ಯುಪಿಎಸ್‌ಸಿ ಪ್ರಿಲಿಮ್ನರಿ ಪರೀಕ್ಷಾರ್ಥಿಗಳಿಗೆ ಮುಖ್ಯ ಸೂಚನೆ
ನವದೆಹಲಿ, ಮಾರ್ಚ್ 07: ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ)ದ ಪ್ರಾಥಮಿಕ (ಪ್ರಿಲಿಮ್ನರಿ) ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಮುಖ್ಯವಾದ ಸೂಚನೆಯೊಂದನ್ನು ಯುಪಿಎಸ್‌ಸಿ ನೀಡಿದೆ.
ಪ್ರಿಲಿಮ್ನರಿ ಪರೀಕ್ಷೆಗೆ ಅರ್ಜಿ ಹಾಕುವವರು ಖಡ್ಡಾಯವಾಗಿ ತಮ್ಮ ಹತ್ತನೇ ತರಗತಿ ಅಂಕಪಟ್ಟಿ ಅಥವಾ ಟಿಸಿ ಯಲ್ಲಿರುವಂತೆಯೇ ಯುಪಿಎಸ್‌ಸಿ ಪರೀಕ್ಷಾ ಅರ್ಜಿಯಲ್ಲಿಯೂ ಹೆಸರು ದಾಖಲಿಸಬೇಕು.
ಅರ್ಜಿಯಲ್ಲಿ ದಾಖಲಿಸಿದ ಹೆಸರೇ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿ ಮುದ್ರಿತವಾಗುತ್ತದೆ. ಹಾಗಾಗಿ ಹೆಸರು ನೊಂದಾವಣಿ ಮಾಡುವಾಗ ಎಚ್ಚರದಿಂದ ಮಾಡಬೇಕೆಂದು ಯುಪಿಎಸ್‌ಸಿ ಹೇಳಿದೆ.

ಇಷ್ಟಲ್ಲದೆ ಪರೀಕ್ಷಾರ್ಥಿಗಳು ಸರ್ಕಾರದಿಂದ ನೀಡಲ್ಪಟ್ಟಿರುವ ಗುರುತಿನ ಚೀಟಿಯ ಸ್ಕ್ಯಾನ್ ಕಾಪಿಯನ್ನು ಅರ್ಜಿಯ ಜೊತೆಗೆ ಖಡ್ಡಾಯವಾಗಿ ಲಗತ್ತಿಸಬೇಕು ಅಥವಾ ಅಪ್‌ಲೋಡ್ ಮಾಡಬೇಕು ಎಂದು ಯುಪಿಎಸ್‌ಸಿ ಸೂಚನೆ ನೀಡಿದೆ.
ಯುಪಿಎಸ್‌ಸಿ ಪ್ರಿಲಿಮ್ನರಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಖಡ್ಡಾಯವಾಗಿ ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ತೆಗೆದುಕೊಂಡು ಬರಬೇಕಾಗುತ್ತದೆ.
ಯುಪಿಎಸ್‌ಸಿ ಪ್ರಿಲಿಮ್ನರಿ ಪರೀಕ್ಷೆಗೆ ಈಗಾಗಲೇ ಆನ್‌ಲೈನ್ ಅರ್ಜಿಗಳು ಆರಂಭವಾಗಿದ್ದು, ಮಾರ್ಚ್ 18ರವರೆಗೆ ಅರ್ಜಿಗಳನ್ನು ಹಾಕಬಹುದಾಗಿದೆ.












Click it and Unblock the Notifications