India Weather: ಚಂಡಮಾರುತ ವೈಪರೀತ್ಯ! ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ...Rain Alert

Heavy Rain Alert: ಮುಂಗಾರು ಮಳೆ ಕಳೆದೊಂದು ತಿಂಗಳಿನಿಂದ ಚುರುಕಾಗಿದೆ. ನಿತ್ಯ ಅನೇಕ ಜಿಲ್ಲೆಗಳು, ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಮಾತ್ರವಲ್ಲದೆ, ಭೂಮಿ ಮೇಲ್ಮೈನಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ (Cyclone Circulation) ಸಹ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇಂದು ಯಾವೆಲ್ಲ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ (School Holidays) ನೀಡಲಾಗಿತ್ತೊ ಅದೇ ಭಾಗಗಳಲ್ಲಿ ಮಳೆ ಬರುವ ರಜೆ ಮುಂದುವರಿಯುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ (IMD Weather Forecast) ನೀಡಿದ ರಾಜ್ಯವಾರು ಭಾರೀ ಮಳೆ (Rain Alert) ಮುನ್ಸೂಚನೆ ಇಲ್ಲಿದೆ.

ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಸುರಿಯುತ್ತಿರುವ ಭಾರೀ ಮಳೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಅನೇಕ ಭಾಗಗಳಿಗೂ ವಿಸ್ತರಣೆ ಆಗಿದೆ. ಮುಖ್ಯವಾಗಿ ಕರಾವಳಿ ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ಇದಕ್ಕೆ ಜಾರ್ಖಂಡ್ ಮತ್ತು ನೆರೆಹೊರೆಗಳಲ್ಲಿನ ಉಂಟಾದ ವಾಯುಭಾರ ಕುಸಿತ ಪ್ರಮುಖ ಕಾರಣವಾಗಿದೆ. ಈ ವೈಪರೀತ್ಯವು ಗಂಟೆಗೆಲ್ಲಿ 28 ಕಿ.ಮೀ ವೇಗದಲ್ಲಿ ಪಶ್ಚಿಮ ದಿಕ್ಕಿನತ್ತ ಸಾಗುತ್ತಿದೆ. ನಾಳೆ ಹೊತ್ತಿಗೆ ಉತ್ತರ ಛತ್ತೀಸ್‌ಗಢ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ, ಲ್ಯಾಟ್ ಪ್ರದೇಶದಿಂದ (23.3°N) ಸುಮಾರು 80 ಕಿ.ಮೀ. ದಕ್ಷಿಣಕ್ಕೆ ಹಾಗೂ ಛತ್ತೀಸ್‌ಗಢದಿಂದ 80 ಕಿ.ಮೀ ಪೂರ್ವಕ್ಕೆ ಕೇಂದ್ರೀಕೃತವಾಗಿದೆ.

IMD Prediction Heavy Rain Alert in These States due Cyclonic Circulation Schools may get Holiday

ವಾಯುಭಾರ ಕುಸಿತ ದುರ್ಬಲ ಯಾವಾಗ?

ಮುಂದಿನ 48 ಗಂಟೆಗಳಲ್ಲಿ ಉತ್ತರ ಛತ್ತೀಸ್‌ಗಢ ಮತ್ತು ಪೂರ್ವ ಮಧ್ಯ ಪ್ರದೇಶದಾದ್ಯಂತ ಪಶ್ಚಿಮಕ್ಕೆ ಚಲಿಸುವ ಸಾಧ್ಯತೆ ಇದೆ. ಜುಲೈ 28 ಈ ಚಂಡಮಾರುತ ಪ್ರಸರಣ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ಸಮುದ್ರ ಮೇಲ್ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದೆಲ್ಲ ಪ್ರಭಾವದಿಂದ ಅನೇಕ ರಾಜ್ಯಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ನಿರೀಕ್ಷೆ ಇದೆ.

ಇನ್ನೂ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತದ ಪ್ರಭಾವ ಹೆಚ್ಚಾಗಿದೆ. ಈ ಬಿರುಗಾಳಿ ಜಾರ್ಖಂಡ್, ಪುರುಲಿಯಾ ಮೂಲಕ ಹಾದುಹೋಗಿ ಆಗ್ನೇಯಕ್ಕೆ ಪೂರ್ವ ಮಧ್ಯ ಬಂಗಾಳ ಕೊಲ್ಲಿ ಸೇರುತ್ತದೆ. ಇನ್ನೊಂದು ಸ್ಟ್ರಫ್ ಗುಜರಾತ್-ಉತ್ತರ ಕೇರಳ ಕರಾವಳಿಯಲ್ಲಿದೆ. ಇವುಗಳು ಮುಂದಿನ ದಿನಗಳಲ್ಲಿ ತೀವ್ರಗೊಳ್ಳಬಹುದೆಂದು ಊಹಿಸಲಾಗಿದೆ.

ಮೂರು ದಿನ ಬಾರೀ ಮಳೆ ನಿರೀಕ್ಷೆ

ಜುಲೈ 29ರವರೆಗೆ ಮಧ್ಯ ಪ್ರದೇಶ, ಗುಜರಾತ್, ಛತ್ತಿಸ್‌ಗಢ, ಬಿಹಾರ್, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಹರಿಯಾಣ, ಸಿಕ್ಕಿಂ, ಮಣಿಪುರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ. ಉಳಿದ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೆಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ರಾಜ್ಯಗಳ ಕೆಲವು ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ನೀಡಲಾಗಿತ್ತು.

ಭಾರೀ ಮಳೆಗೆ ಶಾಲೆಗಳು ರಜೆ

ಇನ್ನು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಕರಾವಳಿ ಭಾಗಿ, ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಕೇರಳ ಹಾಗೂ ತಮಿಳುನಾಡು ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಸಲಿದೆ. ಮುಂದಿನ ಮೂರು ದಿನ ಸಹ ಇದೇ ಭಾಗಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಇಂದು ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಒಂದು ವೇಳೆ ಮಳೆ ಜೋರಾದರೆ ಸೋಮವಾರ ಜುಲೈ 28ರಂದು ರಜೆ ಘೋಷಣೆ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+