ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಬೇಡ ಎಂದರೆ ಯಾರಿಗೆ ಒಲಿಯುತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಹೊಣೆಯನ್ನು ಹೊತ್ತುಕೊಳ್ಳುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಗೌಪ್ಯವಾಗಿಯೇ ಉಳಿದು ಹೋಗಿದೆ. ಕಾಂಗ್ರೆಸ್ ಅಧ್ಯಕ್ಷೀಯ ಕುರ್ಚಿಯಲ್ಲಿ ಕುಳಿತುಕೊಳ್ಳುವುದಕ್ಕೆ ರಾಹುಲ್ ಗಾಂಧಿ ನಿರಾಕರಿಸಿದರೆ ಮುಂದಿನ ಗತಿಯೇನು ಎಂಬುದಕ್ಕೆ ಉತ್ತರ ಸಿಕ್ಕಿದೆ.

ಕೇಂದ್ರದಲ್ಲಿ ಗಾಂಧಿ ಕುಟುಂಬದ ಜೊತೆಗೆ ಆಪ್ತವಾಗಿ ಗುರುತಿಸಿಕೊಂಡಿರುವ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಹಾಗೂ ಸೋನಿಯಾ ಗಾಂಧಿಯವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಶಶಿ ತರೂರ್ ಹೆಸರು ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿ ಇಲ್ಲದಿದ್ದರೆ ಈ ನಾಯಕರಿಗೆ ಸಾರಥ್ಯ ವಹಿಸುವ ಬಗ್ಗೆ ರಾಜಕೀಯ ಚರ್ಚೆಗಳು ಶುರು ಆಗಿವೆ.

ಕಾಂಗ್ರೆಸ್ ಸರ್ವೋಚ್ಛ ಕುರ್ಚಿಯಲ್ಲಿ ರಾಹುಲ್ ಬದಲಿಗೆ ಕರ್ಚೀಫ್ ಹಾಕಿದ ಲೀಡರ್ ಯಾರು!?ಕಾಂಗ್ರೆಸ್ ಸರ್ವೋಚ್ಛ ಕುರ್ಚಿಯಲ್ಲಿ ರಾಹುಲ್ ಬದಲಿಗೆ ಕರ್ಚೀಫ್ ಹಾಕಿದ ಲೀಡರ್ ಯಾರು!?

ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಅಕ್ಟೋಬರ್ 19ರಂದು ಹೊರ ಬೀಳಲಿದೆ. ಇನ್ನೊಂದು ತಿಂಗಳು ಬಾಕಿ ಉಳಿದಿರುವ ಚುನಾವಣೆಯಲ್ಲಿ ತಮಗಿಂತಲೂ ರಾಹುಲ್ ಗಾಂಧಿ ಸ್ಪರ್ಧಿಸುವುದೇ ಉತ್ತಮ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವೊಲಿಕೆ ಪ್ರಯತ್ನದಲ್ಲಿ ಇದ್ದಾರೆ. ಈ ಎಲ್ಲ ರಾಜಕೀಯ ಮೇಲಾಟಗಳ ಹೊರತಾಗಿಯೂ ಎಐಸಿಸಿ ಸಾರಥಿ ಆಗಲು ರಾಹುಲ್ ಗಾಂಧಿ ಒಪ್ಪಿಕೊಳ್ಳದಿದ್ದರೆ ಇಬ್ಬರು ನಾಯಕರ ನಡುವೆ ಪೈಪೋಟಿ ಹೇಗಿದೆ? ಕೇಂದ್ರೀಯ ಮಟ್ಟದಲ್ಲಿ ಇಬ್ಬರ ನಡುವಿನ ಅಂತಿಮ ಫಲಿತಾಂಶ ಏನಾಗಲಿದೆ? ಕೇಂದ್ರ ನಾಯಕರು ಯಾರಿಗೆ ಮಣೆ ಹಾಕುತ್ತಾರೆ ಎಂಬ ಎಲ್ಲ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಅಶೋಕ್ ಗೆಹ್ಲೋಟ್ ಮನವೊಲಿಕೆ ಮಂತ್ರ

ಅಶೋಕ್ ಗೆಹ್ಲೋಟ್ ಮನವೊಲಿಕೆ ಮಂತ್ರ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಮನವೊಲಿಸಲು ಅಶೋಕ್ ಗೆಹ್ಲೋಟ್ ಹೆಚ್ಚಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗೆಹ್ಲೋಟ್ ಇಂದಿಗೂ ಸಹ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಳ್ಳುವುದಕ್ಕೆ ಬಯಸುತ್ತಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಕಳೆದ ಕೆಲವು ವಾರಗಳ ಹಿಂದೆ ಗೆಹ್ಲೋಟ್ ಸೋನಿಯಾ ಗಾಂಧಿ ಅನ್ನು ರಾಷ್ಟ್ರ ರಾಜಧಾನಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ತದನಂತರ ಊಹಾಪೋಹಗಳು ಹುಟ್ಟಿಕೊಂಡಿದ್ದು, ಅಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರು ಪಕ್ಷದ ಮುಖ್ಯಸ್ಥರ ಆಯ್ಕೆಗಾಗಿ ನಡೆಸುವ ಚುನಾವಣೆಗೆ ಅಣಿಯಾಗುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಅಶೋಕ್ ಗೆಹ್ಲೋಟ್ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್?

