ನನ್ನೊಳಗಿನ ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ಪತ್ರಕರ್ತರಿಗೆ ರಾಹುಲ್ ಗಾಂಧಿ ಹೇಳಿದ್ದು ಯಾಕೆ?
ನವದೆಹಲಿ, ಜ. 09: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಎಂದೇ ಬಿಂಬಿಸಲಾಗುತ್ತಿದೆ. ಎಲ್ಲಾ ಕಡೆಯೂ ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆ ಎಂದೇ ಗುರುತಿಸಿಕೊಳ್ಳುತ್ತಿದೆ. ಇದೇ ವೇಳೆ ಮಾತನಾಡಿರುವ ಅವರು, ನನ್ನೋಳಗಿನ ರಾಹುಲ್ ಗಾಂಧಿ ಅವರನ್ನು ಕೊಂದಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
'ದೇಶವನ್ನು ಐಕ್ಯತೆ ಕಡೆಗೆ ಕೊಂಡೋಯ್ಯವ ಈ ಭಾರತ್ ಜೋಡೋ ಯಾತ್ರೆಯೂ ಅವರ ಯಾತ್ರೆಯಾಗಬಾರದು ಹೀಗಾಗಿ ನಾನು ನನ್ನೋಳಗಿನ ರಾಹುಲ್ ಗಾಂಧಿ ಅವರನ್ನು ಕೊಂದಿದ್ದೇನೆ. ನಾನು ಇಮೇಜ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಎಂದು ಹರಿಯಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
"ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನಾನು ಅವರನ್ನು ಕೊಂದಿದ್ದೇನೆ. ಅವರು ಎಲ್ಲಿಯೂ. ನನ್ನ ಮನಸ್ಸಿನಲ್ಲಿಯೂ ಇಲ್ಲ. ಅವರು ನನ್ನ ತಲೆ, ಮನಸ್ಸನಿಂದ ಹೊರಟು ಹೋಗಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಹರಿಯಾಣದಲ್ಲಿ ತಿಳಿಸಿದ್ದಾರೆ.

ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ಹೇಗೆ ಬದಲಾಯಿಸಿತು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, "ನೀವು ನೋಡುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ನೀವು ಅವರನ್ನು ನೋಡಬಹುದು. ಆದರೆ, ನಿಮಗೆ ಅದು ಅರ್ಥವಾಗುತ್ತಿಲ್ಲ. ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿ. ಭಗವಾನ್ ಶಿವನ ಬಗ್ಗೆ ಓದಿ, ನಿಮಗೆ ಅರ್ಥವಾಗುತ್ತದೆ. ಶಾಕ್ ಆಗಬೇಡಿ. ರಾಹುಲ್ ಗಾಂಧಿ ನಿಮ್ಮ ತಲೆಯಲ್ಲಿದ್ದಾರೆ, ನನ್ನ ತಲೆಯಲ್ಲಲ್ಲ, ಅವರು ಬಿಜೆಪಿಗರ ತಲೆಯಲ್ಲಿದ್ದಾರೆ" ಎಂದಿದ್ದಾರೆ.
ಮುಂದುವರಿದು ನನಗೆ ಯಾವ ಇಮೇಜ್ ಬಗ್ಗೆಯೂ ಚಿಂತೆಯಿಲ್ಲ. ಇಮೇಜ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ನನ್ನ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಇಮೇಜ್ ನೀಡಿ , ಅದರ ಪರಿಣಾಮ ನನ್ನ ಮೇಲಾಗುವುದಿಲ್ಲ ಎಂದು ಹೇಳಿದ್ದಾರೆ.
ನವೆಂಬರ್‌ನಲ್ಲಿಯೂ ಈ ಬಗ್ಗೆ ಮಾತನಾಡಿದ್ದ ಅವರು, "ನಾನು ರಾಹುಲ್ ಗಾಂಧಿಯನ್ನು ವರ್ಷಗಳ ಹಿಂದೆ ಬಿಟ್ಟುಬಿಟ್ಟೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ, ನನ್ನದಲ್ಲ. ಅದನ್ನು ಅರ್ಥಮಾಡಿಕೊಳ್ಳಿ, ಅದು ನಿಮಗೆ ಒಳ್ಳೆಯದು" ಎಂದಿದ್ದರು.
ಇನ್ನು, ಈ ಯಾತ್ರೆಯೂ ಮುಂಬರುವ ರಾಷ್ಟ್ರೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಅಲ್ಲ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಿದೆ. "ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಮಾಡುತ್ತಿಲ್ಲ. ಇದು ಸೈದ್ಧಾಂತಿಕ ಯಾತ್ರೆಯಾಗಿದ್ದು, ಇದರ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಯಾತ್ರೆಯಲ್ಲ" ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.












Click it and Unblock the Notifications