• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆ

|

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರ ಕೃತ್ಯದ ಘಟನೆಗೆ ಸಂಬಂಧಿಸಿದಂತೆ ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.

ಅಸೆಂಬ್ಲಿಯಲ್ಲಿ ಮೋದಿ ಸರಕಾರದ ವಿರುದ್ದ ಅಕ್ಷರಸಃ ಟೀಕಾಪ್ರಹಾರ ಮಾಡಿರುವ ಕೇಜ್ರಿವಾಲ್, ಮುನ್ನೂರು ಸೀಟು ಗಳಿಸಲು ಇನ್ನೆಷ್ಟು ಯೋಧರನ್ನು ಸಾಯಿಸುತ್ತೀರಾ ಎನ್ನುವ ತೀರಾ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.

2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು

ಕೇಜ್ರಿವಾಲ್ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿದ್ದು, ಹುತಾತ್ಮ ಯೋಧರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾವಾ ಅಥವಾ ನೀವಾ ಎಂದು ಬಿಜೆಪಿ ಮರುಪ್ರಶ್ನಿಸಿದೆ. ಗಮನಿಸಬೇಕಾದ ವಿಚಾರವೇನಂದರೆ, ಮೂರೇ ದಿನಗಳ ಅಂತರದಲ್ಲಿ ಕೇಜ್ರಿವಾಲ್ ತಮ್ಮ ರಾಜಕೀಯ ನಿಲುವನ್ನೇ ಬದಲಾಯಿಸಿಕೊಂಡಿದ್ದು.

ದೆಹಲಿಯಲ್ಲಿ AAP ಪಾಲಿಗೆ ಕಾಂಗ್ರೆಸ್ 'ಮುಚ್ಚಿದ ಬಾಗಿಲು'

ಬಿಜೆಪಿಯನ್ನು ತುಕುಡೇ ತುಕುಡೇ ಪಾರ್ಟಿ ಎಂದು ಹೀಯಾಳಿಸಿರುವ ಕೇಜ್ರಿವಾಲ್, ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ನೀಚ ರಾಜಕಾರಣ ಮಾಡುವುವರು ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್, ದೆಹಲಿ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದ ಹೈಲೆಟ್ಸ್, ಮುಂದೆ ಓದಿ..

ಕೇಜ್ರಿವಾಲ್ ಹೇಳಿಕೆ, ಪಾಕಿಸ್ತಾನದ ಮಾಧ್ಯಮಗಳ ಹಬ್ಬ

ಕೇಜ್ರಿವಾಲ್ ಹೇಳಿಕೆ, ಪಾಕಿಸ್ತಾನದ ಮಾಧ್ಯಮಗಳ ಹಬ್ಬ

ಭಾರತದ ಪ್ರಧಾನಿಯನ್ನು ಟೀಕಿಸಲು, ಕೇಜ್ರಿವಾಲ್ ಹೇಳಿಕೆಯನ್ನು ಹಿಡಿದುಕೊಂಡು, ಪಾಕಿಸ್ತಾನದ ಮಾಧ್ಯಮಗಳು ಹಬ್ಬ ಮಾಡಲು ಆರಂಭಿಸಿವೆ. ಕೇಜ್ರಿವಾಲ್ ತಮ್ಮ ಭಾಷಣದಲ್ಲಿ, ನಾನು ಮೋದಿಯವರನ್ನು ಕೇಳಲು ಬಯಸುತ್ತೇನೆ, ಮುಂದಿನ ಚುನಾವಣೆಯಲ್ಲಿ ಮುನ್ನೂರು ಸೀಟು ತೆಗೆದುಕೊಳ್ಳಲು ಏನೇನು ನಾಟಕ ಮಾಡುತ್ತಿದ್ದೀರಾ, ಇನ್ನೆಷ್ಟು ಯೋಧರನ್ನು ಬಲಿ ತೆಗೆದುಕೊಳ್ಳುತ್ತೀರಾ ಎನ್ನುವ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಅಧಿಕಾರದ ದಾಹಕ್ಕಾಗಿ ಗಡಿಯಲ್ಲಿ ಈ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಾ

ಅಧಿಕಾರದ ದಾಹಕ್ಕಾಗಿ ಗಡಿಯಲ್ಲಿ ಈ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಾ

