ಹೆದ್ದಾರಿಯಲ್ಲಿ ವಾಯುಪಡೆ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್!
ನವದೆಹಲಿ, ಜೂನ್ 26 : ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಯಾವುದೇ ಅಪಾಯವಿಲ್ಲದೇ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿದಿದೆ.
Recommended Video
ಶುಕ್ರವಾರ ಮಧ್ಯಾಹ್ನ ಹರ್ಯಾಣದ ಸೋನೆಪತ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ವಾಯುಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಇದಾಗಿದೆ. ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ದೋಷ ಕಾಣಿಸಿಕೊಂಡ ಬಳಿಕ ಭೂ ಸ್ಪರ್ಶ ಮಾಡಲಾಗಿದೆ.

ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣವೇನು? ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಭೂ ಸ್ಪರ್ಶ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಚೇತಕ್ ಹೆಲಿಕಾಪ್ಟರ್ ಹಾರಾಟ ನಡೆಸುವಾಗ ಪೈಲೆಟ್ ಮಾತ್ರ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿಯಿಂದ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಹೆಲಿಕಾಪ್ಟರ್ ಪರಿಶೀಲನೆ ನಡೆಸುತ್ತಿದ್ದಾರೆ.
An Indian Air Force (IAF) Cheetah helicopter made an emergency landing on a highway in Sonepat district of Haryana earlier today. More details awaited: IAF officials pic.twitter.com/VB1WCZj9GC
— ANI (@ANI) June 26, 2020
2020ರ ಫೆಬ್ರವರಿಯಲ್ಲಿ ಚಂಡೀಗಢದಲ್ಲಿ ಚೇತಕ್ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿತ್ತು. 2018ರಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ಇದೇ ಮಾದರಿಯ ಹೆಲಿಕಾಪ್ಟರ್ ಅರಕೋಣಂ ಐಎನ್‌ಎಸ್ ನೌಕಾನೆಲೆಯಲ್ಲಿ ಪತನಗೊಂಡಿತ್ತು.












Click it and Unblock the Notifications