Get Updates
Get notified of breaking news, exclusive insights, and must-see stories!

ಕುಡಿದರೆ ನೀವೂ ಸಾಯುತ್ತೀರಿ: ನಕಲಿ ಮದ್ಯ ದುರಂತದ ಕುರಿತು ನಿತೀಶ್‌ ಕುಮಾರ್‌ ಹೇಳಿಕೆ

ಪಾಟ್ನಾ, ಡಿಸೆಂಬರ್‌ 15: ಬಿಹಾರದಲ್ಲಿ ನಕಲಿ ಮದ್ಯ ಕುಡಿದ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ತಲುಪಿದೆ. ನಕಲಿ ಮದ್ಯ ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ನಿರಾಕರಿಸಿದ್ದಾರೆ.

2016ರಿಂದ ರಾಜ್ಯದಲ್ಲಿ ಮದ್ಯ ನಿಷೇಧವಿದೆ. ಹೀಗಿರುವಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೆಡಿಯು-ಆರ್‌ಜೆಡಿ ಸರ್ಕಾರವು ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಇದರಲ್ಲಿ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

 ಮದ್ಯ ಕುಡಿದವರು ನಿಸ್ಸಂಶಯವಾಗಿ ಸಾಯುತ್ತಾರೆ

ಮದ್ಯ ಕುಡಿದವರು ನಿಸ್ಸಂಶಯವಾಗಿ ಸಾಯುತ್ತಾರೆ

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿತೀಶ್‌ ಕುಮಾರ್, 'ಮದ್ಯ ಕುಡಿದವರು ನಿಸ್ಸಂಶಯವಾಗಿ ಸಾಯುತ್ತಾರೆ. ಉದಾಹರಣೆ ನಿಮ್ಮ ಕಣ್ಣ ಮುಂದಿದೆ' ಎಂದು ಹೇಳಿದ್ದಾರೆ.

ದುರಂತದ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟಿಸಿತು. ಈ ವೇಳೆ, ನಿತೀಶ್‌ ಕುಮಾರ್‌ ಸಂಯಮವನ್ನು ಕಳೆದುಕೊಂಡರು. ಆಗ ಬಿಜೆಪಿ ಶಾಸಕರ ವಿರುದ್ಧ ಮಾತನಾಡಿದ ನಿತೀಶ್‌, 'ನೀವು ಕುಡಿದಿದ್ದೀರಿ' ಎಂದು ಕಿಡಿಕಾರಿದರು.

 ಮದ್ಯದ ಕುರಿತು ಅರಿವು ಮೂಡಿಸುತ್ತೇವೆ

ಮದ್ಯದ ಕುರಿತು ಅರಿವು ಮೂಡಿಸುತ್ತೇವೆ

'ಈ ದುರಂತ ನಮಗೆ ನೋವು ತಂದಿದೆ. ಸಾವಿಗೀಡಾದ ಜನರ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತೇವೆ' ಎಂದು ಅವರು ಹೇಳಿದರು.

ಮದ್ಯದ ಕುರಿತು ಬೃಹತ್ ಸಾಮಾಜಿಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತೇವೆ ಎಂದೂ ನಿತೀಶ್‌ ಕುಮಾರ್‌ ಭರವಸೆ ನೀಡಿದರು.

ಯಾವುದೇ ನಿಷೇಧವಿಲ್ಲದಿದ್ದರೂ ಜನರು ವಿಷಕಾರಿ ಮದ್ಯದಿಂದ ಸಾಯುತ್ತಾರೆ ಎಂದು ಅವರು ವಾದಿಸಿದರು.

ವಿಷಕಾರಿ ಮದ್ಯ ಕುಡಿದು ಇತರ ರಾಜ್ಯಗಳಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಮತ್ತೆರಡು ನಿಷೇಧಿತ ರಾಜ್ಯಗಳಾದ ಗುಜರಾತ್ ಮತ್ತು ಪಂಜಾಬ್‌ನಲ್ಲಿ ಇದೇ ರೀತಿಯ ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು.

 ಮದ್ಯದ ಕುರಿತು ಬಾಪು ಏನು ಹೇಳಿದ್ದಾರೆ?

