• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿರೋಧ ಪಕ್ಷಗಳ ಸಭೆಯಲ್ಲಿ ಮತ್ತೆ ಒಗ್ಗಟ್ಟಿನ ಕೊರತೆ, ಬಿಜೆಪಿಗೆ ಪ್ಲಸ್ ಪಾಯಿಂಟ್

|
Google Oneindia Kannada News

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ, ವಿರೋಧ ಪಕ್ಷಗಳು ಎಷ್ಟೇ ಹೋರಾಟ ನಡೆಸಿದರೂ, ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ವಿಫಲವಾಗಿದ್ದೇ ಹೆಚ್ಚು. ಕೆಚ್ಚಿನಿಂದ ಆರಂಭವಾಗುವ ಹೋರಾಟಗಳು ದಿನ ಕಳೆದಂತೆ ಕಿಚ್ಚನ್ನು ಕಳೆದುಕೊಂಡ ನಿದರ್ಶನಗಳು ನಮ್ಮ ಮುಂದಿವೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನಿರ್ಣಾಯಕ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಇದರ ಜೊತೆಗೆ, 2024ರಲ್ಲಿ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆ.

ಅತ್ತ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ: ಇತ್ತ, ಡಿ.ಕೆ.ಶಿವಕುಮಾರ್ ಬಣಕ್ಕೆ ಜಮೀರ್ ಅಹ್ಮದ್?ಅತ್ತ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ: ಇತ್ತ, ಡಿ.ಕೆ.ಶಿವಕುಮಾರ್ ಬಣಕ್ಕೆ ಜಮೀರ್ ಅಹ್ಮದ್?

ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕು ಎನ್ನುವ ಏಕೈಕ ಉದ್ದೇಶಗಳನ್ನು ಇಟ್ಟುಕೊಂಡು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಇತರ ಪಕ್ಷಗಳ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ. ಅದು ವರ್ಕೌಟ್ ಆಗಿದ್ದು ಕಮ್ಮಿಯಾದರೂ, ಆ ಪ್ರಯತ್ನ ಮುಂದುವರಿಯುತ್ತಲೇ ಬರುತ್ತಿದೆ.

 ಪೆಗಾಸಸ್ ಬೇಹುಗಾರಿಕೆ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಉತ್ತರ ಹೇಗಿತ್ತು? ಪೆಗಾಸಸ್ ಬೇಹುಗಾರಿಕೆ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಉತ್ತರ ಹೇಗಿತ್ತು?

ಈಗ, ಸೋನಿಯಾ ಗಾಂಧಿ ನೇತೃತ್ವದಲ್ಲಿ ಮತ್ತೆ ವಿರೋಧ ಪಕ್ಷಗಳು ಒಗ್ಗಟ್ಟನ್ನು ಜಪಿಸಿವೆ. ಹತ್ತೊಂಬತ್ತು ಪಕ್ಷಗಳು ಬಿಜೆಪಿ ವಿರುದ್ದ ಸಟೆದು ನಿಲ್ಲಲು ಒಂದಾಗಿವೆ. ಬಿಜೆಪಿ ವಿರುದ್ದ ಸಮರ್ಥವಾಗಿ ಹೋರಾಡುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಈ ಸಭೆಗೆ ಆಹ್ವಾನಿಸದೇ ಇರುವುದು ಒಗ್ಗಟ್ಟಿನಲ್ಲಿ ಕಾಣಿಸುತ್ತಿರುವ ಮೊದಲ ಹುಳುಕು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

 ಸೋನಿಯಾ ಗಾಂಧಿ ಕರೆದಿದ್ದ ವಿರೋಧ ಪಕ್ಷಗಳ ವರ್ಚುಯಲ್ ಸಭೆ

ಸೋನಿಯಾ ಗಾಂಧಿ ಕರೆದಿದ್ದ ವಿರೋಧ ಪಕ್ಷಗಳ ವರ್ಚುಯಲ್ ಸಭೆ

ಕಳೆದ ಶುಕ್ರವಾರ (ಆಗಸ್ಟ್ 20) ಶುಕ್ರವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ನಿರೀಕ್ಷೆಯಂತೆ ತೃಣಮೂಲ ಕಾಂಗ್ರೆಸ್, ಎನ್ಸಿಪಿ, ಡಿಎಂಕೆ, ಜೆಎಂಎಂ, ಸಿಪಿಐ(ಎಂ), ಅನಿರೀಕ್ಷಿತ ಎನ್ನುವಂತೆ ಶಿವಸೇನೆಯ ಮುಖಂಡರು, ಸೋನಿಯಾ ಗಾಂಧಿ ಕರೆದಿದ್ದ ಈ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಚುನಾವಣೆಗೆ ಯಾವ ವಿಚಾರವನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎನ್ನುವ ವಿಚಾರದಲ್ಲಿ ಸಭೆಯಲ್ಲಿ ಒಗ್ಗಟ್ಟು ಮೂಡಿ ಬಂದಿಲ್ಲ.

