ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಬೇಕಾದ್ದು ಬರೆದುಕೊಳ್ಳಿ : ಸಿಬಿಐ ನಿರ್ದೇಶಕ ಸಿನ್ಹಾ

By Mahesh
|
Google Oneindia Kannada News

ನವದೆಹಲಿ, ಡಿ.2: "ನಾನೇನು ಒಳ್ಳೆ ಕೆಲಸ ಮಾಡಿಲ್ಲ, ನಿವೃತ್ತಿ ಬಗ್ಗೆ ನಾನೇನು ಹೇಳಲಾರೆ, ನಿಮಗೆ ಬೇಕಾದ್ದು ಬರೆದುಕೊಳ್ಳಿ" ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಸಿನ್ಹಾ ಅವರ ನಿರ್ದೇಶಕ ಸ್ಥಾನದ ಅವಧಿ ಮಂಗಳವಾರಕ್ಕೆ ಅಂತ್ಯಗೊಳ್ಳಲಿದೆ.

ತಮ್ಮ ಅಧಿಕಾರ ಅವಧಿಯಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಗೆ ಈಡಾಗಿ ಮುಜುಗರಕ್ಕೆ ಒಳಗಾಗಿದ್ದ ಸಿಬಿಐ ನಿರ್ದೇಶಕ ರಂಜಿತ್‌ಸಿನ್ಹಾ ಅವರ ಸ್ಥಾನಕ್ಕೆ ಹೊಸ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ.

ದೇಶದ ಅತ್ಯಂತ ಬಲಿಷ್ಠ ಹಾಗೂ ದಕ್ಷ ಸಂಸ್ಥೆಯೆಂದೇ ಗುರುತಿಸಿಕೊಂಡಿರುವ ಸಿಬಿಐ ನಿರ್ದೇಶಕರಾದ ಮೇಲೂ ವಿವಾದದಿಂದ ದೂರ ಉಳಿದಿರಲಿಲ್ಲ. 2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣದಲ್ಲಿ ಭಾಗಿಯಾದ ಕೆಲವು ಆರೋಪಿಗಳು ಅವರ ಮನೆಗೆ ಭೇಟಿ ನೀಡಿರುವುದು ಸಂದರ್ಶನದ ಪುಸ್ತಕದಲ್ಲಿ ದಾಖಲಾಗಿತ್ತು. [ಗಾಲಿ ರೆಡ್ಡಿ ಆಪ್ತ, ಸಿಬಿಐ ನಿರ್ದೇಶಕರ ಭೇಟಿ ಏಕೆ?]

2ಜಿ ತನಿಖೆಯಿಂದ ನೀವು ದೂರ ಉಳಿಯಬೇಕೆಂದು ಸಿನ್ಹಾಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದರಿಂದ ಸಿನ್ಹಾ ಅವರು ತೀವ್ರ ಮುಜುಗರಕ್ಕೀಡಾಗಿದ್ದರು.

I have done no good work, says Ranjit Sinha on his tenure as CBI Director

ಸಿಎಜಿ ವಿನೋದ್ ರೈ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿಸಿ ಪಾರಖ್ ಅವರಂತೆ ನೀವು ಕೂಡಾ ನಿವೃತ್ತಿ ನಂತರ ಪುಸ್ತಕ ಬರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, 'ನಾನು ಏನು ಮಾಡಬೇಕು ಅದನ್ನು ಮಾಡುತ್ತೇನೆ, ಅವರನ್ನು ಹಿಂಬಾಲಿಸುವ ಅಗತ್ಯವಿಲ್ಲ' ಎಂದಿದ್ದಾರೆ.

1974ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಸೇರ್ಪಡೆಗೊಂಡ ರಂಜಿತ್‌ಸಿನ್ಹಾ ಐಟಿಬಿಪಿ, ರೈಲ್ವೆ ಬೋರ್ಡ್ ಸೇರಿದಂತೆ ದೇಶದ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಸಾರ್ವಜನಿಕ ವಲಯದ ಬ್ಯಾಂಕಿನ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಸೆನ್ಸಾರ್ ಬೋರ್ಡ್ ನ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. [ಕರ್ನಾಟಕ ಕೇಡರ್ ಅಧಿಕಾರಿ ಕೈಗೆ 2ಜಿ ಹಗರಣ]

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಆರೋಪಿಯಾಗಿದ್ದ ಮೇವು ಹಗರಣದ ತನಿಖೆ ನಡೆಸಿದ್ದ ಸಿನ್ಹಾ ಅವರು ಕೊನೆಗೆ ಲಾಲೂ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ತನಿಖೆಯನ್ನು ದಿಕ್ಕು ತಪ್ಪಿಸಿದರೆಂಬ ಆರೋಪವನ್ನು ಹೊರಬೇಕಾಯಿತು. ಸುಮಾರು 38 ವರ್ಷಗಳ ಕರ್ತವ್ಯ ಪಾಲನೆ ನಂತರ ಸಿನ್ಹಾ ಅವರು ನಿವೃತ್ತಿಯಾಗುತ್ತಿದ್ದಾರೆ. (ಪಿಟಿಐ)

English summary
"I have done no good work," was how a visibly peeved Central Bureau of Investigation Director Ranjit Sinha reacted with sarcasm on his two years at the agency's helm, a tumultuous tenure that comes to an end on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X