• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶಕ್ಕೆ ಅಪ್ಪಳಿಸಲಿದೆ 'ಅಂಫಾನ್' ಚಂಡಮಾರುತ: ಎಲ್ಲೆಲ್ಲಿ ಭಾರಿ ಮಳೆ?

|

ನವದೆಹಲಿ, ಮೇ 15: ಕೊರೊನಾ ಮಹಾಮಾರಿ ಭೀತಿ ನಡುವೆಯೇ ದೇಶಕ್ಕೆ ಅಂಫಾನ್ ಚಂಡಮಾರುತ ಲಗ್ಗೆ ಇಡಲಿದೆ.

   ಕಬ್ಬನ್ ಪಾರ್ಕ್ ಅಂದ್ರೆ ದೇವೇಗೌಡ್ರಿಗೆ ಬಹಳ ಇಷ್ಟ..! | YSV Datta about Deve Gowda

   ಅಂಡಮಾನ್, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಶನಿವಾರ ಸಂಜೆಯಷ್ಟೊತ್ತಿಗೆ ಚಂಡಮಾರುತ ಅಪ್ಪಳಿಸಲಿದೆ.

   ಮುಂಬರುವ ಚಂಡಮಾರುತಗಳ ಚೆಂದದ ಹೆಸರುಗಳಿವು!

   ಶನಿವಾರ ಅಂಡಮಾನ್ ನಿಕೋಬಾರ್ ದ್ವೀಪ,ಒಡಿಶಾದ ಕರಾವಳಿ ಪ್ರದೇಶ, ಪಶ್ಚಿಮ ಬಂಗಾಳದ ಕೆಲವೆಡೆ ಭಾರಿ ಮಳೆಯಾಗಲಿದೆ.

   ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆ: ಇಂದು ಎಲ್ಲೆಲ್ಲಿ ಮಳೆ ಸಾಧ್ಯತೆ?

   ಮೇ15ರ ನಂತರ ಬಂಗಾಳಕೊಲ್ಲಿ ಸಮೀಪ ಯಾರೂ ಕೂಡ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷ ಫಣಿ ಚಂಡಮಾರುತ ಸೃಷ್ಟಿಯಾಗಿತ್ತು ಈ ವರ್ಷ ಅಂಫಾನ್ ಸೃಷ್ಟಿಯಾಗುತ್ತಿದೆ.

   ಪ್ರಬಲವಾಗಲಿದೆ ಚಂಡಮಾರುತ

   ಪ್ರಬಲವಾಗಲಿದೆ ಚಂಡಮಾರುತ

   ನಾಳೆಯೊಳಗೆ ಚಂಡಮಾರುತ ಪ್ರಬಲವಾಗುವ ನಿರೀಕ್ಷೆ ಇದೆ. ಇದು ಈಶಾನ್ಯದತ್ತ ಚಲಿಸುವ ಸಾಧ್ಯತೆ ಇದೆ.

   ಅಪ್ರದಕ್ಷಿಣೆ ಹಾಕುತ್ತಾ ಮಳೆಯ ಮಾರುತಗಳನ್ನು ಸೆಳೆಯಲಿದೆ

   ಅಪ್ರದಕ್ಷಿಣೆ ಹಾಕುತ್ತಾ ಮಳೆಯ ಮಾರುತಗಳನ್ನು ಸೆಳೆಯಲಿದೆ

   ಇದು ಅಪ್ರದಕ್ಷಿಣೆ ಹಾಕುವ ರೀತಿಯಲ್ಲಿ ಸುತ್ತುವುದರಿಂದ ಮುಂಗಾರು ಮಾರುತಗಳನ್ನು ಸೆಳೆಯಲಿದೆ. ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮಾಹಿತಿ ಪ್ರಕಾರ ಇನ್ನು ಮೂರು ದಿನ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಉತ್ತರಕನ್ನಡ, ಕೊಡಗಿನಲ್ಲಿ ವಿಪರೀತ ಮಳೆಯಾಗಲಿದೆ.

   ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆ

   ಎಲ್ಲೆಲ್ಲಿ ಮಳೆ ಬರುತ್ತೆ?

   ಎಲ್ಲೆಲ್ಲಿ ಮಳೆ ಬರುತ್ತೆ?

   ಚಂಡಮಾರುತ ಸೃಷ್ಟಿಯಿಂದ ಅಂಡಮಾನ್, ಒಡಿಶಾ, ಪಶ್ಚಿಮ ಬಂಗಾಳ ಹೊರತುಪಡಿಸಿ ಬೇರೆ ಭಾಗಗಳಲ್ಲಿ ಅಷ್ಟೇನು ಸಮಸ್ಯೆಯಾಗುವುದಿಲ್ಲ. ಇದರ ಹೊರತಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.

   ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತ ಸಂಚಲನ

   ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತ ಸಂಚಲನ

   ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳ ಸಂಚಲ ಆರಂಭವಾಗಿದೆ. ಸದ್ಯದಲ್ಲೇ ಮುಂಗಾರು ಕರ್ನಾಟಕ ಕೇರಳ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾತಾವರಣ ಬದಲಾಗುತ್ತಿದೆ. ಗುರುವಾರವಷ್ಟೇ ವಾಯುಭಾರ ಕುಸಿತ ಉಂಟಾಗಿದೆ. ಇದೀಗ ಮುಂದುವರೆದ ಭಾಗವಾಗಿ ಅಂಫಾನ್ ಚಂಡಮಾರುತ ಸೃಷ್ಟಿಯಾಗುತ್ತಿದೆ.

   ಮೇ 14ರಂದು ಬೆಂಗಳೂರಲ್ಲಿ ಭಾರಿ ಮಳೆ ಮುನ್ಸೂಚನೆ: 1 ವಾರ ರಾಜ್ಯದಲ್ಲಿ ಮಳೆ

   English summary
   A low-pressure area over south-east Bay of Bengal and the south Andaman sea — formed on May 13, 2020 morning may result in the subsequent formation of a cyclone by May 16 evening, according to the India Meteorological Department
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X