Monsoon Rain Alert: ಜೂನ್-ಸೆಪ್ಟಂಬರ್ ಅವಧಿಯಲ್ಲಿ ಈ ಭಾಗಗಳಲ್ಲಿ ಅಧಿಕ ಮಳೆ: IMD
ಬೆಂಗಳೂರು, ಮೇ 28: ಈ ವರ್ಷ ಪೂರ್ವ ಮುಂಗಾರು ಮಳೆ ಅಂತ್ಯಕ್ಕೂ ಮೊದಲೇ ಭಾರತ ಪ್ರವೇಶಿಸಿ ಮುಂಗಾರು ಮಳೆ (Monsoon 2025) ಜೂನ್‌ನಿಂದ ಸೆಪ್ಟಂಬರ್‌ವರೆಗೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ. ಏಪ್ರಿಲ್ ತಿಂಗಳಲ್ಲಿ ಊಹಿಸಿದ್ದ ಮಳೆಗಿಂತಲೂ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ನೀಡಿದೆ. ಈ ವಿಚಾರವು ದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಜೂನ್ ನಿಂದ ಸೆಪ್ಟೆಂಬರ್ ವರೆಗಿನ 4 ತಿಂಗಳ ಅವಧಿಯಲ್ಲಿ 'ಸಾಮಾನ್ಯಕ್ಕಿಂತ ಹೆಚ್ಚಿನ' ಮಳೆ ಆಗುತ್ತದೆ ಎಂದು ಏಪ್ರಿಲ್ ತಿಂಗಳಲ್ಲಿ ಹೇಳಲಾಗಿತ್ತು. ಅದರ ಪ್ರಕಾರ, ಈ ಮುಂಗಾರು ಋತುವಿನಲ್ಲಿ ದೇಶದಲ್ಲಿ ಒಟ್ಟು ಸುಮಾರು 91 ಸೆಂ.ಮೀ. ಮಳೆ (ದೀರ್ಘಾವಧಿಯ ಸರಾಸರಿಯ 105ರಷ್ಟು) ದಾಖಲಾಗಬಹುದೆಂದು ತಿಳಿಸಲಾಗಿತ್ತು. ಇದೀಗ ವಾಡಿಕೆಗಿಂತ 92.3 ಸೆಂ.ಮೀ. (ಸರಾಸರಿಯ 106 ರಷ್ಟು) ಮಳೆ ನಿರೀಕ್ಷೆ ಇದೆ. ಇದು ಮೊದಲು ಹೇಳಿದ್ದಕ್ಕಿಂತ ಕೊಂಚ ಹೆಚ್ಚಿನ ಮಳೆ ಪ್ರಮಾಣವಾಗಿದೆ. ಈ ಕುರಿತು ಮಂಗಳವಾರ ಐಎಂಡಿ ಮಹಾನಿರ್ದೇಶಕ ಎಂ. ಮೊಹಾಪಾತ್ರ ಅವರು ಪರಿಷ್ಕೃತ ಮುನ್ಸೂಚನೆ ನೀಡಿದ್ದಾರೆ.

ದೇಶದ ಈ ಭಾಗದಲ್ಲಿ ಅಧಿಕ ಮಳೆ
ಭಾರತದ ಮಟ್ಟಿಗೆ ಹೆಚ್ಚಿನ ಮಳೆ ಬೀಳುವ ಪ್ರದೇಶಗಳನ್ನು ನೋಡುವುದಾದರೆ, ಈಶಾನ್ಯ ಮತ್ತು ವಾಯುವ್ಯ ರಾಜ್ಯಗಳ ಪ್ರದೇಶಗಳನ್ನು ಬಿಟ್ಟು ದೇಶದ ಹೆಚ್ಚಿನ ಪ್ರದೇಶಗಳಲ್ಲಿ 'ಸಾಮಾನ್ಯಕ್ಕಿಂತ ಹೆಚ್ಚಿನ' ಮಳೆ ಆಗಲಿದೆ. ಈ ಬಾರಿ ಎಲ್ಲೆಡೆ ಉತ್ತಮ ಮಳೆ ಆಗಲಿದೆ. ಮುಂದಿನ ಜೂನ್ ತಿಂಗಳಲ್ಲಿ ಮಾತ್ರ ಭಾರತವು ಸರಾಸರಿ 16.7 ಸೆಂ.ಮೀ.ಗಿಂತಲೂ ಶೇಕಡಾ 8ರಷ್ಟು ಅಧಿಕ ಮಳೆಗೆ ಸಾಕ್ಷಿಯಾಗುವ ಸಂಭವವಿದೆ.
