ತನ್ನ ಬಳಿ ಕೆಟಿಎಂ 390 ಬೈಕ್‌ ಇದೆ, ಆದರೆ ನನ್ನ ಭದ್ರತಾ ಸಿಬ್ಬಂದಿ ಅದನ್ನು ಓಡಿಸಲು ಬಿಡಲ್ಲ: ರಾಹುಲ್‌ ಗಾಂಧಿ

ನವದೆಹಲಿ, ಜುಲೈ 10: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭೇಟಿ ನೀಡಿದ್ದ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿರುವ ಸೂಪರ್ ಮೆಕ್ಯಾನಿಕ್ಸ್ ಶಾಪ್‌ನ ಮೆಕಾನಿಕ್‌ಗಳ ಜೊತೆಗಿನ ಸಂವಾದದ ವೀಡಿಯೊವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಬೈಕ್ ಸರ್ವಿಸ್ ಮಾಡುವ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯುತ್ತಿರುವುದು ಕಂಡು ಬಂದಿದೆ.

ವಿಡಿಯೋದಲ್ಲಿ ರಾಹುಲ್‌ ಗಾಂಧಿ "ನಮಸ್ಕಾರ್, ಕೈಸೇ ಹೈ ಆಪ್ (ಹಲೋ, ತಾವು ಹೇಗಿದ್ದೀರಿ)?" ಮಾರುಕಟ್ಟೆಯ ಕಿರಿದಾದ ಹಾದಿಯಲ್ಲಿ ಸಾಗುತ್ತಿರುವುದನ್ನು ಕಂಡ ಹಲವಾರು ದಾರಿಹೋಕರಿಗೆ ರಾಹುಲ್ ಗಾಂಧಿ ಹೀಗೆ ಕೇಳಿದರು. ಈ ವೇಳೆ ರಾಹುಲ್ ಗಾಂಧಿ ತುಮ್ ಸಂಘರ್ಷ್ ಕರೋ, ಹಮ್ ತುಮ್ಹಾರೆ ಸಾಥ್ ಹೇ (ನೀವು ಹೋರಾಟ ಮುಂದುವರಿಸಿ, ನಾವು ನಿಮ್ಮೊಂದಿಗಿದ್ದೇವೆ)' ಎಂದು ವ್ಯಕ್ತಿಯೊಬ್ಬರು ಘೋಷಣೆ ಕೂಗಿದಾಗ ಘೋಷಣೆಗಳನ್ನು ಕೂಗಬೇಡಿ ಎಂದು ಮನವಿ ಮಾಡಿದರು.

Congress leader Rahul Gandhi

53 ವರ್ಷದ ರಾಹುಲ್‌ ಗಾಂಧಿ ತಮ್ಮ 12 ನಿಮಿಷಗಳ ಅವಧಿಯ ವೀಡಿಯೊದಲ್ಲಿ ತನ್ನ ಬಳಿ KTM 390 ಮೋಟಾರ್‌ಸೈಕಲ್ ಇದೆ. ಆದರೆ ಅದನ್ನು ಬಳಸದೆ ನಿಲ್ಲಿಸಲಾಗಿದೆ. ನನ್ನ ಬಳಿ KTM 390 ಇದೆ ಆದರೆ ನನ್ನ ಭದ್ರತಾ ಸಿಬ್ಬಂದಿ ಅದನ್ನು ಬಳಸಲು ಬಿಡದ ಕಾರಣ ಅದು ಬಳಕೆಯಾಗದೆ ಉಳಿದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಮೆಕ್ಯಾನಿಕ್‌ಗೆ ಒಂದು ದಿನ ನಡೆಯಲಿದೆ ಎಂದು ರಾಹುಲ್‌ ಉತ್ತರವಾಗಿತ್ತು. ಬದಲಿಗೆ ರಾಹುಲ್‌ ಅವರು ಮೆಕ್ಯಾನಿಕ್‌ಗೆ ನೀವು ಯಾವಾಗ ಮದುವೆಯಾಗುತ್ತೀರಿ? ಎಂದು ಮರು ಪ್ರಶ್ನೆ ಮಾಡಿದರು. ಅದಕ್ಕೆ ಮೆಕಾನಿಕ್‌ ನಾನು ಸಾಕಷ್ಟು ಹಣವನ್ನು ಸಂಪಾದಿಸಿದಾಗ ಎಂದು ಆತ ಉತ್ತರಿಸಿದನು.

Congress leader Rahul Gandhi

ಭಾರತದ ಆಟೋ ಮೊಬೈಲ್ ಉದ್ಯಮವನ್ನು ಬಲಪಡಿಸಲು ಭಾರತದ ಯಂತ್ರಶಾಸ್ತ್ರವನ್ನು ಸಶಕ್ತಗೊಳಿಸುವ ಅವಶ್ಯಕತೆಯಿದೆ ಎಂದರು. ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7, 2022 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ತಮ್ಮ ಭಾರತ್ ಜೋಡೋ ಯಾತ್ರೆಯ ಮುಂದುವರಿದ ಭಾಗವಾಗಿ ಹಲವಾರು ಜನರನ್ನು ಭೇಟಿಯಾಗುತ್ತಿದ್ದು, ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಕಳೆದ ತಿಂಗಳು ಅವರು ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು. ಅವರು ಯುಎಸ್‌ನಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನವನ್ನು ತಿಳಿದುಕೊಳ್ಳಲು ಚಾಲಕನೊಂದಿಗೆ ಸಂವಾದ ನಡೆಸಿದರು. ಭಾರತದಲ್ಲಿಯೂ ಟ್ರಕ್ ಚಾಲಕರ ಸಮಸ್ಯೆಗಳನ್ನು ಆಲಿಸಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ಸವಾರಿ ಮಾಡಿದ ಕೆಲವು ದಿನಗಳ ನಂತರ ಅವರು ಪ್ರಯಾಣ ಮಾಡಿದ್ದರು.

ಭಾರತ್ ಜೋಡೋ ಯಾತ್ರೆಯು ಭಾರತೀಯರ ಎಲ್ಲಾ ವರ್ಗಗಳ ಧ್ವನಿಯನ್ನು ಆಲಿಸುವ ಮೂಲಕ ವಿಶೇಷವಾಗಿ ಅವರ ಸಾಧನೆಗಳು ಮತ್ತು ಶ್ರಮದ ಕಥೆಗಳನ್ನು ಹೇಳಲು ಸಾಧ್ಯವಾಗದವರನ್ನು ಅರಿಯುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+