನೇ ತರಗತಿಯಲ್ಲಿ ಮ್ಯಾಕ್ಸ್‌ ಹಾಗೂ ಸೈನ್ಸ್‌ ವಿಷಯದಲ್ಲಿ ಉತ್ತೀರ್ಣರಾಗುವ ಅಂಗಳನ್ನು 35 ರಿಂದ 20ಕ್ಕೆ ಕಡಿಮೆ ಮಾಡಲು ಮುಂದಾಗಿದೆ. ಆದರೆ, ಇದು ಜಾರಿಯಾಗುವುದಕ್ಕೆ ಇನ್ನೂ ಸಮುಯ ಹಿಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಹೊಸ ಪಠ್ಯಕ್ರಮ ಪ್ರಕಟಿಸುವುದಾಗಿ ಹೇಳಲಾಗಿದೆ.

ಕೋರ್ಸ್‌ ಸಿಗಲ್ಲ: ಇದರಲ್ಲೂ ಒಂದು ಟ್ವಿಸ್ಟ್‌ ಇಡಲಾಗಿದೆ. ಮಹಾರಾಷ್ಟ್ರದಲ್ಲಿ ಮ್ಯಾಕ್ಸ್‌ ಹಾಗೂ ಸೈನ್ಸ್‌ನ ಮಾರ್ಕ್ಸ್‌ ಕಡಿಮೆ ಮಾಡಲಾಗಿದೆಯಾದರೂ, ಈ ರೀತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಮುಂದೆ ಸೈನ್ಸ್‌ ಹಾಗೂ ಮ್ಯಾಕ್ಸ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಆದರೆ, ಅಂಕಪಟ್ಟಿಯಲ್ಲಿ (ಮಾರ್ಕ್ಸ್‌ ಕಾರ್ಡ್‌ನಲ್ಲಿ) ಪಾಸ್‌ ಅಂತ ರಿಜಿಸ್ಟರ್‌ ಆಗಲಿದೆ ಎಂದು ಮಹಾರಾಷ್ಟ್ರದ ಶಿಕ್ಷಣ ಮಂಡಳಿ ಹೇಳಿದೆ. ಈ ರೀತಿ ಕಡಿಮೆ ಮಾರ್ಕ್ಸ್‌ ಪಡೆಯುವ ವಿದ್ಯಾರ್ಥಿಗಳು ಪಾಸ್‌ ಆದರೂ, ಮುಂದೆ ಉನ್ನತ ಕೋರ್ಸ್‌ಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರ ಚುನಾವಣೆ: ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ಅಂದರೆ ನವೆಂಬರ್‌ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬಾರಿ ಮಹಾರಾಷ್ಟ್ರ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ನವೆಂಬರ್‌ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಅಲ್ಲದೇ ಮಿತ್ರ ಪಕ್ಷಗಳು ಸಹ ಪ್ರಮುಖ ಪಾತ್ರವನ್ನು ವಹಿಸಿವೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಮ್ಯಾಜಿಕ್‌ ನಂಬರ್‌ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಜಿದ್ದಾಜಿದ್ದಿನ ಹೋರಾಟ ನಡೆಸಿವೆ. ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಹಾಗೂ ಶಿವಸೇನಾ ಪಾರ್ಟಿ ಎರಡು ಬಣಗಳಾಗಿವೆ. ಒಂದೊಂದು ಬಣವೂ ಆಡಳಿತ ಹಾಗೂ ವಿರೋಧ ಪಕ್ಷದೊಂದಿಗೆ ಗುರುತಿಸಿಕೊಂಡಿವೆ.

ಮಹಾರಾಷ್ಟ್ರ ಚುನಾವಣೆ ಸಮೀಪಿಸುತ್ತಿರುವಾಗಲೇ ಆಡಳಿತರೂಢ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿತ್ತು. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಮುಖ ಹೆದ್ದಾರಿಗಳನ್ನು ಶುಲ್ಕ ಮುಕ್ತ ಮಾಡಿತ್ತು. ಇದೀಗ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಈ ನಿರ್ಧಾರ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+