Heat Wave Death 211: ಸಿಹಿ ಸುದ್ದಿ: ಈ ರಾಜ್ಯಗಳಿಗೆ ಶಾಖದ ಅಲೆ ಇಳಿಕೆ?: 24 ಗಂಟೆಯಲ್ಲಿ ಅತ್ಯಧಿಕ ಸಾವು

ಭುವನೇಶ್ವರ, ಜೂನ್ 03: ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಪ್ರವೇಶಿಸುವ ನಿರೀಕ್ಷೆ ಇದೆ. ಈವರೆಗೆ ಈ ಭಾಗದಲ್ಲೆಲ್ಲ ತೀವ್ರ ಶಾಖದ ಅಲೆ ಉಂಟಾಗಿತ್ತು. ಈ ಕಾರಣದಿಂದ ಇದುವರೆಗಿನ ಸಾವಿನ ಸಂಖ್ಯೆ ಬರೋಬ್ಬರಿ 200ರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಅತ್ಯಧಿಕ ಸಾವು ವರದಿ ಆಗಿದೆ.

ಕೆಲವು ರಾಜ್ಯಗಳಿಗೆ ಐಎಂಡಿ ಸಿಹಿ ಸುದ್ದಿ ನೀಡಿದ್ದು, ಮುಂದಿನ ಮೂರು ದಿನಗಳಲ್ಲಿ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಶಾಖದ ಅಲೆಗಳ ತೀವ್ರತೆ ಇಳಿಕೆ ಆಗಲಿದೆ ಎಂದು ತಿಳಿಸಿದೆ. ಕಳೆದ ಒಂದೇ ದಿನಗಳಲ್ಲಿ ಒಡಿಶಾ ರಾಜ್ಯದಲ್ಲಿ ಬರೋಬ್ಬರಿ 45 ಹೊಸ ಸಾವುಗಳು ವರದಿ ಆಗಿವೆ.

IMD says Heat Wave will Decrease in These States 45 Death by Sunstroke in last 24 hours

ಈ ಮೂಲಕ ದೇಶದಲ್ಲಿ ಭಾನುವಾರವರೆಗೆ ಶಾಖದಿಂದ 211 ಮಂದಿ ಮೃತಪಟ್ಟಂತಾಗಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಚುನಾವಣಾ ಕರ್ತವ್ಯನಿರತ ಕಾನ್‌ಸ್ಟೆಬಲ್ ಒಬ್ಬರು ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ.

ಒಡಿಶಾ ರಾಜ್ಯದಲ್ಲೇ 141 ಮಂದಿ ಬಲಿ

ಓಡಿಶಾ ರಾಜ್ಯದಲ್ಲಿ ಬಿಸಿಲಿಗೆ ಅತ್ಯಧಿಕ ಸಾವುಗಳು ಸಂಭವಿಸಿವೆ. ಒಟ್ಟು 141 ಜನ ಮರಣ ಹೊಂದಿದ್ದಾರೆ ನೆನ್ನೆ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) 45 ಸಾವುಗಳು ಆಗಿದ್ದು, ಅದರಲ್ಲಿ 26 ಸಾವುಗಳು ಶಾಖದ ಹೊಡೆತದಿಂದ ಆಗಿವೆ. ಇದನ್ನು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ದೃಢಪಡಿಸಿದ್ದಾರೆ.

IMD says Heat Wave will Decrease in These States 45 Death by Sunstroke in last 24 hours

ಈ ಪೈಕಿ ಎಂಟು ಸಾವುಗಳಿಗೆ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದರು, ಬಾಕಿ ಉಳಿದ 107 ಸಾವುನೋವುಗಳು ಶಾಖದ ಅಲೆಯ ಕಾರಣದಿಂದಾಗಿವೆ. ಒಡಿಶಾದ ಪಶ್ಚಿಮ ಭಾಗದಲ್ಲಿ ಹೆಚ್ಚು ಸಾವು ನೋವು ಸಂಭವಿಸಿವೆ. ಭಾನುವಾರಕ್ಕೂ ಹಿಂದಿನ ಮೂರು ದಿನ ಮೂರು ದಿನಗಳಲ್ಲಿ 35 ಶಂಕಿತ ಶಾಖಾಘಾತ ಸಾವಾಗಿವೆ.

ಅದರಲ್ಲಿ ಆರು ಮಂದಿ ಸೂರ್ಯನ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಬಲಂಗೀರ್ ಜಿಲ್ಲೆಯಲ್ಲಿ 20 ಶಂಕಿತ ಸನ್‌ಸ್ಟ್ರೋಕ್ ಸಾವು ವರದಿ ಆಗಿವೆ. ಇದರಲ್ಲಿ ನಾಲ್ಕು ಶಾಖದ ಅಲೆಯಿಂದ ಸಾವಾದರೆ, ಉಳಿದ 16 ಸಾವಿನ ಬಗ್ಗೆ ಸರ್ಕಾರದಿಂದ ತನಿಖೆ ನಡೆಯುತ್ತಿದೆ.

ಬಿಹಾರದಲ್ಲಿ ಕಾನ್‌ಸ್ಟೆಬಲ್ ಸಾವು

ಬಿಹಾರ ರಾಜ್ಯದಲ್ಲಿ ಔರಂಗಾಬಾದ್‌ನ ದೌದ್‌ನಗರದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಇವಿಎಂ ಸಾಗಿಸುತ್ತಿದ್ದರು. ಈ ವೇಳೆ ಅವರು ಬಿಸಿಲಿನ ಶಾಖಕ್ಕೆ ಬಸ್‌ನಲ್ಲಿ ಮೂರ್ಛೆ ಹೋಗಿ ಬಿದ್ದ ಘಟನೆ ಶನಿವಾರ ನಡೆಯಿತು. ಅವರನ್ನು ಪಾಟ್ನಾದ ಏಮ್ಸ್ಗೆ ದಾಖಲಿಸಿತಾದರೂ ಅವರು ಬದುಕುಳಿಯಲಿಲ್ಲ.

ಸದ್ಯ ಹವಾಮಾನ ಇಲಾಖೆ ನೀಡಿರುವ ಪ್ರಕಾರ, ಬರ್ಗಢ್, ಬಲಂಗೀರ್, ನುವಾಪಾಡಾ, ಸೋನೆಪುರ್ ಮತ್ತು ಕಲಹಂಡಿಯ ಐದು ಪಶ್ಚಿಮ ಜಿಲ್ಲೆಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಬುಧವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮುಂಗಾರು ದೇಶದ ಇತರ ರಾಜ್ಯಗಳಿಗೆ ಆವರಿಸುವ ಸಾಧ್ಯತೆ ಇದೆ. ಹೀಗಾಗಿ ತಕ್ಕ ಮಟ್ಟಿನ ಬಿಸಿಗಾಳಿಯಲ್ಲಿ ಇಳಿಕೆ ಆಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+