ಆಕ್ಸಿಸ್ ಬ್ಯಾಂಕ್ ನ 20 ನಕಲಿ ಖಾತೇಲಿ 60 ಕೋಟಿ ಪತ್ತೆ

Posted By:
Subscribe to Oneindia Kannada

ನೋಯಿಡಾ, ಡಿಸೆಂಬರ್ 15: ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ನಡೆದಿರುವ ಮತ್ತೊಂದು ಹಗರಣ ಬೀದಿಗೆ ಬಂದಿದೆ. ಇಪ್ಪತ್ತು ನಕಲಿ ಖಾತೆಗಳನ್ನು ಮಾಡಿ, ಅದರಲ್ಲಿ ಹಾಕಿದ್ದ 60 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ಈ ಹಗರಣ ಪತ್ತೆಯಾಗಿರುವುದು ಗುರುವಾರ, ಆಕ್ಸಿಸ್ ಬ್ಯಾಂಕ್ ನ ನೋಯಿಡಾ ಶಾಖೆಯಲ್ಲಿ.

ಈ ಖಾತೆಗಳಲ್ಲಿ ಕ್ರಮಬದ್ಧವಾಗಿ ಹಣ ತುಂಬಲಾಗಿದೆ. ಆದರೆ ಈ ಖಾತೆಗಳು ಇದ್ದಿದ್ದು ಕಡಿಮೆ ಆದಾಯದ ನೌಕರರು ಹಾಗೂ ಕೆಲಸಗಾರರ ಹೆಸರಿನಲ್ಲಿ. ಈ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಗೆ ಗುಮಾನಿ ಬಂದಿದ್ದು ಕೂಡ ಆಸಕ್ತಿಕರವಾಗಿದೆ. ನೋಯಿಡಾದ ಆಭರಣ ವ್ಯಾಪಾರಿಯೊಬ್ಬರು ನವೆಂಬರ್ 8ರ ನಂತರ 600 ಕೋಟಿ ಮೊತ್ತದ ಚಿನ್ನ ಮಾರಿದ್ದರು. ಆ ಹಣವನ್ನು ಇದೇ ನೋಯಿಡಾ ಶಾಖೆಯಲ್ಲಿ ತುಂಬಿದ್ದರು.[ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ]

I-T raids Axis Bank: over 60 crore found in 20 fake accounts

ಸಾಂದರ್ಭಿಕ ಚಿತ್ರ

ಮಧ್ಯಾಹ್ನ 12.30ರ ವೇಳೆಯಲ್ಲೂ ಪರಿಶೀಲನೆ ಮುಂದುವರಿದಿತ್ತು. ಬ್ಯಾಂಕ್ ಶಾಖೆ ಹೊರಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ಹಾಕಲಾಗಿತ್ತು. ಕೆಲ ದಿನಗಳ ಹಿಂದೆ ಚಾಂದಿನಿ ಚೌಕ್ ನ ಆಕ್ಸಿಸ್ ಬ್ಯಾಂಕ್ ಶಾಖೆಯ ನಲವತ್ನಾಲ್ಕು ಅನುಮಾನಾಸ್ಪದ ಖಾತೆಗಳಲ್ಲಿ ನೂರು ಕೋಟಿ ರುಪಾಯಿ ಪತ್ತೆ ಹಚ್ಚಲಾಗಿತ್ತು.[ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!]

ನೋಟು ಬದಲಾವಣೆ ವೇಳೆ ಆಕ್ಸಿಸ್ ಬ್ಯಾಂಕ್ ನಲ್ಲಿ ಪದೇ ಪದೇ ಇಂಥ ನಿಯಮಬಾಹಿರ ಸಂಗತಿಗಳು ನಡೆಯುತ್ತಿರುವುದರಿಂದ, 'ಎಲ್ಲವೂ ಸರಿಯಾಗಿ ಇರೋ ಹಾಗೆ ನೋಡಿಕೊಳ್ಳಿ' ಎಂದು ಸರಕಾರ ಆ ಬ್ಯಾಂಕ್ ಗೆ ಎಚ್ಚರಿಕೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twenty fake accounts with deposits amounting to as much as Rs 60 crores were uncovered during an I-T department raid at an Axis Bank branch in Noida on Thursday.
Please Wait while comments are loading...