 ಯಾವ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಹೋರಾಡುವುದು

ಯಾವ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಹೋರಾಡುವುದು

ಇನ್ನು, ಬಹುಜನ ಸಮಾಜಪಕ್ಷ, ಬಿಜು ಜನತಾದಳ, ವೈಎಸ್ಆರ್ ಕಾಂಗ್ರೆಸ್ , ಟಿಆರ್ ಎಸ್ ಸಭೆಯಿಂದ ದೂರವುಳಿದಿದ್ದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಏಟು ಬಿದ್ದಂತಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು, ಒಬ್ಬೊಬ್ಬರು ಒಂದೊಂದು ವಿಚಾರದ ಬಗ್ಗೆ ವಾದ ಮಂಡಿಸಿದ್ದಾರೆ. ಹಾಗಾಗಿ, ಮೊದಲ ಸಭೆಯಲ್ಲಿ ಯಾವ ನಿರ್ದಿಷ್ಟ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಹೋರಾಡುವುದು ಎನ್ನುವ ವಿಚಾರದಲ್ಲಿ ಒಮ್ಮತ ಮೂಡಿಲ್ಲ.

 ಪೆಗಾಸಸ್ ಬೇಹುಗಾರಿಕೆ ವಿಚಾರವೇ ಪ್ರಮುಖ ಅಸ್ತ್ರ ಎನ್ನುವುದು ಕೆಲವರ ವಾದ

ಪೆಗಾಸಸ್ ಬೇಹುಗಾರಿಕೆ ವಿಚಾರವೇ ಪ್ರಮುಖ ಅಸ್ತ್ರ ಎನ್ನುವುದು ಕೆಲವರ ವಾದ

ಪೆಗಾಸಸ್ ಬೇಹುಗಾರಿಕೆ ವಿಚಾರವೇ ಪ್ರಮುಖ ಅಸ್ತ್ರ ಎಂದು ಕೆಲವೊಂದು ಪ್ರತಿನಿಧಿಗಳು ವಾದಿಸಿದರೆ, ಇದಕ್ಕೆ ಕೆಲವು ಪಕ್ಷಗಳು ಸಹಮತವನ್ನು ವ್ಯಕ್ತ ಪಡಿಸಲಿಲ್ಲ. ಈ ವಿಚಾರವನ್ನು ಮುಂದಿಟ್ಟು ಕೊಂಡು ಹೋದರೆ, ರಫೇಲ್ ವಿಚಾರ ಗೂಡು ಸೇರಿದಂತಾಗುತ್ತದೆ ಎನ್ನುವುದನ್ನು ಕೆಲವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರ ಸಾರ್ವಜನಿಕರಿಗೆ ಹೇಗೆ ಹತ್ತಿರದ ಅಂಶವಾಗುತ್ತದೆ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಪ್ರತಿಪಾದಿಸಿದ್ದಾರೆ.

  ಕೀಯಾರ ಅಡ್ವಾಣಿ crush ಯಾರು ಗೊತ್ತಾ? | Oneindia Kannada
   ವಿರೋಧ ಪಕ್ಷಗಳ ಸಭೆಯಲ್ಲಿ ವಿಪಕ್ಷಗಳ ಒಗ್ಗಟ್ಟಿನ ಕೊರತೆ: ಅದೇ ಬಿಜೆಪಿಗೆ ರಾಮಬಾಣ

  ವಿರೋಧ ಪಕ್ಷಗಳ ಸಭೆಯಲ್ಲಿ ವಿಪಕ್ಷಗಳ ಒಗ್ಗಟ್ಟಿನ ಕೊರತೆ: ಅದೇ ಬಿಜೆಪಿಗೆ ರಾಮಬಾಣ

  ಸೊರೆನ್ ಅವರ ವಾದವನ್ನು ರಾಹುಲ್ ಗಾಂಧಿ ಮತ್ತು ಕಮ್ಯೂನಿಸ್ಟ್ ನಾಯಕ ಸೀತಾರಾಮ ಯಚೂರಿ ಒಪ್ಪುವುದಿಲ್ಲ. ಕಾಂಗ್ರೆಸ್ಸಿನ ಕೆಲವು ಮುಖಂಡರೂ ಪೆಗಾಸಸ್ ವಿಚಾರ ಪ್ರಮುಖವಾಗುವುದಿಲ್ಲ ಎನ್ನುವ ನಿಲುವನ್ನು ತಾಳಿದ್ದಾರೆ. ರೈತರ ಹೋರಾಟವೇ ಮುಂದಿನ ಚುನಾವಣೆಗೆ ಪ್ರಮುಖ ಅಸ್ತ್ರವಾಗಬೇಕು ಎಂದು ಪಂಜಾಬ್ ಮತ್ತು ಹರ್ಯಾಣದ ನಾಯಕರು ಹೇಳುತ್ತಾರೆ. ಒಂದು ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಾಗದ ಮಾತು ಎಂದು ಅಸಾಸುದ್ದೀನ್ ಓವೈಸಿ ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ, ಸೋನಿಯಾ ಗಾಂಧಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಯಾವುದನ್ನೂ ಮುಖಂಡರು ಸರ್ವಾನುಮತದಿಂದ ಒಪ್ಪಿಕೊಂಡಿಲ್ಲ.

  English summary
  In A 19 Opposition Parties Meeting, Leaders Not Able To Come To Any Conclusion On Issue to Take Up Against BJP. Know More
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X