ಮದ್ಯದ ಕುರಿತು ಬಾಪು ಏನು ಹೇಳಿದ್ದಾರೆ?

'ಬಾಪು (ಮಹಾತ್ಮ ಗಾಂಧಿ) ಅವರು ಏನು ಹೇಳಿದ್ದಾರೆ (ಮದ್ಯ ನಿಷೇಧದ ವಿಚಾರವಾಗಿ), ಮತ್ತು ಪ್ರಪಂಚದಾದ್ಯಂತ ಏನು ಸಂಶೋಧನೆ ನಡೆಯುತ್ತಿದೆ- ಇವೆಲ್ಲವನ್ನೂ ಜನರ ಮನೆಗಳಿಗೆ ತಲುಪಿಸುತ್ತೇವೆ. ಮದ್ಯವು ಹೇಗೆ ಕೆಟ್ಟ ಚಟವಾಗಿದೆ, ಎಷ್ಟು ಜನರು ಸಾಯುತ್ತಾರೆ ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ. ಬಹಳ ಹಿಂದಿನಿಂದಲೂ ಜನರು ವಿಷಕಾರಿ (ನಕಲಿ) ಮದ್ಯದಿಂದ ಸಾಯುತ್ತಿದ್ದಾರೆ ಮತ್ತು ಇದು ದೇಶಾದ್ಯಂತ ನಡೆಯುತ್ತದೆ,' ಎಂದು ನಿತೀಶ್‌ ಕುಮಾರ್‌ ಖೇದ ವ್ಯಕ್ತಪಡಿಸಿದರು.

'ನಾವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದೇವೆ. ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ, ಮಾರಾಟವಾಗುವ ಮದ್ಯದಲ್ಲಿ ನಿಸ್ಸಂಶಯವಾಗಿ ಏನಾದರೂ ತಪ್ಪಾಗಿದೆ ಅಂತಲೇ ಅರ್ಥ' ಎಂದು ಅವರು ಹೇಳಿದರು.

 ನೀವು ಮದ್ಯವನ್ನು ಸೇವಿಸಬಾರದು

ನೀವು ಮದ್ಯವನ್ನು ಸೇವಿಸಬಾರದು

ಹಾಗೇ, ನೆನಪಿಡಿ, ನಿಮಗೆ ಸಿಕ್ಕಿರುವ ಮದ್ಯವನ್ನು ನೀವು ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಎಂದು ಜನರಿಗೆ ನಿತೀಶ್‌ ತಿಳಿಸಿದರು.

ಸಾವಿಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸುನೀಲ್ ಕುಮಾರ್ ಇದೇ ವೇಳೆ ಹೇಳಿದ್ದಾರೆ.

ಪ್ರಧಾನಿ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಮದ್ಯ ನಿಷೇಧವಿದೆ. ಹಾಗೇಯೇ ಬಿಹಾರ ಹಾಗೂ ಪಂಜಾಬ್‌ನಲ್ಲಿಯೂ ಮದ್ಯ ಮಾರಾಟ ಹಾಗೂ ಕುಡಿಯುವುದು ಕಾನೂನು ಬಾಹೀರವಾಗಿದೆ. ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಕೆಲವು ವಿನಾಯಿತಿಗಳೊಂದಿಗೆ ನಿಷೇಧ ನೀತಿಗಳನ್ನು ಹೊಂದಿವೆ.

ದಶಕಗಳಿಂದ, ದಕ್ಷಿಣದಲ್ಲಿ ಕೇರಳ ಮತ್ತು ಉತ್ತರದಲ್ಲಿ ಹರಿಯಾಣದಂತಹ ರಾಜ್ಯಗಳು ಮದ್ಯ ನೀತಿಯ ಅನುಷ್ಠಾನಕ್ಕಾಗಿ ಯತ್ನಿಸಿವೆ. ಆದರೆ, ಇದರ ಅನುಷ್ಠಾನವು ಕಷ್ಟಕರವಾದ ಕಾರಣ ನಿಷೇಧವನ್ನು ತೆಗೆದುಹಾಕಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+