ಈ ನಾಲ್ಕು ರಾಜ್ಯಗಳಲ್ಲಿ ಆಗಸ್ಟ್‌ 15ರವರೆಗೂ ಭಾರೀ ಮಳೆ ಎಚ್ಚರಿಕೆ

ನವದೆಹಲಿ, ಆಗಸ್ಟ್ 11: ದೇಶದ ಕೆಲವು ಭಾಗಗಳಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು, ಹಲವು ರಾಜ್ಯಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಕೆಲವು ದಿನಗಳಿಂದ ಭಾರೀ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಇದರೊಂದಿಗೆ, ಇನ್ನಷ್ಟು ರಾಜ್ಯಗಳಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ.

ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು ಹಾಗೂ ಕೇರಳದಲ್ಲಿ ಅತ್ಯಧಿಕ ಮಳೆಯಾಗುವ ಮುನ್ಸೂಚನೆಯನ್ನು ಬುಧವಾರ ಹವಾಮಾನ ಇಲಾಖೆ ನೀಡಿದೆ.

ಈಶಾನ್ಯ ರಾಜ್ಯಗಳಲ್ಲಿ ಇನ್ನಷ್ಟು ದಿನ ಮಳೆ ಮುಂದುವರೆಯಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಆಗಸ್ಟ್ 11ರಿಂದ 14ರವರೆಗೆ ಮಳೆಯಾಗಿ ನಂತರ ತಗ್ಗಲಿದೆ. ಅಸ್ಸಾಂ ಹಾಗೂ ಮೇಘಾಲಯದಲ್ಲಿ ಆಗಸ್ಟ್‌ 11ರಿಂದ 13ರವರೆಗೂ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದೆ ಓದಿ...

 ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ

ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ

ಮೊದಲಿಗೆ ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು ಹಾಗೂ ಕೇರಳದಲ್ಲಿ ಅತ್ಯಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರೊಂದಿಗೆ, ಬುಧವಾರದಿಂದ ಆರಂಭವಾಗಿ ಆಗಸ್ಟ್ 14ರವರೆಗೂ ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ, ಬಿಹಾರ, ಜಾರ್ಖಂಡ್‌ನಲ್ಲಿ ಭಾರೀ ಮಳೆಯಾಗಲಿದೆ. ಬಿಹಾರದಲ್ಲಿ ಆಗಸ್ಟ್‌ 11 ಹಾಗೂ 12ರಂದು ಅಧಿಕ ಮಟ್ಟದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

 ಮುಂದಿನ ಐದು ದಿನ ಹಿಮಾಚಲಯದಲ್ಲಿ ಮಳೆ

ಮುಂದಿನ ಐದು ದಿನ ಹಿಮಾಚಲಯದಲ್ಲಿ ಮಳೆ

ಮುಂದಿನ ಐದು ದಿನಗಳ ಕಾಲ ಹಿಮಾಚಲದ ಪಶ್ಚಿಮ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರಾಖಂಡ ಆಗಸ್ಟ್‌ 11ರಿಂದ 15ರವರೆಗೂ ಅಧಿಕ ಮಳೆ ಪಡೆಯಲಿದೆ. ಹಿಮಾಚಲಯದಲ್ಲಿ ಆಗಸ್ಟ್ 12ರಿಂದ 14ರವರೆಗೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ.

 ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಪರಿಸ್ಥಿತಿ

ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಪರಿಸ್ಥಿತಿ

ಪಶ್ಚಿಮ ಬಂಗಾಳದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಪ್ರವಾಹದಿಂದಾಗಿ ಜನಜೀವನ ತತ್ತರಿಸಿದೆ. ಮುಂದಿನ ಐದು ದಿನಗಳ ಕಾಲ ಇಲ್ಲಿ ಮಳೆ ಮುಂದುವರೆಯಲಿರುವುದಾಗಿ ಎಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಜೊತೆಗೆ
ಪಂಜಾಬ್, ಹರಿಯಾಣ, ರಾಜಸ್ಥಾನದಲ್ಲಿ ಇನ್ನೂ ನಾಲ್ಕು ದಿನ ಸಾಧಾರಣ ಮಳೆಯಾಗಲಿದೆ. ಆಗಸ್ಟ್ 15ರವರೆಗೂ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಮಳೆಯಾಗುತ್ತದೆ. ದ್ವೀಪ ಭಾಗಗಳಲ್ಲಿ ಆಗಸ್ಟ್ 16ರ ನಂತರ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ.

 ತಮಿಳುನಾಡು, ಕೇರಳದಲ್ಲಿ ಮಳೆಯಬ್ಬರ

ತಮಿಳುನಾಡು, ಕೇರಳದಲ್ಲಿ ಮಳೆಯಬ್ಬರ

ಮುಂದಿನ ಐದು ದಿನಗಳ ಕಾಲ ತಮಿಳುನಾಡು, ಕೇರಳದಲ್ಲಿ ಮಳೆಯಾಗಲಿದೆ. ತಮಿಳುನಾಡಿನಲ್ಲಿ ಬುಧವಾರದಿಂದ ಆಗಸ್ಟ್ 14ರವರೆಗೂ ಮಳೆಯಾದರೆ ಕೇರಳದಲ್ಲಿ ಬುಧವಾರ ಹಾಗೂ ಗುರುವಾರ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ. ಹಿಮಾಲಯಕ್ಕೆ ಮುಂಗಾರು ಅಡಿಯಿಟ್ಟಿರುವುದರಿಂದ ದೆಹಲಿಯಲ್ಲಿ ಮಳೆ ತಗ್ಗಿದ್ದು, ಇನ್ನೂ ಒಂದು ವಾರ ಅಲ್ಲಿ ಮಳೆಯಾಗುವುದಿಲ್ಲ ಎಂದು ತಿಳಿಸಿದೆ.

Recommended Video

    ಚೀನಾ ಜಲಪ್ರಳಯ : ಕೊರೋನಾ ಸೃಷ್ಟಿಸಿದ ಪಾಪಕ್ಕೆ ಇದು ದೇವರು ಕೊಟ್ಟ ಶಿಕ್ಷೆನಾ? | Oneindia Kannada
     ಕರ್ನಾಟಕದಲ್ಲಿ ಮತ್ತೆ ಚುರುಕು ಪಡೆಯಲಿದೆ ಮುಂಗಾರು

    ಕರ್ನಾಟಕದಲ್ಲಿ ಮತ್ತೆ ಚುರುಕು ಪಡೆಯಲಿದೆ ಮುಂಗಾರು

    ಕರ್ನಾಟಕದಲ್ಲಿ ಆಗಸ್ಟ್‌ 15ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಮತ್ತೆ ಚುರುಕಾಗಲಿದೆ. ಆಗಸ್ಟ್‌ 15ರವರೆಗೂ ಮಳೆ ಮುಂದುವರೆಯಲಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಕೆಲವೆಡೆ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಆಗ್ನೇಯ ಅರಬ್ಬಿ ಸಮುದ್ರ, ಕೇರಳ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ. ತಲುಪುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+