Get Updates
Get notified of breaking news, exclusive insights, and must-see stories!

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆಯ ತೀರ್ಪು ಪಾಲನೆ ಆಗಬಹುದೇ?

ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಒಂದು ಪ್ರಶ್ನೆ ಉದ್ಭವಿಸಿದೆ. ಅಂತರರಾಷ್ಟ್ರೀಯ ಕೋರ್ಟ್ ನೀಡುವ ತೀರ್ಪಿಗೆ ಎರಡೂ ದೇಶಗಳು (ಭಾರತ ಹಾಗೂ ಪಾಕಿಸ್ತಾನ) ಬದ್ಧವಾಗಿರುತ್ತವಾ? ಒಂದು ವೇಳೆ ಕೋರ್ಟ್ ತೀರ್ಪು ಭಾರತದ ಪರವಾಗಿ ಬಂದಲ್ಲಿ ಅದಕ್ಕೆ ಪಾಕಿಸ್ತಾನ ಬದ್ಧವಾಗಿ ಇರುತ್ತದೆಯೇ?

ವಿಶ್ವಸಂಸ್ಥೆ ನಿಯಮಾವಳಿಯ ಪರಿಚ್ಛೇದ 94ರ ಪ್ರಕಾರ, ವಿಶ್ವಸಂಸ್ಥೆಯ ಯಾವೆಲ್ಲ ಸದಸ್ಯ ರಾಷ್ಟ್ರಗಳು ಇವೆಯೋ, ಅವು ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧವಾಗಿರಬೇಕು. ಈ ಪ್ರಕರಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡೂ ಸಹಿ ಮಾಡಿವೆ ಹಾಗೂ ಅಂಗೀಕರಿಸಿವೆ.

ರಾಜತಾಂತ್ರಿಕ ಸಂಬಂಧದ ವಿಚಾರವಾಗಿ ಬಿಕ್ಕಟ್ಟುಗಳ ಕಡ್ಡಾಯ ತೀರ್ಮಾನಕ್ಕೆ ವಿಯೆನ್ನಾ ಒಪ್ಪಂದದ ಐಚ್ಛಿಕವಾದ ಶಿಷ್ಟಾಚಾರ ಆಯ್ಕೆ ಕೂಡ ಇದ್ದು, ಈ ಶಿಷ್ಟಾಚಾರ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಎರಡೂ ಬದ್ಧವಾಗಿವೆ.

In case Kulabhushan Jadhav verdict not favourable, is ICJ ruling binding on Pakistan?

ವಿವಾದಾತ್ಮಕ ಪ್ರಕರಣಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು ಅಂತಿಮವಾದದ್ದು ಹಾಗೂ ಮೇಲ್ಮನವಿ ಕೂಡ ಸಾಧ್ಯವಿಲ್ಲ. ಆದರೆ ನ್ಯಾಯಾಲಯದ ತೀರ್ಮಾನವನ್ನು ಜಾರಿಗೊಳಿಸಲೇ ಬೇಕು ಎಂಬುದಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯದ ಬಳಿ ಯಾವುದೇ ಮಾರ್ಗ ಇಲ್ಲ.

ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಒತ್ತಡ
ಅಂಥ ಸನ್ನಿವೇಶದಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿಯು ಮಧ್ಯ ಪ್ರವೇಶಿಸಬಹುದು. ಕೋರ್ಟ್ ನ ತೀರ್ಪನ್ನು ಪಾಲಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಒತ್ತಡ ಹೇರಬಹುದು.

ಇದೀಗ ಈ ವಿಚಾರದಲ್ಲೂ ಕೆಲವು ಸಮಸ್ಯೆ ಹಾಗೂ ಪ್ರಶ್ನೆಗಳು ಉದ್ಭವಿಸುತ್ತವೆ. ಭದ್ರತಾ ಸಮಿತಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಒಂದು ಅಥವಾ ಅದರ ಮಿತ್ರ ರಾಷ್ಟ್ರಗಳ ಪೈಕಿ ಒಂದರ ವಿರುದ್ಧವಾಗಿ ತೀರ್ಪು ಬಂದರೆ ಆ ಸದಸ್ಯ ರಾಷ್ಟ್ರದಿಂದ ವಿಟೋ ಬಳಸಬಹುದು. ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶ ಪಾಲಿಸಲು ಪಾಕಿಸ್ತಾನ ನಿರಾಕರಿಸಿದರೆ, ಆ ದೇಶದ ಪರವಾಗಿ ಚೀನಾ ನಿಲ್ಲಬಹುದಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಜೈಷ್-ಇ-ಮೊಹ್ಮದ್ ನ ಮೌಲಾನಾ ಮಸೂದ್ ಅಜರ್ ಪ್ರಕರಣದಲ್ಲಿ ಹೇಗೆ ಚೀನಾವು ಬೆಂಬಲ ನೀಡುತ್ತಾ ಬಂದಿತ್ತೋ ಈಗಲೂ ಹಾಗೇ ಮಾಡಬಹುದು.

ರಿಪಬ್ಲಿಕ್ ನಿಕರಗುವ ವರ್ಸಸ್ ಅಮೆರಿಕ
ರಿಪಬ್ಲಿಕ್ ಆಫ್ ನಿಕರಗುವಾ ವರ್ಸಸ್ ಅಮೆರಿಕದ ಪ್ರಕರಣವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಕೋರ್ಟ್ ನಿಂದ ನಿಕರಗುವ ಪರವಾಗಿ ತೀರ್ಪು ಬಂದಿತು. ಆಗ ಕಲಾಪಗಳಲ್ಲಿ ಪಾಲ್ಗೊಳ್ಳಲು ಅಮೆರಿಕ ನಿರಾಕರಿಸಿತು. ಜತೆಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಿಂದ ತೀರ್ಪಿನ ಜಾರಿಯನ್ನು ತಡೆ ಹಿಡಿಯಿತು.

ತೀರ್ಪಿಗೆ ಬದ್ಧವಾದ ದೇಶಗಳು ಇರುವಾಗ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರಗಳು ಮಧ್ಯ ಪ್ರವೇಶ ಮಾಡುವುದಿಲ್ಲ. ಒಂದು ವೇಳೆ ಹೀಗೇ ಆದಲ್ಲಿ ಅಂತರರಾಷ್ಟ್ರೀಯ ಕೋರ್ಟ್ ನ ತೀರ್ಪನ್ನು ಜಾರಿ ಮಾಡಲೇ ಬೇಕಾಗುತ್ತದೆ. ಅದಲ್ಲದೆ ಬಲವಂತವಾಗಿ ಆದರೂ ತೀರ್ಪು ಜಾರಿಗೆ ತರುವಂತೆ ಮಾಡಲು ವಿಶ್ವಸಂಸ್ಥೆ ಭದ್ರತಾ ಸಮಿತಿ ಕ್ರಮ ಕೈಗೊಳ್ಳಬಹುದು. ಅದು ಕೂಡ ಅಂತರರಾಷ್ಟ್ರೀಯ ಮಟ್ಟದ ಶಾಂತಿ ಸ್ಥಾಪನೆಗಾಗಿ ಹಾಗೂ ಈ ಆಯ್ಕೆಯನ್ನು ಇದುವರೆಗೂ ಮಾಡಿಕೊಂಡಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+