ಪ್ರತಿ ವರ್ಷ ಜೂನ್ 1 ರಂದು ಇಲ್ಲವೇ ಮೊದಲ ವಾರ ನೈಋತ್ಯ ಮುಂಗಾರು ಮಳೆ ಆರಂಭವಾಗಬೇಕು. ಆದರೆ ಈ ಭಾರಿ ಬರೋಬ್ಬರಿ ಎಂದು ದಿನಗಳಿಗೂ ಮೊದಲೇ ಅಂದರೆ 24 ರಂದು ಕೇರಳ ಪ್ರವೇಶಿತು. 16 ವರ್ಷಗಳ ನಂತರ (2009ರ ಬಳಿಕ) ಮುಂಗಾರು ಮಳೆ ಸುರಿಸುವ ಮಾರುತುಗಳು ಇಷ್ಟು ಬೇಗ ಆಗಮಿಸಿದೆ. ಕೇಲವ ನಾಲ್ಕೇ ದಿನದಲ್ಲಿ ಮುಂಬೈವರೆಗೂ ಮುಂಗಾರು ವಿಸ್ತರಣೆ ಆಗಿದೆ. ಈ ಮೂಲಕ 2025ರ ಮುಂಗಾರು ಮಳೆ 35 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದೆ. ಇದಕ್ಕೆ ಪ್ರತಿಯಾಗಿ ಸಮುದ್ರ ಮೇಲ್ಭಾಗದಲ್ಲಿ ಪೂರಕೆ ವಾತಾವರಣ ನಿರ್ಮಾಣವಾಗಿದೆ. ವೈಪರೀತ್ಯಗಳು ಸಂಭವಿಸಿವೆ. ಕರ್ನಾಟಕ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದ ವಿವಿಧೆಡೆ ಸಾಧಾರಣದಿಂದ ಭಾರೀ ಮಳೆ ಸುರಿಯುತ್ತಿದೆ.
ಜೂನ್‌ನಲ್ಲಿ ಮುಂಗಾರು ಮಳೆ ವಿರಾಮ
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಇದು ಉತ್ತಮ ಮಾನ್ಸೂನ್ ಆರಂಭಕ್ಕೆ ಸಹಾಯ ಮಾಡಿತಲ್ಲದೇ, ಮುಂದಿನ 3-4 ದಿನಗಳ ನಂತರ ಮುಂಗಾರಿನ ಅಬ್ಬರದಲ್ಲಿ ಇಳಿಕೆ ಆಗುವ ಸಾಧ್ಯತೆಯು ಇದೆ. ಇಲ್ಲವೇ ಜೂನ್ ಆರಂಭದಲ್ಲಿ ಮುಂಗಾರು ಕೊಂಚ ವಿರಾಮ ನೀಡಲೂಬಹುದು. ಆಗ ಒಣಹವೆಯ ವಾತಾವರಣ ಕಂಡು ಬರುವ ಸಾಧ್ಯತೆ ಇದೆ.
ಪೆಸಿಫಿಕ್ ಮಹಾಸಾಗರದ ತಾಪಮಾನ ಏರಿಕೆಗೆ ಸಂಬಂಧಿಸಿದ ಎಲ್ ನಿನೊ ಈ ಭಾರಿ ಸಾಮಾನ್ಯವಾಗಿದೆ. ಎಲ್‌ನಿನೋ ಪ್ರಭಾವ ಇದ್ದಾಗಲೆಲ್ಲ ಅಂದಿನ ವರ್ಷಗಳ ನೈಋತ್ಯ ಮಾನ್ಸೂನ್‌ನಲ್ಲಿ ಶೇಕಡಾ 60ರಷ್ಟು ದುರ್ಬಲವಾಗಿತ್ತು. ಇನ್ನೂ 2024ರಲ್ಲಿ ಭಾರತದಲ್ಲಿ ಜೂನ್- ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಶೇಕಡಾ 8ರಷ್ಟು ಅಧಿಕ ಮಳೆ ದಾಖಲಾಗಿದೆ.
ಸದ್ಯದ ಮುಂಗಾರು ಮಳೆಯು ಈ ಭಾರಿ ಭಾರತದಲ್ಲಿ ಖಾರೀಫ್ ಬೆಳೆಗೆ ಉತ್ತಮ ನೀರನ್ನು ನೀಡುತ್ತದೆ. ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಕರ್ನಾಟ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲಿ ಉತ್ತಮ ಮಳೆ ನಿರೀನ ಸಂಗ್ರಹಣೆ, ಜಲಾಶಗಳನ್ನು ಭರ್ತಿಗೊಳಿಸುತ್ತದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದೊಂದಿಗೆ ಬಿರುಗಾಳಿ ಮಳೆಗೆ ಹಾನಿ, ಪ್ರವಾಹ ದಂತಹ ವಿನಾಶ, ಜೀವ ಹಾನಿಗಳು ಸಂಭವಿಸಬಹುದು.












Click it and Unblock the Notifications