ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 26ರವರೆಗೂ ಮಳೆ ನಿಲ್ಲಲ್ಲ; ದೇಶವ್ಯಾಪಿ ಮಳೆ ಮುನ್ಸೂಚನೆ ಕೊಟ್ಟ IMD

By ಒನ್ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಜುಲೈ 24: ದೇಶದ ಎಲ್ಲಾ ಭಾಗಗಳನ್ನು ನೈಋತ್ಯ ಮುಂಗಾರು ಆವರಿಸಿದ್ದು, ಹಲವು ರಾಜ್ಯಗಳು ಭಾರೀ ಮಳೆಗೆ ಸಾಕ್ಷಿಯಾಗುತ್ತಿವೆ. ಇದರೊಂದಿಗೆ ದೇಶದ ಹಲವು ಭಾಗಗಳಲ್ಲಿ ಜುಲೈ 23ರಿಂದ ಜುಲೈ 26ರವರೆಗೂ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಹಾರಾಷ್ಟ್ರ, ತೆಲಂಗಾಣ, ಗೋವಾ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಅಧಿಕ ಮಳೆ ಸುರಿಯುತ್ತಿದ್ದು, ಈ ಬೆನ್ನಲ್ಲೇ ಹವಾಮಾನ ಇಲಾಖೆ ರಾಷ್ಟ್ರವ್ಯಾಪಿ ಮಳೆ ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಮುಂದೆ ಓದಿ...

ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚಿನ ಮಳೆ

ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚಿನ ಮಳೆ

ಪಶ್ಚಿಮ ಕರಾವಳಿ, ಪೂರ್ವ, ದಕ್ಷಿಣ, ಉತ್ತರ ಹಾಗೂ ಉತ್ತರ ರಾಜ್ಯಗಳಲ್ಲಿನ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ನೀಡಿದೆ. ಮುಂದಿನ 2-3 ದಿನಗಳ ಕಾಲ ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಲಿದೆ. ಆನಂತರ ಮಳೆ ತಗ್ಗಲಿದೆ ಎಂದು ತಿಳಿಸಿದೆ.

ಕೊಂಕಣ, ಗೋವಾ, ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ

ಕೊಂಕಣ, ಗೋವಾ, ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ

ಕೊಂಕಣ, ಗೋವಾ ಹಾಗೂ ಅದಕ್ಕೆ ಹೊಂದಿಕೊಂಡ ಮಧ್ಯ ಮಹಾರಾಷ್ಟ್ರದ ಘಾಟಿ ಪ್ರದೇಶಗಳಲ್ಲಿ 24ರಂದು ಭಾರೀ ಮಳೆ ಸೂಚನೆ ನೀಡಿದೆ. ಜುಲೈ 24 ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಹೆಚ್ಚಿನ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎರಡು ದಿನಗಳಲ್ಲಿ ಮಳೆಯಿಂದಾಗಿ ರಾಜ್ಯದಲ್ಲಿ 129 ಮಂದಿ ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಜನರ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಹೆಚ್ಚು: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಹೆಚ್ಚು: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

ಮಧ್ಯ ಪ್ರದೇಶ, ಒಡಿಶಾ ತೆಲಂಗಾಣದಲ್ಲಿ ಇನ್ನೆರಡು ದಿನ ಮಳೆ

ಮಧ್ಯ ಪ್ರದೇಶ, ಒಡಿಶಾ ತೆಲಂಗಾಣದಲ್ಲಿ ಇನ್ನೆರಡು ದಿನ ಮಳೆ

ಜುಲೈ 24ರಂದು ಗುಜರಾತ್‌ನಲ್ಲಿ ಹೆಚ್ಚಿನ ಮಳೆಯಾಗಲಿದೆ. ಜುಲೈ 24ರಿಂದ 26ರವರೆಗೂ ಅಧಿಕ ಮಟ್ಟದಲ್ಲಿ ಮಳೆಯಾಗಲಿದೆ. ಜುಲೈ 25ರಂದು ವ್ಯಾಪಕ ಮಳೆ ಬೀಳಲಿದೆ ಎಂದು ಅಂದಾಜಿಸಿದೆ. ದೇಶದ ಪೂರ್ವ ಹಾಗೂ ಮಧ್ಯ ಭಾಗಗಳಲ್ಲಿ ಜುಲೈ 25ರವರೆಗೂ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಮಧ್ಯ ಪ್ರದೇಶ, ಒಡಿಶಾ ತೆಲಂಗಾಣದಲ್ಲಿ ಇನ್ನೆರಡು ದಿನ ಮಳೆ ಮುಂದುವರೆಯುವುದಾಗಿ ಹೇಳಿದೆ.

ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ಮಳೆ

ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ಮಳೆ

ವಾಯವ್ಯ ಭಾರತ ಹಿಮಾಲಯ ಪ್ರದೇಶಗಳಲ್ಲಿ ಜುಲೈ 25ರ ನಂತರ ಮಳೆ ಮತ್ತೆ ಚುರುಕುಗೊಳ್ಳಲಿದೆ. ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಜುಲೈ 26ರವರೆಗೂ ಮಳೆಯಾಗಲಿದ್ದು, ದೆಹಲಿಯಲ್ಲಿಯೂ ಇನ್ನೆರಡು ದಿನ ಮಳೆ ಮುಂದುವರೆಯುವುದಾಗಿ ತಿಳಿಸಿದೆ.

English summary
IMD issues rainfall alert for most parts of the country between July 23 and 26
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X