India Weather: ಈ ರಾಜ್ಯಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಬೆಂಗಳೂರು, ಜೂನ್ 05: ದೇಶದಲ್ಲಿ ಮಾನ್ಸೂನ್ ಮಾರುತಗಳು ಫುಲ್ ಆಕ್ಟಿವ್ ಆಗಿದ್ದು, ಮತ್ತಷ್ಟು ಪ್ರದೇಶಗಳಲ್ಲಿ ಮಳೆ ವಿಸ್ತರಣೆಗೊಳ್ಳುತ್ತಿದೆ. ಭಾರತೀಯ ಹವಾಮಾನ ಇಲಾಖೆ ಕೆಲವು ರಾಜ್ಯಗಳಿಗೆ ಭಾರೀ ಮಳೆಯ ನಡುವೆ ಒಂದಷ್ಟು ರಾಜ್ಯಗಳಿಗೆ ಹೀಟ್ ವೇವ್ ಸಹ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ (IMD) ಪ್ರಕಾರ, ಕರ್ನಾಟಕ ಉತ್ತರ ಭಾಗ, ಮಹಾರಾಷ್ಟ್ರ ದಕ್ಷಿಣ ಭಾಗ, ತೆಲಂಗಾಣ ಮತ್ತು ಕರಾವಳಿ ಆಂಧ್ರಪ್ರದೇಶದ ಹೆಚ್ಚಿನ ಪ್ರದೇಶಗಳಲ್ಲಿ ಹಾಗೂ ಛತ್ತೀಸ್‌ಗಢ, ಒಡಿಶಾದ ದಕ್ಷಿಣ ಭಾಗದ ಕಡೆಗೆ ಮುಂಗಾರು ಮಳೆ ಅಬ್ಬರಿಸಲು ಸಜ್ಜಾಗಿದೆ. ಮುಂದಿನ ಒಂದು ವಾರ ಈ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿ ಭಾಗದಿಂದ ನೈಋತ್ಯ ಮಾನ್ಸೂನ್ ಮಾರುತಗಳು ಅರುಣಾಚಲ ಪ್ರದೇಶ, ಮಣಿಪುರ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಗುಡುಗು ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆ ಆಗಲಿದೆ. ಇಲ್ಲಿ ಗಾಳಿಯು 30-40 kmph ವೇಗದಲ್ಲಿ ಬೀಸಲಿದೆ.
ಜೂನ್ 10ರವರೆಗೆ ಈ ರಾಜ್ಯಗಳಲ್ಲಿ ಭಾರಿ ಮಳೆ
ಇದೇ ಅವಧಿಯಲ್ಲಿ ಜೂನ್ 7 ಮತ್ತು 9 ರ ಅವಧಿಯಲ್ಲಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ದಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಮಿಜೋರಾಂ, ತ್ರಿಪುರಾ, ಉಪ-ಹಿಮಾಲಯ ಕೆಲವು ಭಾಗಗಳಲ್ಲಿ ಮತ್ತು ಸಿಕ್ಕಿಂ ನಲ್ಲಿ ಅಧಿಕ ಮಳೆ ನಿರೀಕ್ಷಿಬಹುದಾಗಿದೆ.

ಮುಂದಿನ ಜೂನ್ 10ರವರೆಗೆ ದೇಶದ ಕೇರಳ, ಮಾಹೆ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಬಿರುಗಾಳಿ ಸಹಿ ಮಳೆ ಆಗಲಿದೆ. ತಮಿಳುನಾಡು, ಆಂಧ್ರಪ್ರದೇಶದ ಕರಾವಳಿ ಭಾಗ, ತೆಲಂಗಾಣ ಮತ್ತು ರಾಯಲಸೀಮಾ ಹಾಗೂ ಪುದುಚೇರಿಗಳಲ್ಲಿ ಸಹ ಅತ್ಯಧಿಕ ಮಳೆಯ ಸಂಭವವಿದೆ.
ಭಾರತದ ಪಶ್ಚಿಮ ಹಾಗೂ ಮಧ್ಯ ಭಾರತದ ಕೆಲವು ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೊಂಕಣ ಹಾಗೂ ಇನ್ನಿತರ ಕಡೆಗಳಲ್ಲಿ ಜೂನ್ 6 ರಿಂದ 9 ರವರೆಗೆ ಮಬ್ಬು ವಾತಾವರಣ ಕಂಡು ಬರಲಿದ್ದು, ಮಳೆ ಆರ್ಭಟ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದ ಕಡೆಗಿಂತ ವಾಯುವ್ಯ ಭಾರತದ ಮೇಲೆ ತಂಪು ಗಾಳಿ ಬೀಸುವ ಜೊತೆಗೆ ನೈಋತ್ಯ ಮಾರುತಗಳನ್ನು ತನ್ನತ್ತ ಸೆಳೆಯಲಿದೆ. ಹೀಗಾಗಿ ದೇಶ ಗಡಿ ಭಾಗವಾದ ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಲಘೂ ಮಳೆ ಆಗಲಿದೆ.
ಶಾಖದ ಅಲೆ ಎಚ್ಚರಿಕೆ
ಈ ಹಿಂದಿನಷ್ಟು ಶಾಖಲೆ ಅಲೆ ಸದ್ಯಕ್ಕೆ ಇಲ್ಲ. ತಕ್ಕಮಟ್ಟಿಗೆ ಬಿಸಿಗಾಳಿ ವಾತಾವರಣ ಕಡಿಮೆ ಆಗುತ್ತಿದೆ. ಮಧ್ಯಪ್ರದೇಶ ಪೂರ್ವ, ಜಾರ್ಖಂಡ್ ಹಾಗೂ ಬಿಹಾರದ ಪ್ರತ್ಯೇಕ ಸ್ಥಳಗಳಲ್ಲಿ ಜೂನ್ 9 ರವರೆಗೆ ಶಾಖದ ವಾತಾವರಣ ಸೃಷ್ಟಿಯಾಗಲಿದೆ.
ಇನ್ನೂ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನಗ ರಾಜ್ಯದಲ್ಲಿ ಮುಂದಿನ ನಾಲ್ಕರಿಂದ ಐದು ದಿನ ಬಿಸಿಯ ವಾತಾವರಣ ಕಂಡು ಬರಲಿದೆ. ಒಡಿಶಾದ ಕೆಲವು ಭಾಗಗಳಲ್ಲಿ ತೀವ್ರದ ಶಾಖದ ಅಲೆ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.












Click it and Unblock the Notifications