ಅಶೋಕ್ ಗೆಹ್ಲೋಟ್ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್?

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯು ರಾಜಸ್ಥಾನದಲ್ಲಿನ ರಾಜಕೀಯದ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ. ಇಂಥ ಯಾವುದೇ ಪ್ರಭಾವ ಇರುವುದಿಲ್ಲ ಎನ್ನುತ್ತಲೇ ಹಾರಿಕೆ ಉತ್ತರವನ್ನು ನೀಡಿದರು. ಇದರ ಮಧ್ಯೆ ಅಶೋಕ್ ಗೆಹ್ಲೋಟ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಬೆಂಬಲವಾಗಿ ನಿಂತಿದ್ದಾರೆ ಎಂದು ಆಂತರಿಕ ವಲಯದಲ್ಲೇ ಚರ್ಚೆ ನಡೆಸುತ್ತಿದೆ.

ಶಶಿ ತರೂರ್ ಜಿ-23 ಅಭ್ಯರ್ಥಿಗಳ ಸಾರಥಿ?

ಶಶಿ ತರೂರ್ ಜಿ-23 ಅಭ್ಯರ್ಥಿಗಳ ಸಾರಥಿ?

ಕಾಂಗ್ರೆಸ್ಸಿನಲ್ಲೇ ರಾಹುಲ್ ಗಾಂಧಿಗೆ ಅಧ್ಯಕ್ಷರ ಪಟ್ಟ ಕಟ್ಟುವುದಕ್ಕೆ ಜಿ-23 ಎಂಬ ಗುಂಪು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ಅದೇ ಜಿ-23 ಗುಂಪಿನ ಪರವಾಗಿ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಭ್ಯರ್ಥಿಯಾಗಿ ಶಶಿ ತರೂರ್ ಅಖಾಡಕ್ಕೆ ಇಳಿಯುವ ಸೂಚನೆಗಳು ಸಿಗುತ್ತಿವೆ. ಹಲವಾರು ಸಂಸದರ ಬೆಂಬಲ ಗಳಿಸಿರುವ, ಅವರ ಜೊತೆಗೆ ಇತರ ಐದು ಕಾಂಗ್ರೆಸ್ ಸಂಸದರು ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಚುನಾವಣಾ ಪಾತ್ರಗಳು ಎಲ್ಲರಿಗೂ ಲಭ್ಯವಾಗಬೇಕು ಎಂದು ಒತ್ತಾಯಿಸಿದರು. ಆದಾಗ್ಯೂ, ಇದನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಮಿಸ್ತ್ರಿ ಪ್ರತಿಕ್ರಿಯಿಸಿದ್ದರು, ಆದರೆ ಸ್ಪರ್ಧಿಸಲು ಸಿದ್ಧರಿರುವ ಯಾರಾದರೂ ಸೆಪ್ಟೆಂಬರ್ 20 ರಿಂದ ತಮ್ಮ ಕಚೇರಿಯಿಂದ ಚುನಾವಣಾ ಪಾತ್ರವನ್ನು ಪ್ರವೇಶಿಸಬಹುದು.

ಶಶಿ ತರೂರ್ ಮತ್ತು ಗೆಹ್ಲೋಟ್ ಮಧ್ಯೆ ಪೈಪೋಟಿ

ಶಶಿ ತರೂರ್ ಮತ್ತು ಗೆಹ್ಲೋಟ್ ಮಧ್ಯೆ ಪೈಪೋಟಿ

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ನಡುವೆ ತೀವ್ರ ಪೈಪೋಟಿ ನಡೆಯುವ ಲಕ್ಷಣ ಗೋಚರಿಸುತ್ತಿದೆ. ಸೋಮವಾರ ಸಂಜೆ ಶಶಿ ತರೂರ್ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೆಪ್ಟೆಂಬರ್ 24 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ರಂದು ಮುಕ್ತಾಯವಾಗಲಿದೆ.
ಅಧ್ಯಕ್ಷ ಸ್ಥಾನದ ರೇಸ್‌ಗೆ ಗಾಂಧಿ ಕುಟುಂಬ ಪ್ರವೇಶಿಸಲು ನಿರಾಕರಿಸಿದ ನಂತರ, ಗೆಹ್ಲೋಟ್ ಮತ್ತು ಮುಕುಲ್ ವಾಸ್ನಿಕ್, ಕೆ ಸಿ ವೇಣುಗೋಪಾಲ್, ಕುಮಾರಿ ಸೆಲ್ಜಾ, ಮಲಿಕಾರ್ಜುನ್ ಖರ್ಗೆ, ಭೂಪೇಶ್ ಬಾಘೇಲ್ ಅವರಂತಹ ನಾಯಕರನ್ನು ಸಂಭಾವ್ಯ ಆಯ್ಕೆಗಳೆಂದು ಪರಿಗಣಿಸಲಾಗಿದೆ. ಕಾಂಗ್ರೆಸ್ ಪಕ್ಷವು ಆಗಸ್ಟ್ 20 ರೊಳಗೆ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಪಕ್ಷವು ಘೋಷಿಸಿತ್ತು. ಆದರೆ, ವಯನಾಡ್ ಸಂಸದ ರಾಹುಲ್ ಗಾಂಧಿ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

English summary
If Rahul Gandhi declines post; Shashi Tharoor and Ashok Gehlot emerge probables for Congress president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X