• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಮೂರು ವಾರಗಳಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದವರು ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ಜೂನ್ 11: ಕೊರೊನಾವೈರಸ್‌ನ ಎರಡನೇ ಅಲೆ ದೇಶದಲ್ಲಿ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಬ್ಲ್ಯಾಕ್‌ಫಂಗಸ್‌ನ ವಿಚಾರವಾಗಿ ಕಳವಳಪಡುವಂತಾ ಅಂಕಿಅಂಶ ಬಹಿರಂಗವಾಗಿದೆ. ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಒಟ್ಟು 2100 ಜನರು ಬಲಿಯಾಗಿದ್ದಾರೆ. ಕಳೆದ ಮೂರು ವಾರದಲ್ಲಿ ಈ ಫಂಗಸ್ ಪ್ರಕರಣ 150 ಶೇಕಡಾದಷ್ಟು ಹೆಚ್ಚಾಗಿದೆ.

ದೇಶದ ಎಲ್ಲಾ ಬೇರೆ ಬೇರೆ ಭಾಗಗಳಲ್ಲಿ ಕಳೆದ ಮೂರು ವಾರಗಳ ಅಂತರದಲ್ಲಿ 31,216 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಈ ಸಂದರ್ಭದಲ್ಲಿ 2109 ಜನರು ಇದಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣದ ಹೆಚ್ಚಳಕ್ಕೆ ಚಿಕಿತ್ಸೆಗೆ ಅತ್ಯಂತ ಅಗತ್ಯವಾಗಿರುವ ಆಂಫೊಟೆರಿಸಿನ್-ಬಿ ಲಸಿಕೆಯ ಕೊರತೆಯೇ ಕಾರಣ ಎನ್ನಲಾಗಿದೆ.

ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ

ಬ್ಲ್ಯಾಕ್ ಫಂಗಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಇಲ್ಲಿ 7057 ಪ್ರಕರಣಗಳು ಪತ್ತೆಯಾಗಿದ್ದು 609 ಜನರು ಇದರಿಂದಾಗಿ ಮೃತಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಇದ್ದು 5,418 ಪ್ರಕರಣಗಳು 323 ಜನರು ಮೃತಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 2,976 ಬ್ಲ್ಯಾಕ್‌ಫಂಗಸ್ ಪ್ರಕರಣಗಳು ಪತ್ತೆಯಾಗಿದೆ. ಮೇ 25ರ ವೇಳೆಗೆ ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್‌ಗೆ ತುತ್ತಾದವರ ಸಂಖ್ಯೆ 2,770 ಇದ್ದರೆ ಗುಜರಾತ್‌ನಲ್ಲಿ 2,859 ಪ್ರಕರಣಗಳು ಪತ್ತೆಯಾಗಿತ್ತು.

ಕರ್ನಾಟಕದಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ರಾಜ್ಯ ಸರ್ಕಾರ ಜೂನ್ 9ರ ವರೆಗೆ ರಾಜ್ಯದಲ್ಲಿ ಪತ್ತೆಯಾದ ಒಟ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯನ್ನು ಕರ್ನಾಟಕ ಹೈಕೋರ್ಟ್‌ಗೆ ನೀಡಿದೆ. ಇದರ ಪ್ರಕಾರ ರಾಜ್ಯದಲ್ಲಿ ಜೂನ್ 9ರ ವರೆಗೆ ಒಟ್ಟು 2,282 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 1,947 ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದು 102 ಜನರು ಗುಣಮುಖರಾಗಿದ್ದು 157 ಜನರು ಇದಕ್ಕೆ ಮೃತಪಟ್ಟಿದ್ದಾರೆ. 76 ಜನರು ವೈದ್ಯಕೀಯ ಸಲಹೆಗಳನ್ನು ಧಿಕ್ಕರಿಸಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದೆ.

ಇನ್ನು ರಾಜ್ಯದ ಬ್ಲ್ಯಾಕ್ ಫಂಗಸ್‌ ಪ್ರಕರಣಗಳ ಪೈಕಿ ಬೆಂಗಳೂರು ನಗರಲ್ಲಿ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದ್ದು 787 ಪ್ರಕರಣಗಳು ದಾಖಲಾಗಿದೆ. ಧಾರವಾಡದಲ್ಲಿ 202, ಬೆಳಗಾವಿಯಲ್ಲಿ 138, ಕಲಬುರ್ಗಿಯಲ್ಲಿ 137 ಪ್ರಕರಣಗಳು ದಾಖಲಾಗಿದೆ.

English summary
In last three weeks Over 2,100 people were killed by black fungus and the number of cases increased by 150 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X