ತಂಬಾಕು ಬಿಟ್ರೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತೆ!

smoking
ಜೈಪುರ, ನ.9 : ನಿಮಗೆ ಸರ್ಕಾರಿ ಉದ್ಯೋಗ ಬೇಕಿದ್ದರೆ ನೀವು ತಂಬಾಕು ಸೇವನೆಯನ್ನು ಬಿಡಬೇಕು ಎಂಬ ಮಹತ್ವದ ಕಾಯ್ದೆಯನ್ನು ರಾಜಸ್ಥಾನ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ತಂಬಾಕು ಬಳಕೆಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಅ.4ರಂದು ಸುತ್ತೋಲೆ ಹೊರಡಿಸಿರುವ ರಾಜಸ್ಥಾನ ಸರ್ಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವ ವೇಳೆ, ನಾನು ಸರ್ಕಾರಿ ನೌಕರನಾಗಿರುವ ಅವಧಿಯಲ್ಲಿ ಸಿಗರೇಟ್‌ ಅಥವಾ ಗುಟ್ಕಾ ಬಳಕೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವುದನ್ನು ಕಡ್ಡಾಯಗೊಳಿಸಿದೆ.

ರಾಜ್ಯದಲ್ಲಿ ತಂಬಾಕು ನಿಯಂತ್ರಣ ಮಾಡುವ ಕುರಿತು ಸಮನ್ವಯ ಸಮಿತಿಯೊಂದು ಇಂತಹ ಮಹತ್ವದ ಪ್ರಸ್ತಾವನೆಯನ್ನು ರಾಜಸ್ಥಾನ ಸರ್ಕಾರಕ್ಕೆ 2012ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಆ ಸಲಹೆಯನ್ನು ಅಂಗೀಕರಿಸಿರುವ ಸರ್ಕಾರ, ತಂಬಾಕು ಬಳಸುವವರಿಗೆ ಸರ್ಕಾರಿ ನೌಕರಿ ನೀಡದಿರುವ ನಿರ್ಧಾರ ಕೈಗೊಂಡಿದೆ.

ತಂಬಾಕು ಸೇವನೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು, ನೌಕರಿ ಪಡೆದ ಮೇಲೆ ತಂಬಾಕು ಸೇವನೆ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲು ಶೀಘ್ರವೇ ಸಭೆಯೊಂದನ್ನು ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದ್ದರಿಂದ ನೌಕರರು ಯಾವುದೇ ಕಾರಣಕ್ಕೂ ಕಾಯ್ದೆಯಿಂದ ಪಾರಾಗುವಂತಿಲ್ಲ.

ತಂಬಾಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೊಂದು ಇಂತಹ ಮಹತ್ವದ ಮತ್ತು ಕಠಿಣವಾದ ನಿರ್ಧಾರ ಕೈಗೊಂಡಿರುವುದು ವಿಶ್ವದಲ್ಲೇ ಪ್ರಥಮ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ರಾಜಸ್ಥಾನಲ್ಲಿ ಈ ವಿಚಾರದ ಕುರಿತು ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+