ಬಹಿರಂಗವಾಗಿ ಮಲವಿಸರ್ಜನೆ ಮಾಡಿದರೆ 500 ರು. ದಂಡ!

Posted By:
Subscribe to Oneindia Kannada

ನವದೆಹಲಿ, ಜನವರಿ 17 :ಬಹಿರಂಗವಾಗಿ ಮಲವಿಸರ್ಜನೆ ಮಾಡಿದವರಿಗೆ 500 ರು. ದಂಡ. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ಇಡೀ ಕುಟುಂಬದ ಪ್ರತಿ ಸದಸ್ಯರಿಗೆ 500 ರು. ದಂಡ ವಿಧಿಸಲಾಗುವುದು ಎಂದು ಭೋಪಾಲ್ ನಗರ ನಿಗಮ್ ಹೇಳಿಕೆ ನೀಡಿದೆ. ಇದನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬಾರದೇಕೆ?

Important news from India on 17th January

***

ಬಿಹಾರದ ಜೆಹನಾಬಾದ್ ನಲ್ಲಿ 12 ವರ್ಷದ ಬಾಲಕಿಯ ಮೇಲೆ ಸರಕಾರಿ ಶಾಲೆ ಮುಖ್ಯೋಪಾಧ್ಯಾಯ ಮತ್ತು ಮೂವರು ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ. [ಬಿಗ್ ಬಾಸ್ ಸ್ಪರ್ಧಿ ಪೂಜಾ ಮೇಲೆ ಸಾಮೂಹಿಕ ಅತ್ಯಾಚಾರ?]

ಬಾಲಕಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಇದನ್ನು ಶಿಕ್ಷಕರು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಾಲಕಿಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Important news from India on 17th January

***

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆಯಂದು ಜನನಾಯಕನಿಗೆ ನಮನ ಸಲ್ಲಿಸಲು ಚೆನ್ನೈನ ಮರೀನಾ ಬೀಚ್ ನಲ್ಲಿ ಲಕ್ಷಾಂತರ ಅಭಿಮಾನಿಗಳ ಜಮಾವಣೆ.

ಅಪಾರ ಜನಸಾಗರ ನೋಡಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರನ ಮಗಳು ದೀಪ್ ಜಯಕುಮಾರ್ ಅವರು ಎಂಜಿ ರಾಮಚಂದ್ರನ್ ಅವರಿಗೆ ನಮನ ಸಲ್ಲಿಸದೆ ಮರಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Important news from India on 17th January. 12-year-old student of a Government school allegedly gangraped by the Principal and three teachers in Bihar's Jehanabad.
Please Wait while comments are loading...