2019-20 ಬಜೆಟ್ ಚರ್ಚೆಯ ವೇಳೆ ಮಾತನಾಡುತ್ತಿದ್ದ ಕೇಜ್ರಿವಾಲ್, ನಿಮ್ಮ ಅಧಿಕಾರದ ದಾಹಕ್ಕೆ ಇನ್ನೆಷ್ಟು ಹೆಣಗಳು ಬೀಳಬೇಕು, ಇನ್ನೆಷ್ಟು ನಮ್ಮ ಯೋಧರ ಮನೆಯನ್ನು ಹಾಳು ಮಾಡುತ್ತೀರಾ? ಎಷ್ಟು ಸಂಸಾರವನ್ನು ಒಡೆಯುತ್ತೀರಾ, ಎಷ್ಟು ತಾಯಿ, ಕುಟುಂಬವನ್ನು ಅನಾಥ ಮಾಡುತ್ತೀರಾ, ನಿಮ್ಮ ಪಾರ್ಟಿಯ ಬಗ್ಗೆ ನಾಚಿಕೆಯಾಗುತ್ತದೆ, ಧಿಕ್ಕಾರವಿರಲಿ. ನಿಮ್ಮ ಅಧಿಕಾರದ ದಾಹಕ್ಕಾಗಿ, ಭಾರತ - ಪಾಕ್ ಗಡಿಯಲ್ಲಿ ಈ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಾ ಎಂದು ದೆಹಲಿ ಸಿಎಂ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ದೆಹಲಿ: ಲೋಕಸಭೆಗೆ 6 ಅಭ್ಯರ್ಥಿಗಳನ್ನು ಘೋಷಿಸಿದ AAP

ನಮ್ಮ ದೇಶದ ಪ್ರಧಾನಿ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ

ನಮ್ಮ ದೇಶದ ಪ್ರಧಾನಿ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ

ನಲವತ್ತು ಯೋಧರನ್ನು ನಾವು ಕಳೆದುಕೊಂಡಿದ್ದೇವೆ, ನಾವೆಲ್ಲಾ ಭಾರತ ಸರಕಾರದ ಪರವಾಗಿದ್ದೇವೆ. ನಮ್ಮ ಯೋಧರೊಬ್ಬರನ್ನು ಪಾಕ್ ಅಪಹರಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಾತಿ, ಕೋಮಿನ ನಡುವೆ ಒಡಕನ್ನು ತಂದು ಬಿಜೆಪಿ ರಾಜಕೀಯ ಮಾಡುತ್ತಿದ್ದರೆ, ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದೇವೆ - ಅರವಿಂದ್ ಕೇಜ್ರಿವಾಲ್.

ಯಾರ ಯಾರಜೊತೆಯೆಲೆಲ್ಲಾ ನಾವು ಫೈಟ್ ಮಾಡಬೇಕು

ಕೇಜ್ರಿವಾಲ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ನಿಮ್ಮಂತಹ ರಾಜಕಾರಣಿಗಳಿಗೆ ಧಿಕ್ಕಾರ. ಯಾರ ಯಾರಜೊತೆಯೆಲೆಲ್ಲಾ ನಾವು ಫೈಟ್ ಮಾಡಬೇಕು? ಪಾಕಿಸ್ತಾನದ ಜೊತೆಗಾ ಅಥವಾ ನಮ್ಮ ಮನೆಯಲ್ಲೇ ಇರುವ ಹಾವಿನ ಜೊತೆಗಾ ಎಂದು ಸಂಬೀತ್ ಬೇಸರ ವ್ಯಕ್ತ ಪಡಿಸಿದ್ದಾರೆ. ಕೇಜ್ರಿವಾಲ್ ಹೇಳಿಕೆ, ಪಾಕ್ ನಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿ AAP ಪಾಲಿಗೆ ಕಾಂಗ್ರೆಸ್ 'ಮುಚ್ಚಿದ ಬಾಗಿಲು

ಪದೇ ಪದೇ ಇದೇ ವಿಷಯ ಹೇಳುತ್ತಿದ್ದ ಇಮ್ರಾನ್ ಖಾನ್

ಪದೇ ಪದೇ ಇದೇ ವಿಷಯ ಹೇಳುತ್ತಿದ್ದ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಸಂಸತ್ತಿನಲ್ಲಿ ಹೇಳಿಕೆ ನೀಡುವಾಗ, ಹಿಂದೂಸ್ಥಾನ್ ನಲ್ಲಿ ಚುನಾವಣೆಯಿದೆ. ಅದಕ್ಕಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪದೇಪದೇ ಹೇಳುತ್ತಿದ್ದರು. ಈಗ ಕೇಜ್ರಿವಾಲ್ ಹೇಳಿಕೆಯನ್ನು ಇಟ್ಟುಕೊಂಡು, ಪಾಕ್ ಮಾಧ್ಯಮಗಳು ಇನ್ನಷ್ಟು ಭಾರತದ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi chief minister Arvind Kejriwal hits out at Prime Minister Narendra Modi for Pulwama terror attack. He said, for 300 seats how many more soldiers should martyred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more