IMD Weather Forecast: ಈ ಭಾಗಗಳಲ್ಲಿ ಮುಂದಿನ 1 ವಾರ ಸಾಧಾರಣದಿಂದ ಭಾರೀ ಮಳೆ, ಪ್ರವಾಹ
IMD Weather Forecast: ದೇಶದಲ್ಲಿ ಕೇರಳ ರಾಜ್ಯದ ಪ್ರವೇಶದ ಮೂಲಕ ಆರಂಭವಾಗಿದ್ದ ಮುಂಗಾರು ಮಳೆ ಅಬ್ಬರವು ಉತ್ತರ ಭಾರತದ ರಾಜ್ಯಗಳಲ್ಲಿ ಮುಂದುವರಿದಿದೆ. ಮುಂದಿನ ಒಂದು ವಾರದ ಕಾಲ ಈಶಾನ್ಯ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ, ಕೆಲವೆಡೆ ಅತ್ಯಧಿಕ ಮಳೆ ಸುರಿಯಲಿದೆ. ನಂತರ ಮುಂಗಾರು ಮಳೆ ಕೊಂಚ ವಿರಾಮ ನೀಡುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಇಂದಿನಿಂದ (ಜೂನ್ 3)ದೇಶದ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂದಿನ ಏಳು ದಿನಗಳ ಪೈಕಿ ಈಶಾನ್ಯ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕೆಲವೆಡೆ ಹಗುರ ಸಾಧಾರಣ ಮಳೆಯಾದರೆ, ಮತ್ತೆ ಕೆಲವೆಡೆ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಜೂನ್ 4 ಮತ್ತು 5 ರಂದು ಪ್ರತ್ಯೇಕಕ ಕಡೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಂಗಳವಾರದ ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.

ಹಿಮಾಲಯ ಪ್ರದೇಶಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯದಲ್ಲಿ ಸಾಧಾರಣದಿಂದ ಭಾರೀ ಮಳೆಯ ಲಕ್ಷಣಗಳು ಇವೆ. ಈ ಪ್ರದೇಶದಲ್ಲಿ ಪ್ರತ್ಯೇಕ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಈ ಮೂರು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮಣಿಪುರ, ಮೇಘಾಲಯ, ಅಸ್ಸಾ, ಅರುಣಾಚಲಯ ಪ್ರದೇಶ ಸೇರಿದಂತೆ ಈ ಭಾಗದಲ್ಲಿ ವ್ಯಾಪಕ ಮಳೆ ಆಗಿತ್ತು. ಪ್ರವಾಹ ಸ್ಥಿತಿ ಉಂಟಾಗಿದ್ದು, ಜನರು ಯಾವಾಗ ಜೀವನ ಸಹಜ ಸ್ಥಿತಿಯತ್ತ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ, 36 ಜನ ಸಾವು
ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇಲ್ಲಿ ಅಸ್ಸಾಂ, ಮೇಘಾಲಯ, ಮಣಿಪುರ ಹಾಗೂ ತ್ರಿಪುರ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗುಡ್ಡಗಳು ಕುಸಿದಿವೆ. ನದಿಗಳು ಪ್ರವಾಹದಂತ ಉಕ್ಕಿ ಹಿರದಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಮೂಲಗಳ ಪ್ರಕಾರ, ಮುಂಗಾರು ಆರಂಭದ ಬಳಿಕ ಈವರೆಗೆ 36 ಜನ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.

ಬ್ರಹ್ಮಪುತ್ರ ನದಿಯ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಅಸ್ಸಾ ಹಾಗೂ ಮಣಿಪುರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕೇಂದ್ರ ವಿಪತ್ತು ನಿರ್ವಹಣಾ ತಂಡ, ಭಾರತೀಯ ಸೇನೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ ಸೇರಿ ಜಲಾವೃತ ಪ್ರದೇಶಗಳ ನೂರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಅವರು ಪ್ರವಾಹ ಸಮಸ್ಯೆಗಳಿಗೆ ಎಲ್ಲ ರೀತಿಯ ಪರಿಹಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಇನ್ನೂ ಮುಂದಿನ ಮೂರು ದಿನಗಳಲ್ಲಿ ಕಣವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ ಹಾಗೂ ದೆಹಲಿ ರಾಜ್ಯದಲ್ಲಿ ಬಿರುಗಾಳಿ ಸಹಿತ ರಣ ಮಳೆ ಸುರಿಯಲಿದೆ. ಈ ರಾಜ್ಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಗಾಳಿಯ ವೇಗ ಪ್ರತಿ ಗಂಟೆಗೆ 50 ಕಿ.ಮೀ ವೇಗದಲ್ಲಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿಯ ವೇಗ ಪ್ರತಿ ಗಂಟೆಗೆ 70 ಕಿಮೀ ಸಹಿತ ಮಳೆ
ಇಂದು ಮಂಗಳವಾರ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಒಂದೆರಡು ಕಡೆಗಳಲ್ಲಿ ಪ್ರತಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಈಶಾನ್ಯ ರಾಜ್ಯಗಳ ವಿವಿಧೆಡೆ ಜೂನ್ 5 ರವರೆಗೆ ಭಾರೀ ಮಳೆ ಆಗಲಿದೆ. ನಂತರ ಕೊಂಚ ಮಳೆ ಇಳಿಕೆ ಆಗುವ ಸಂಭವವಿದೆ. ದೇಶದ ಈ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ 3-5 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಿದೆ.
ಕರ್ನಾಟಕ, ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲೂ ಕೂಡ ಮಳೆ ಕಡಿಮೆ ಆಗಿದೆ. ಅಲ್ಲಲ್ಲಿ ಉತ್ತಮ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ಜೂನ್ 4 ರವರೆಗೆ ಈ ಭಾಗದ ಕೆಲವು ಕಡೆಗಳಲ್ಲಿ ಹಗುರ ಮಳೆ ಆಗುವ ನಿರೀಕ್ಷೆಗಳು ಇವೆ. ಸದ್ಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವೈಪರೀತ್ಯದ ಪ್ರಭಾವ ತಗ್ಗಿದೆ..












Click it and Unblock the Notifications